ವೃದ್ಧ ನಾಪತ್ತೆ

ಮಂಗಳೂರು, ಸೆ.18: ಕೊಪ್ಪಲ ಬಜಾಲ್ ಕಾನೆ ಕರಿಯ ನಿವಾಸಿ, 85ರ ವೃದ್ಧ ತಿಮ್ಮಯ್ಯ ನಾಯ್ಕ ಎಂಬವರು ಮನೆಯಿಂದ ಹೊರಗೆ ಹೋದವರು ಸಂಜೆಯಾದರೂ ಮರಳಿ ಬಾರದೆ ನಾಪತ್ತೆಯಾದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಂದಿನಂತೆ ಬೆಳಗ್ಗೆ 9ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದು, ಸಂಜೆಯವರೆಗೆ ಮನೆಗೆ ಬರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದ ಕಾರಣ ಕಂಕನಾಡಿ ನಗರ ಠಾಣೆಗೆ ದೂರು ನೀಡಲಾಗಿದೆ.
5.8 ಅಡಿ ಎತ್ತರದ ಕಪ್ಪು ಮೈ ಬಣ್ಣ ಹೊಂದಿದ ಸಾಧಾರಣ ಮೈಕಟ್ಟು ಇರುವ ನಸು ನೀಲಿ ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಅಂಗಿ ಧರಿಸಿರುವ ತುಳು ಭಾಷೆ ಮಾತನಾಡುವ ಇವರು ಬಂಗಾರದ ಟೆಕ್ಕಿ ಧರಿಸಿದ್ದಾರೆ. ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಕಂಕನಾಡಿ ನಗರ ಪೊಲೀಸರು 0824-2220529 ಅಥವಾ ಕಂಟ್ರೋಲ್ ರೂಂ 100ಕ್ಕೆ ಮಾಹಿತಿ ನೀಡಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





