ಪ್ರವಾಸೋದ್ಯಮ ಇಲಾಖೆ ಬ್ರಾಂಡ್ ಅಂಬಾಸಿಡರ್ ಆಗುವಂತೆ ಯದುವೀರ್ ರಿಗೆ ಸಚಿವ ಸಾ.ರಾ.ಮಹೇಶ್ ಮನವಿ
ಮೈಸೂರು,ಸೆ.19: ಪ್ರವಾಸೋದ್ಯಮ ಇಲಾಖೆಗೆ ರಾಜವಂಶಸ್ಥ ಯದುವೀರ್ ಒಡೆಯರ್ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗುವಂತೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮನವಿ ಮಾಡಿದ್ದಾರೆ.
ಮೈಸೂರು ಭಾಗದ ಬ್ರಾಂಡ್ ಅಂಬಾಸಿಡರ್ ಆಗಲು ಮನವಿ ಮಾಡಿದ ಪ್ರವಾಸೋದ್ಯಮ ಸಚಿವರು ಬುಧವಾರ ಮೈಸೂರು ಅರಮನೆಗೆ ಭೇಟಿ ನೀಡಿ ಯದುವೀರ್ ಜೊತೆ ಮಾತುಕತೆ ನಡೆಸಿದರು. ಹಳೆ ಮೈಸೂರು ಭಾಗದಲ್ಲಿ ಯದುವೀರ್ ಅವರನ್ನು ಬಳಸಿಕೊಂಡು ಪ್ರಚಾರ ಕೈಗೊಳ್ಳುವ ಚಿಂತನೆ ನಡೆಸಲಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ, ವಿವಿಧ ವ್ಯಕ್ತಿಗಳನ್ನು ರಾಯಭಾರಿಯಾಗಿ ಆಯ್ಕೆ ಮಾಡಲು ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಯದುವೀರ್ ಜೊತೆ ಮಾತುಕತೆಗೆ ಸಚಿವರು ಮುಂದಾಗಿದ್ದಾರೆ.
ಮೈಸೂರಿನ ಅರಮನೆಯ ಖಾಸಗಿ ನಿವಾಸದಲ್ಲಿ ಯದುವೀರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಸಚಿವರು ಬ್ರಾಂಡ್ ಅಂಬಾಸಿಡರ್ ವಿಚಾರವಾಗಿ ಮಾತುಕತೆ ನಡೆಸಲು ಬಂದಿದ್ದೆ. ಸದ್ಯ ಮನವಿ ಮಾಡಿದ್ದೇವೆ. ಯದುವೀರ್ ಅವರ ನಿರ್ಧಾರವನ್ನು ತಿಳಿಸಲಿದ್ದಾರೆ ಎಂದು ಹೇಳಿದರು.
Next Story