ಮದುವೆ ಮನೆಯಲ್ಲಿ ‘ಉಡುಗೊರೆ’ ವಸ್ತುವಾದ ಪೆಟ್ರೋಲ್
ಕುಡ್ಡಲೋರ್(ತಮಿಳುನಾಡು), ಸೆ.16: ದಿನದಿಂದ ದಿನಕ್ಕೆ ಏರುತ್ತಿರುವ ಪೆಟ್ರೋಲ್ ಈಗ ಸುಲಭಕ್ಕೆ ಕೈಗೆಟುಕದ ದುಬಾರಿ ವಸ್ತುವಾಗಿದೆ. ಈಗ ಪೆಟ್ರೋಲ್ ‘ಮದುವೆಯ ಗಿಫ್’್ಟ ಆಗಿಯೂ ಪರಿವರ್ತಿತವಾಗಿದೆ. ತಮಿಳುನಾಡಿನ ವ್ಯಕ್ತಿಯೊಬ್ಬನ ವಿವಾಹದಲ್ಲಿ ಆತನ ಸ್ನೇಹಿತರು ಐದು ಲೀಟರ್ ಪೆಟ್ರೋಲ್ನ್ನು ಉಡುಗೊರೆಯಾಗಿ ನೀಡಿ ಅಚ್ಚರಿಗೊಳಿಸಿದರು.
ವಧು-ವರರು ಮದುವೆ ಹಾಲ್ನಲ್ಲಿ ಅತಿಥಿಗಳನ್ನು ಸ್ವಾಗತಿಸುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ವರನ ಸ್ನೇಹಿತರ ಗುಂಪು ಐದು ಲೀಟರ್ ಪೆಟ್ರೋಲ್ನ್ನು ಉಡುಗೊರೆಯಾಗಿ ನೀಡಿತು ಎಂದು ತಮಿಳು ಟಿವಿ ವಾಹಿನಿಯೊಂದು ವರದಿಯಾಗಿದೆ.
ಪೆಟ್ರೋಲ್ನ್ನು ಉಡುಗೊರೆಯಾಗಿ ನೀಡಿದ್ದನ್ನು ನೋಡಿದ ಎಲ್ಲರ ಮುಖದಲ್ಲಿ ನಗು ಅರಳಿತು. ವರನು ತನ್ನ ಸ್ನೇಹಿತರಿಂದ ವಿಚಿತ್ರ ಗಿಫ್ಟ್ನ್ನು ಪಡೆಯುತ್ತಿರುವ ದೃಶ್ಯವು ಟಿವಿ ಚಾನಲ್ಗಳಲ್ಲಿ ಪ್ರಸಾರ ಮಾಡಲಾಗಿದೆ.
ಪೆಟ್ರೋಲ್ ದರ ತಮಿಳುನಾಡಿನಲ್ಲಿ ಪ್ರತಿ ಲೀಟರ್ಗೆ 85.15 ರೂ.ಗೆ ಏರಿಕೆಯಾಗಿದೆ. ಈಗ ಜನಸಾಮಾನ್ಯರ ನಿದ್ದೆಗೆಡಿಸಿರುವ ಪೆಟ್ರೋಲ್ನ್ನು ಉಡುಗೊರೆ ನೀಡಿರುವ ವರನ ಸ್ನೇಹಿತರು ದೇಶದಲ್ಲಿ ಪೆಟ್ರೋಲ್ ಅಮೂಲ್ಯ ವಸ್ತುವಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ.