ಶಿವಮೊಗ್ಗ: ಈಜಲು ತೆರಳಿದ ಯುವಕ ನೀರುಪಾಲು
ಶಿವಮೊಗ್ಗ, ಸೆ. 16: ಕೆರೆಯಲ್ಲಿ ಈಜಾಡಲು ತೆರಳಿದ ಯುವಕನೋರ್ವ ನೀರುಪಾಲಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಚೋರಡಿ ಸಮೀಪದ ಹಾಲ್ಕುಣಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಅದೇ ಗ್ರಾಮದ ಸಂದೇಶ್ (22) ನೀರುಪಾಲಾದ ಯುವಕ ಎಂದು ಗುರುತಿಸಲಾಗಿದೆ. ಕೆರೆಯಲ್ಲಿ ಈಜಾಡುವ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story