ಮಂಡ್ಯ: ಚರಂಡಿಯಲ್ಲಿ ವ್ಯಕ್ತಿಯ ಶವ ಪತ್ತೆ
ಮಂಡ್ಯ, ಸೆ.17: ಗಾಂಧಿನಗರದ ಕಿತ್ತೂರು ಚೆನ್ನಮ್ಮ ವೃತ್ತದ ಸಮೀಪದ ಚರಂಡಿಯೊಂದರಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಗಾಂಧಿನಗರ 4ನೇ ಕ್ರಾಸ್‍ನ ನಿವಾಸಿ ಶಿವಪ್ರಕಾಶ್(64) ಮೃತಪಟ್ಟ ವ್ಯಕ್ತಿ.
ಶಿವಪ್ರಕಾಶ್ ಮೂರ್ಛೆ ರೋಗಿಯಾಗಿದ್ದು, ಆಗಾಗ್ಗೆ ಪ್ರಜ್ಞೆ ತಪ್ಪುತ್ತಿದ್ದ ಎನ್ನಲಾಗಿದ್ದು, ಭಾನುವಾರ ತಡರಾತ್ರಿ ಮೂತ್ರ ವಿಸರ್ಜನೆಗಾಗಿ ಚರಂಡಿ ಬಳಿ ಹೋಗಿದ್ದಾಗ ಪ್ರಜ್ಞೆ ತಪ್ಪಿ ಚರಂಡಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಸೋಮವಾರ ಬೆಳಗ್ಗೆ ಚರಂಡಿಯಲ್ಲಿ ಮೃತದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಶ್ಚಿಮ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣದ ದಾಖಲಿಸಿದ್ದಾರೆ.
Next Story