Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ‘‘ಯಾವನೇ ಒಬ್ಬ ಮುಸ್ಲಿಮ್ ಹೆಸರು ನಮಗೆ...

‘‘ಯಾವನೇ ಒಬ್ಬ ಮುಸ್ಲಿಮ್ ಹೆಸರು ನಮಗೆ ನೀಡಿ’’

ತನಿಖಾ ದಳದ ಅಧಿಕಾರಿಗಳಿಂದ ಸುಳ್ಳು ಹೇಳಿಕೆಗೆ ಒತ್ತಾಯ

ವಾರ್ತಾಭಾರತಿವಾರ್ತಾಭಾರತಿ18 Sept 2018 11:58 PM IST
share
‘‘ಯಾವನೇ ಒಬ್ಬ ಮುಸ್ಲಿಮ್ ಹೆಸರು ನಮಗೆ ನೀಡಿ’’

ಭಾಗ-1

ಪಾಕಿಸ್ತಾನಕ್ಕೆ ರಾಕೆಟ್ ತಂತ್ರಜ್ಞಾನವನ್ನು ಹಸ್ತಾಂತರಿಸಲು ಪ್ರಯತ್ನಿಸಿದ್ದರೆಂಬ ಸುಳ್ಳು ಆರೋಪದಲ್ಲಿ ಬಂಧಿಸಲ್ಪಟ್ಟು ಇತ್ತೀಚೆಗೆ ದೋಷಮುಕ್ತರಾದ ಮಾಜಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ತಾನು ಅನುಭವಿಸಿದ ಯಾತನೆಯ ಬಗ್ಗೆ ಪತ್ರಕರ್ತ ಅರುಣ್ ರಾಮ್  ಜೊತೆ ತಾನು ಬರೆದಿರುವ ಪುಸ್ತಕ ‘ರೆಡಿ ಟು ಫೈರ್: ಹೌ ಇಂಡಿಯಾ ಆ್ಯಂಡ್ ಐ ಸರ್ವೈವ್ಡ್ ದಿ ಇಸ್ರೋ ಸ್ಪೈ ಕೇಸ್’ನಲ್ಲಿ ಹೇಳಿಕೊಂಡಿದ್ದಾರೆ. ಅದರ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ.

ನಿಮಗೆ ತಿಳಿದಿಲ್ಲವೇ? ಎಂದ ಆತ ದಿಗ್ಗನೆ ಎದ್ದು ನಿಂತ. ಆನಂತರ ಮತ್ತೆ ಕುಳಿತುಕೊಂಡ. ‘‘ನೀವು ದೇಶದ ರಹಸ್ಯಗಳನ್ನು, ರಾಕೆಟ್ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಿರುವುದಕ್ಕೆ ನಮ್ಮ ಬಳಿ ಪುರಾವೆಯಿದೆ. ಈಗ ನಾವು ಅದನ್ನು ನಿಮ್ಮ ಬಾಯಿಯಿಂದಲೇ ಕೇಳಲಿಚ್ಛಿಸುತ್ತೇವೆ. ನೀವು ಅದನ್ನು ಹೇಗೆ ಮಾಡಿದ್ದೀರಿ ಎಂದು ನಮಗೆ ಹೇಳಿ. ಅದಕ್ಕಾಗಿ ಎಷ್ಟೊಂದು ಹೊಲಸು ಹಣವನ್ನು ನೀವು ಪಡೆದುಕೊಂಡಿದ್ದೀರಿ?’’ ಎಂದು ಆತ ಪ್ರಶ್ನಿಸಿದ.

ನನ್ನನ್ನು ವಿಚಾರಣೆಗೊಳಪಡಿಸಿದವರಲ್ಲಿ ಮೊದಲಿಗರು ತಮ್ಮನ್ನು ಸತ್ಯಸಂಧರು ಹಾಗೂ ಧರ್ಮಿಷ್ಠರೆಂದು ತಮ್ಮನ್ನು ತಾವೇ ಬಣ್ಣಿಸಿಕೊಂಡವರಾಗಿದ್ದಾರೆ. ಬನಿಯನ್ ಹಾಗೂ ಶಾರ್ಟ್ಸ್‌ಗಳನ್ನು ಧರಿಸಿದ್ದ ಈ ಇಬ್ಬರು ವ್ಯಕ್ತಿಗಳು ನನ್ನ ಹಿಂದೆ ನಿಂತುಕೊಂಡಿದ್ದರು. ನನಗೆ ಕತ್ತಿನ ಭಾಗಕ್ಕೆ ಥಳಿಸಲಿಕ್ಕಾಗಿಯೇ ಅವರಿಬ್ಬರು ನನ್ನ ಹಿಂಭಾಗದಲ್ಲಿ ನಿಂತಿದ್ದಾರೆಂದು ತಿಳಿಯಲು ನನಗೆ ಬಹಳ ಸಮಯ ಬೇಕಾಗಲಿಲ್ಲ.

ಅವರಲ್ಲಿ ಹಿರಿಯ ಅಧಿಕಾರಿಯು ಹೀಗೆ ಮಾತನ್ನಾರಂಭಿಸಿದ. ‘‘ನೀವೊಬ್ಬ ಪ್ರತಿಭಾವಂತ ವಿಜ್ಞಾನಿ, ಶ್ರೇಷ್ಠ ಮ್ಯಾನೇಜರ್ ಹಾಗೂ ರಾಷ್ಟ್ರೀಯ ಆಸ್ತಿ ಕೂಡಾ ಆಗಿದ್ದೀರಿ. ಆದರೂ, ಯಾಕೆ ಹೀಗೆ ಮಾಡಿದ್ದೀರಿ?.

‘‘ನಾನೇನು ಮಾಡಿದೆ?’’.

‘‘ಬೇಹುಗಾರಿಕೆ’’

‘‘ಏನು? ಬೇಹುಗಾರಿಕೆಯೇ?.

ಆತ ಗಂಟಲನ್ನು ಸರಿಪಡಿಸುತ್ತಾ ಹೇಳತೊಡಗಿದ. ‘‘ಶ್ರೀಮಾನ್ ನಂಬಿ... ಕ್ಷಮಿಸಿ, ಡಾ.ನಂಬಿ...’’.

 ‘‘ ಇಲ್ಲ, ನಾನು ಡಾಕ್ಟರ್ ನಂಬಿ ಅಲ್ಲ, ನನಗೆ ಮಿಸ್ಟರ್ .. ಈ ಪದ ಚೆನ್ನಾಗಿ ಒಪ್ಪುತ್ತದೆ’’.

 ‘‘ಅದು ಸರಿ. ನೀವು ಡಾಕ್ಟರ್‌ಗೆ ಸರಿಸಮಾನರಾಗಿ ದ್ದೀರಿ, ಎಂದು ವ್ಯಂಗ್ಯದ ಧ್ವನಿಯಲ್ಲಿ ಮಾತು ಮುಂದುವರಿಸಿದ ಆತ, ‘‘ಈಗ ಹೇಳಿ, ನೀವು ಯಾಕೆ ಈ ಅಪರಾಧವನ್ನು ಎಸಗಿದ್ದೀರಿ?.

‘‘ಅದಕ್ಕೆ ಉತ್ತರಿಸಿದ ನಾನು ದಯವಿಟ್ಟು ಅರಿತುಕೊಳ್ಳಿ, ನಾನು ಯಾವುದೇ ಅಪರಾಧವನ್ನು ಎಸಗಿಲ್ಲ. ನಿಮಗೆ ನಿಜಕ್ಕೂ ಏನು ಬೇಕಾಗಿದೆ?’’.

‘‘ತಲೆಹರಟೆ ಮಾಡಬೇಡಿ. ನೀವು ಒಪ್ಪಿಕೊಂಡಲ್ಲಿ, ನಿಮ್ಮ ಬದುಕು ಸುಗಮವಾಗಲಿದೆ. ಇಲ್ಲದಿದ್ದಲ್ಲಿ ನೀವು ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡುವಂತೆ ಮಾಡುವುದು ಹೇಗೆಂದು ನಮಗೆ ಗೊತ್ತಿದೆ.

ಬೆದರಿಕೆಯ ಮೊದಲ ಸಂಕೇತ ಅದಾಗಿತ್ತು.

‘‘ನನ್ನಿಂದಾದ ಅಪರಾಧವಾದರೂ ಏನು?’’.

ನಿಮಗೆ ತಿಳಿದಿಲ್ಲವೇ? ಎಂದ ಆತ ದಿಗ್ಗನೆ ಎದ್ದು ನಿಂತ. ಆನಂತರ ಮತ್ತೆ ಕುಳಿತುಕೊಂಡ. ‘‘ನೀವು ದೇಶದ ರಹಸ್ಯಗಳನ್ನು, ರಾಕೆಟ್ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಿರುವುದಕ್ಕೆ ನಮ್ಮ ಬಳಿ ಪುರಾವೆಯಿದೆ. ಈಗ ನಾವು ಅದನ್ನು ನಿಮ್ಮ ಬಾಯಿಯಿಂದಲೇ ಕೇಳಲಿಚ್ಛಿಸುತ್ತೇವೆ. ನೀವು ಅದನ್ನು ಹೇಗೆ ಮಾಡಿದ್ದೀರಿ ಎಂದು ನಮಗೆ ಹೇಳಿ. ಅದಕ್ಕಾಗಿ ಎಷ್ಟೊಂದು ಹೊಲಸು ಹಣವನ್ನು ನೀವು ಪಡೆದುಕೊಂಡಿದ್ದೀರಿ?’’.

 ಈ ಹಂತದಲ್ಲಿ, ಇತರ ಮೂವರು ಕೊಠಡಿಯೊಳಗೆ ಬಂದರು. ಅವರಲ್ಲೊಬ್ಬಾತ ಬೂದು ಬಣ್ಣದ ಸಫಾರಿ ಸೂಟ್ ಧರಿಸಿದ್ದರು. ಕೃಶಕಾಯದ, ಕುಳ್ಳಗಿನ ವ್ಯಕ್ತಿಯೊಬ್ಬರು ಆತನನ್ನು ‘‘ಗುಪ್ತಚರ ದಳದ ಅತಿ ದೊಡ್ಡ ವ್ಯಕ್ತಿ’’ ಎಂಬುದಾಗಿ ಪರಿಚಯಿಸಿದರು. ಆಗ ಹಠಾತ್ತನೆ, ಮುಖದಲ್ಲಿ ಕಪ್ಪುಕಲೆಗಳಿರುವ ಕೃಶಕಾಯನಾದ ವ್ಯಕ್ತಿಯು ನನ್ನನ್ನು ಒಂದೇ ಸಮನೆ ಬಯ್ಯತೊಡಗಿದ. ‘‘ಬೇ...ಮಗನೆ, ನಿನ್ನ ವಿರುದ್ಧ ಹೊರಿಸಲಾಗಿರುವ ಆರೋಪಗಳ ಬಗ್ಗೆ ನಿನಗೆ ತಿಳಿದಿದೆಯೇ’’. ಆಗ ನಾನು ನಕಾರಾತ್ಮಕವಾಗಿ ಉತ್ತರಿಸಿದಾಗ, ಆತ ತನ್ನ ಫೈಲ್‌ನಿಂದ ಕಾಗದವೊಂದನ್ನು ತೆಗೆದು ನನ್ನ ವಿರುದ್ಧದ ಆರೋಪಗಳನ್ನು ಓದಲಾರಂಭಿಸಿದ. ನಾನು ಪಾಕಿಸ್ತಾನಕ್ಕೆ ಸೂಕ್ಷ್ಮವಾದ ರಾಕೆಟ್ ತಂತ್ರಜ್ಞಾನವನ್ನು ವರ್ಗಾವಣೆ ಮಾಡಿದ್ದೇನೆ ಎಂಬ ಆರೋಪವನ್ನು ನನ್ನ ಮೇಲೆ ಹೊರಿಸಲಾಗಿತ್ತು. ಅಧಿಕೃತ ಗೌಪ್ಯಗಳ ಕಾಯ್ದೆಯ ಪ್ರಕಾರ ಈ ಅಪರಾಧಕ್ಕೆ 14 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.

ಆನಂತರ ಗುಪ್ತಚರ ದಳ (ಐಬಿ)ದ ‘ಅತಿ ದೊಡ್ಡ ವ್ಯಕ್ತಿ’ಯೆಡೆಗೆ ಬೆಟ್ಟು ಮಾಡಿದ ಆತ, ‘‘ಈ ಮಹಾನ್ ವ್ಯಕ್ತಿಯು, ಈ ವಿಷಯವನ್ನು ನಿಮ್ಮ ಬಾಯಿಯಿಂದಲೇ ಕೇಳಲು ಅಷ್ಟು ದೂರದಿಂದ ಇಲ್ಲಿಗೆ ಬಂದಿದ್ದಾರೆ. ಅವರು ನೇರವಾಗಿ ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಗೆ ವರದಿಯನ್ನು ಒಪ್ಪಿಸುತ್ತಾರೆ. ಅವರು ಸದ್ಯದಲ್ಲೇ ದಿಲ್ಲಿಗೆ ಮರಳುವವರಿದ್ದಾರೆ. ಹೀಗಾಗಿ ನೀವು ಈಗ ಎಲ್ಲವನ್ನೂ ನೇರವಾಗಿ ಬಾಯಿಬಿಟ್ಟು ಹೇಳಿದರೆ ಒಳ್ಳೆಯದು.

ಗುಪ್ತಚರದಳದ ಅತ್ಯಂತ ದೊಡ್ಡ ವ್ಯಕ್ತಿಯೆಂದು ಆತ ಪರಿಚಯಿಸಿದ ವ್ಯಕ್ತಿಯು ಐಬಿಯ ಜಂಟಿ ನಿರ್ದೇಶಕ ಎಂ.ಕೆ. ಧಾರ್ ಎಂಬುದು ನನಗೆ ತುಂಬಾ ತಡವಾಗಿ ಗೊತ್ತಾಯಿತು.

ಈಗ, ನಾನು ಶಾಂತವಾಗಿ ಉತ್ತರಿಸಿದೆ. ‘‘ನಾನು ಅಮಾಯಕನೆಂಬ ನಿಜ ಸಂಗತಿಯೊಂದನ್ನು ಬಿಟ್ಟರೆ, ನಿಮ್ಮಂದಿಗೆ ನಾನು ಹೇಳಬೇಕಾಗಿರುವುದೇನೂ ಇಲ್ಲ’’ ಎಂದೆ.

ಈಗ ಹೇಳಿ, ನೀವು ಯಾಕೆ ಮೊದಲು ಮರಿಯಾಮ್ ರಶೀದಾ ಅವರನ್ನು ಭೇಟಿಯಾದಿರಿ?.

‘‘ನಾನು ಎಂದೂ ಆಕೆಯನ್ನು ಭೇಟಿಯಾಗಿಲ್ಲ.’’ ಎಂದು ದೃಢವಾಗಿ ಹೇಳಿದೆ.

 ಆಗ ರೊಚ್ಚಿಗೆದ್ದ ಆತ ‘‘ಸುಳ್ಳು ಹೇಳಲು ನಿಮಗೆಷ್ಟು ಧೈರ್ಯ?. ಆಕೆ ನಮ್ಮಿಂದಿಗೆ ಎಲ್ಲವನ್ನೂ ಹೇಳಿದ್ದಾಳೆ. ನಾವು ನಿಮ್ಮಾಂದಿಗೆ ಕ್ರೌರ್ಯದಿಂದ ವರ್ತಿಸುವುದಕ್ಕೆ ಮುನ್ನ ನಮ್ಮ ಮುಂದೆ ಸತ್ಯ ಸಂಗತಿಯನ್ನು ಹೇಳಿ. ಎಲ್ಲವನ್ನೂ ಒಪ್ಪಿಕೊಳ್ಳ್ಳಿ. ಇಲ್ಲದಿದ್ದರೆ ನಿಮ್ಮ ಕಥೆ ಮುಗಿದಂತೆ’’ ಎಂದ.

‘‘ದಯವಿಟ್ಟು ನನ್ನನ್ನು ನಂಬಿ. ನೀವು ಮಾತನಾಡುತ್ತಿರುವ ಆ ಮಾಲ್ದೀವ್ಸ್ ಮಹಿಳೆಯನ್ನು ನಾನೆಂದೂ ಭೇಟಿಯಾಗಿಲ್ಲ. ಅವರು ಹೇಗೆ ಇದ್ದಾರೆಂದು ಕೂಡಾ ನನಗೆ ಗೊತ್ತಿಲ್ಲ. ನಾನು ಆಕೆಯನ್ನು ಭೇಟಿಯಾಗಿದ್ದೇನೆಂದು ಅವರು ಹೇಗೆ ತಾನೆ ಹೇಳಲು ಸಾಧ್ಯ?’’ ಎಂದು ಹೇಳಿದೆ.

‘‘ನೀನು ನಿರಾಕರಿಸುವುದನ್ನು ಮುಂದುವರಿಸುತ್ತಲೇ ಬಂದಲ್ಲಿ, ನಾನು ಫೌಝಿಯಾಳನ್ನು ಇಲ್ಲಿಗೆ ಕರೆತರುತ್ತೇನೆ ಹಾಗೂ ನಿನ್ನನ್ನು ಆಕೆ ಚಪ್ಪಲಿಯಿಂದ ಹೊಡೆಯುವಂತೆ ಮಾಡುತ್ತೇನೆ. ಆ ಛಾಯಾಚಿತ್ರವು ಎಲ್ಲಾ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾಗಲಿದೆ’’ ಎಂದು ಆ ಅಧಿಕಾರಿ ಬೆದರಿಕೆ ಹಾಕಿದ.

ನನ್ನ ಮನ ವೇಗವಾಗಿ ಓಡುತ್ತಿತ್ತು. ಇವರ ಉದ್ದೇಶವಾದರೂ ಏನು?. ನನ್ನನ್ನು ಭೇಟಿಯಾಗಿರುವುದಾಗಿ ಆ ಮಾಲ್ದೀವ್ಸ್ ಮಹಿಳೆ ಯಾಕೆ ಹೇಳುತ್ತಿದ್ದಾಳೆ?.

ಗುಪ್ತಚರದಳದ ಅತಿ ದೊಡ್ಡ ವ್ಯಕ್ತಿ ಹಾಗೂ ಆತನ ಸಂಗಡಿಗರು ಸ್ಥಳದಿಂದ ನಿರ್ಗಮಿಸಿದ ಬಳಿಕ, ಪ್ರಧಾನ ತನಿಖಾಧಿಕಾರಿಯು ಮಾತು ಮುಂದುವರಿಸಿದ

‘‘ಕೇವಲ ಆ ಇಬ್ಬರು ಮಹಿಳೆಯರು ಮಾತ್ರವೇ ತಪ್ಪೊಪ್ಪಿಕೊಂಡಿಲ್ಲ. ನಿಮ್ಮ ಅಧೀನ ಅಧಿಕಾರಿಯಾದ ಶಶಿ ಕುಮಾರನ್ ಕೂಡಾ ತಪ್ಪೊಪ್ಪಿಗೆ ನೀಡಿದ್ದಾರೆ. ಈಗ ನೀವು ಏನನ್ನೂ ಮುಚ್ಚಿಡಲು ಯತ್ನಿಸದಿರಿ.

ನನ್ನ ಆಸನದಿಂದ ಎದ್ದು ನಿಂತ ನಾನು, ‘‘ನೀವೇನು ಹೇಳುತ್ತಿರುವಿರಿ?. ಆತ (ಶಶಿಕುಮಾರನ್) ತಪ್ಪೊಪ್ಪಿಕೊಂಡಿ ದ್ದಾನೆಂದರೆ ಏನು ಅರ್ಥ?.

‘‘ಹಾಗಾದರೆ ನೀವು ಆತಂಕಗೊಡಿದ್ದೀರಿ ಎಂದಾಯಿತು. ಶ್ರೀಮಾನ್ ನಂಬಿಯವರೆ.... ಎಂದು ಆತ ಕುಹಕನಗೆಬೀರಿದ.

ಕೃಪೆ: scroll.in

share
ವಾರ್ತಾಭಾರತಿ
ವಾರ್ತಾಭಾರತಿ
Next Story
X