Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 2013-16ರಲ್ಲಿ ದೆಹಲಿಯ ಕಾಲೇಜಿನ...

2013-16ರಲ್ಲಿ ದೆಹಲಿಯ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಬೈಸೋಯಾ ತಮಿಳುನಾಡಿನಲ್ಲಿ ಶಿಕ್ಷಣ ಪಡೆದದ್ದು ಹೇಗೆ?

ನಕಲಿ ಅಂಕಪಟ್ಟಿ ವಿವಾದ

ಅಮಿತ್ ಭಾರದ್ವಾಜ್, newslaundry.comಅಮಿತ್ ಭಾರದ್ವಾಜ್, newslaundry.com20 Sept 2018 10:15 PM IST
share
2013-16ರಲ್ಲಿ ದೆಹಲಿಯ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಬೈಸೋಯಾ ತಮಿಳುನಾಡಿನಲ್ಲಿ ಶಿಕ್ಷಣ ಪಡೆದದ್ದು ಹೇಗೆ?

ಹೊಸದಾಗಿ ಆಯ್ಕೆಯಾದ ದೆಹಲಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಎಬಿವಿಪಿ ಸದಸ್ಯ ಅಂಕಿವ್ ಬೈಸೋಯಾ ಅವರ ಸುತ್ತ ಸುತ್ತಿಕೊಂಡಿರುವ ವಿವಾದದಲ್ಲಿ ಅಂತಿಮ ಸತ್ಯವನ್ನು "ನ್ಯೂಸ್‍ ಲಾಂಡ್ರಿ" ಬಿಚ್ಚಿಟ್ಟಿದೆ. ವೆಲ್ಲೂರಿನ ತಿರುವಳ್ಳುವರ್ ವಿವಿಯಿಂದ ಅಂಕಿವ್ ಪದವಿ ಪಡೆದಿರುವುದಾಗಿ ಎಬಿವಿಪಿ ಇದುವರೆಗೆ ಹೇಳುತ್ತಾ ಬಂದಿತ್ತು. ಆದರೆ ಇದು ನಕಲಿ ಪದವಿ ಎಂದು ಎನ್ ‍ಎಸ್ ಯುಐ ಆಪಾದಿಸಿತ್ತು. ಇದೀಗ ಒಂದು ಕ್ಷಣ ತಿರುವಳ್ಳುವರ್ ವಿವಿ ಮರೆತು ಬಿಡೋಣ. ಬೈಸೋಮಾ ದೆಹಲಿ ವಿವಿಯ ವೃತ್ತಿಪರ ಕಾಲೇಜಿಲ್ಲಿ ವಿದ್ಯಾರ್ಥಿಯಾಗಿದ್ದ ದಾಖಲೆಗಳು ಇದೀಗ ಲಭ್ಯವಾಗಿವೆ. ಇವರು ಅರ್ಥಶಾಸ್ತ್ರ ಬಿಎ ಆನರ್ಸ್ ಪದವಿ ಪಡೆಯುತ್ತಿದ್ದರು. ಈ ಮಾಹಿತಿಯನ್ನು ಸಂಸ್ಥೆಯ ಶಿಕ್ಷಕರು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮಾಧ್ಯಮ ಸಂಚಾಲಕರು ಕೂಡಾ ದೃಢಪಡಿಸಿದ್ದಾರೆ.

ಬೈಸೋಯಾ ಬಯೋಡಾಟಾ

ಇದೀಗ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ಎಬಿವಿಪಿಯ ಬೈಸೋಯಾ ದೆಹಲಿಯ ಶೇಖ್ ಸರಾಯ್ ಪ್ರದೇಶದಲ್ಲಿರುವ ಸಿವಿಎಸ್ ಕಾಲೇಜಿನ ವಿದ್ಯಾರ್ಥಿ. ಐದು ಮತ್ತು ಆರನೇ ಸೆಮಿಸ್ಟರ್‍ ನ ಎರಡು ಹಾಜರಿ ಶೀಟ್‍ಗಳಲ್ಲಿ ಅವರ ಹೆಸರಿದೆ. ತರಗತಿಯಲ್ಲಿ ಅವರ ರೋಲ್‍ ನಂಬರ್ ಮತ್ತು ಬ್ಯಾಚ್ ಕ್ರಮವಾಗಿ 90 ಹಾಗೂ 2013-16. ಆದರೆ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ರಾಜಕೀಯ ಅರ್ಥಶಾಸ್ತ್ರದಲ್ಲಿ ಅವರ ಹಾಜರಾತಿ ಶೂನ್ಯ. ಇಲ್ಲಿ ತಿಳಿದುಬರುವ ನಿಜಾಂಶವೆಂದರೆ, ಹಾಜರಾತಿ ಶೀಟ್‍ನಲ್ಲಿ ಅವರ ಹೆಸರು ಇರುವುದರಿಂದ ಅವರು ಸಿವಿಎಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು ಎನ್ನುವುದು. 2016ರ ಜನವರಿಯಿಂದ 2016ರ ಏಪ್ರಿಲ್ ವರೆಗಿನ ಆರನೇ ಸೆಮಿಸ್ಟರ್ ಹಾಜರಾತಿ ಶೀಟ್‍ನಲ್ಲಿ ಇವರ ಹೆಸರು ಇರುವುದರಿಂದ ಖಂಡಿತವಾಗಿ ಇವರು 2013-2016ರ ವರೆಗೆ ವಿದ್ಯಾರ್ಥಿಯಾಗಿದ್ದರು ಎನ್ನುವುದು ಸುಸ್ಪಷ್ಟ.

ಬೈಸೋಯಾ ಇಲ್ಲಿ ನೋಂದಣಿಯಾಗಿದ್ದ ವಿದ್ಯಾರ್ಥಿ ಎಂದು ಸಿವಿಎಸ್‍ನ ಹಲವು ಮೂಲಗಳು ಖಚಿತಪಡಿಸುತ್ತವೆ. "ನನಗೆ ಆತನನ್ನು ಚೆನ್ನಾಗಿ ನೆನಪಿದೆ. ಏಕೆಂದರೆ ಆತನ ಹೆಸರೇ ವಿಚಿತ್ರ" ಎಂದು ಅರ್ಥಶಾಸ್ತ್ರ ವಿಭಾಗದ ಅಧ್ಯಾಪಕರೊಬ್ಬರು ಹೇಳುತ್ತಾರೆ.

"ಅಂಕಿವ್ ಇಲ್ಲಿನ ವಿದ್ಯಾರ್ಥಿ. ವಿದ್ಯಾರ್ಥಿ ಪ್ರತಿಭಟನೆ ಮತ್ತು ಧರಣಿಗಳಲ್ಲಿ ನಿಯತವಾಗಿ ಭಾಗವಹಿಸುತ್ತಿದ್ದ" ಎಂದು ರಾಜಕೀಯ ಶಾಸ್ತ್ರ ಪ್ರಾಧ್ಯಾಪಕರೊಬ್ಬರು ಹೇಳುತ್ತಾರೆ. ಆದರೆ ಇಬ್ಬರೂ ತಮ್ಮ ಹೆಸರು ಬಹಿರಂಗಪಡಿಸಿದಂತೆ ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ ‘ನ್ಯೂಸ್‍ ಲಾಂಡ್ರಿ’ ಪ್ರತಿನಿಧಿ ಜತೆ ಮಾತನಾಡಿದ ಅಂಕಿವ್, ಯಾವ ವಿಶ್ವವಿದ್ಯಾನಿಲಯದ ಹೆಸರು ನೀಡಲಾಗಿದೆಯೋ ನಾನು ಅದೇ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಎಂದು ಸ್ಪಷ್ಟಪಡಿಸಿದ್ದರು.

ಇದೀಗ ಹೊಸ ಅಂಶಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಎಬಿವಿಪಿ ರಾಷ್ಟ್ರೀಯ ಮಾಧ್ಯಮ ಸಂಯೋಜಕಿ ಮೋನಿಕಾ ಚೌಧರಿ ಅವರನ್ನು ಸಂರ್ಪಿಸಿದಾಗ, ಅಂಕಿವ್ 2013-2016ರ ಅವಧಿಯಲ್ಲಿ ಸಿವಿಎಸ್ ಕಾಲೇಜಿನ ವಿದ್ಯಾಥಿಯಾಗಿದ್ದರು ಎಂದು ಒಪ್ಪಿಕೊಂಡರು. 2016ರಲ್ಲಿ ಅವರು ಪ್ರವೇಶವನ್ನು ರದ್ದುಪಡಿಸಿದರು. ಈ ಪ್ರಕರಣ ಅವಳಿ ಪದವಿಯ ಪ್ರಕರಣವಲ್ಲ ಎಂದು ಸಮರ್ಥಿಸಿಕೊಂಡರು.

ಕುತೂಹಲದ ಅಂಶವೆಂದರೆ, ಬೈಸೋಯಾ ಮೊದಲ ಹಾಗೂ ಎರಡನೇ ವರ್ಷದ ಪದವಿ ಸಂದರ್ಭದಲ್ಲಿ ದೆಹಲಿ ವಿವಿ ಮತ್ತು ತಿರುವಳ್ಳುವರ್ ವಿವಿಯಲ್ಲಿ ಅಧ್ಯಯನ ಮಾಡಿದ್ದರು ಎಂದು ಮೋನಿಕಾ ಚೌಧರಿ ಒಪ್ಪಿಕೊಂಡರು. ಆದರೆ ಒಂದು ಸಾವಿರ ಕಿಲೋಮೀಟರ್ ಅಂತರದಲ್ಲಿರುವ ಎರಡು ಭಿನ್ನ ಪ್ರದೇಶಗಳಲ್ಲಿ ತರಗತಿಗಳಿಗೆ ಹಾಜರಾಗುವುದು ಅಸಾಧ್ಯ; ಇದು ಕಾನೂನು ಸಮ್ಮತವೂ ಅಲ್ಲ ಎಂಬುದನ್ನೂ ಒಪ್ಪಿಕೊಂಡರು. ಅಂಕಿವ್ ತಪ್ಪು ಮಾಡಿದ್ದಾರೆ ಹಾಗೂ 2016ರಲ್ಲಿ ದೆಹಲಿ ವಿವಿ ಪ್ರವೇಶಾತಿ ವಾಪಸು ಪಡೆದಿದ್ದಾರೆ ಎಂದು ಹೇಳಿದ ಮೋನಿಕಾ, ದೆಹಲಿ ವಿವಿ ಆಡಳಿತ ನೀಡಿರುವ ನಿರಾಕ್ಷೇಪಣಾ ಪತ್ರವನ್ನು ಹಂಚಿಕೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ.

ನಕಲಿ ಪದವಿ ವಿವಾದ

ಸೋಮವಾರ ಎನ್‍ ಎಸ್ ಯುಐ, ಬೈಸೋಯಾ ಅವರ ತಿರುವಳ್ಳುವರ್ ವಿವಿ ಪದವಿ ಅಂಕಪಟ್ಟಿಯನ್ನು ಬಿಡುಗಡೆ ಮಾಡಿ ಇದು ನಕಲಿ ಎಂದು ಹೇಳಿತ್ತು. ಕಳೆದ ಕೆಲ ವಾರಗಳಿಂದ ಎನ್ ‍ಎಸ್‍ ಯುಐ ಅಂಕಿವ್ ಬೈಸೋಯಾ ಅವರ ತಿರುವಳ್ಳುವರ್ ವಿವಿ ಅಂಕಪಟ್ಟಿಯ ಚಿತ್ರಗಳನ್ನು ಪ್ರಸಾರ ಮಾಡುತ್ತಿದೆ. ಈ ದಾಖಲೆಗಳು ನಕಲಿ ಎನ್ನುವುದು ಎನ್‍ ಎಸ್ ಯುಐ ಆರೋಪ. ಈ ಪ್ರತಿಪಾದನೆಗೆ ಸ್ಪಂದಿಸಿರುವ ತಿರುವಳ್ಳುವರ್ ವಿವಿ ಆಡಳಿತ, “ಖಂಡಿತವಾಗಿಯೂ ಈ ದಾಖಲೆಗಳು ನಕಲಿ. ಬೈಸೋಯಾ, ನಮ್ಮ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿಲ್ಲ” ಎಂದು ಸ್ಪಷ್ಟಪಡಿಸಿದೆ.

ಈ ಸಂಬಂಧ ‘ದಿ ಹಿಂದೂ’ ಪತ್ರಿಕೆ ಹಾಗೂ ‘ಎನ್‍ ಡಿಟಿವಿ’ ಸುದ್ದಿವಾಹಿನಿ ಲೇಖನ ಪ್ರಕಟಿಸಿ, ಬೈಸೋಯಾ ಅವರ ಅಂಕಪಟ್ಟಿಯನ್ನು ತಿದ್ದಿರುವ ಬಗ್ಗೆ ಎನ್‍ ಎಸ್ ಯುಐ ನೇರವಾಗಿ ತಿರುವಳ್ಳುವರ್ ವಿವಿಯಿಂದ ಪತ್ರ ಪಡೆದಿದೆ. ಎನ್‍ ಡಿಟಿವಿಗೆ ನೀಡಿದ ಹೇಳಿಕೆಯಲ್ಲಿ ಬೈಸೋಯಾ, "ಆರೋಪಗಳು ಸುಳ್ಳು ಹಾಗೂ ಆಧಾರರಹಿತ. ಈ ಬಗ್ಗೆ ಎನ್‍ ಎಸ್ ಯುಐ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗುವುದು" ಎಂದು ಹೇಳಿದ್ದರು. ಈ ಅಂಕಪಟ್ಟಿ ನಕಲಿ ಎಂದು ತಿರುವಳ್ಳುವರ್ ವಿವಿ ನೀಡಿದ ಹೇಳಿಕೆಯನ್ನು ‘ದ ಹಿಂದೂ’ ಪರಿಶೀಲಿಸಿದ್ದು, ವಿಶ್ವವಿದ್ಯಾನಿಲಯದ ಪರೀಕ್ಷಾ ನಿಯಂತ್ರಕರೇ, "ಈ ಪತ್ರವನ್ನು ನಮ್ಮ ನಿಯಂತ್ರಕರ ಕಚೇರಿಯಿಂದ ಕಳುಹಿಸಲಾಗಿದೆ. ನಿಯಂತ್ರಕರು ಇದಕ್ಕೆ ಸಹಿ ಮಾಡಿದ್ದಾರೆ. ಈ ಪ್ರಮಾಣಪತ್ರ ನಕಲಿ ಎನ್ನುವುದು ನಿಸ್ಸಂದೇಹ" ಎಂದು ಹೇಳಿದ್ದಾಗಿ ವರದಿ ಮಾಡಿದೆ.

ಬೈಸೋಯಾ ಅವರ ಕೋರ್ಸ್‍ನ ವಿವರ ಕೇಳಿದಾಗ, "2013-2016ರ ಅವಧಿಯಲ್ಲಿ ನಾನು ವೆಲ್ಲೂರಿನಿಂದ ಹೊಸದಿಲ್ಲಿಗೆ ಹೋಗಿ ಬಂದು ಕೋರ್ಸ್ ಮಾಡುತ್ತಿದ್ದೆ. ಈ ಸಮಯದಲ್ಲಿ, ನಾನು ಸಿವಿಎಸ್ ನಲ್ಲಿ ನೋಂದಾಯಿತ ವಿದ್ಯಾರ್ಥಿಯಾಗಿರಲ್ಲ" ಎಂದು ಹೇಳಿದರು. ತಿರುವಳ್ಳುವರ್ ವಿವಿಯಿಂದ ಪದವಿ ಪಡೆದ ನಿರ್ದಿಷ್ಟ ದಿನಾಂಕವನ್ನು ಕೇಳಿದಾಗ, ಬೈಸೋಯಾ ಮೌನವಾದರು. ತಿರುವಳ್ಳುವರ್ ವಿವಿ ಸ್ವತಃ ಈ ಪದವಿ ಅಂಕಪಟ್ಟಿ ನಕಲಿ ಎಂದು ಹೇಳುತ್ತಿರುವಾಗ, ಬೈಸೋಯಾ ಅವರು ದೆಹಲಿ ವಿವಿಯಲ್ಲಿ ಪದವಿ ಪಡೆದಿರುವುದನ್ನು ಹೇಗೆ ಕಾನೂನುಬದ್ಧ ಎಂದು ಪರಿಗಣಿಸಲು ಸಾಧ್ಯ?, ಪದವಿ ಕಾನೂನುಬದ್ಧ ಎಂದಾಗಿದ್ದರೆ, ಅಂಕಿವ್ ಬೈಸೋಯಾ ಒಂದೇ ಸಮಯದಲ್ಲಿ ಎರಡು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಯಾಗಿ ಹೇಗೆ ನೋಂದಾಯಿಸಿಕೊಂಡಿದ್ದರು?, ಇದು ಖಂಡಿತವಾಗಿಯೂ ಕಾನೂನುಬಾಹಿರ ಮತ್ತು ನಿಯಮಗಳ ಸ್ಪಷ್ಟ ಉಲ್ಲಂಘನೆ.

ದೆಹಲಿ ವಿವಿ ಸಿವಿಎಸ್ ಕಾಲೇಜಿನ ಪ್ರಾಚಾರ್ಯ ಡಾ.ಇಂದ್ರಜೀತ್ ದಗಾರ್ ಅವರಿಗೆ ಕೂಡಾ ಈ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಇದುವರೆಗೂ ಅವರು ಮೌನವಾಗಿಯೇ ಇದ್ದಾರೆ. ಅಂತೆಯೇ ದೆಹಲಿ ವಿವಿ ಆಡಳಿತವರ್ಗ ಕೂಡಾ ಕಾನೂನು ಉಲ್ಲಂಘನೆ ಸ್ಪಷ್ಟವಾಗಿ ಬೆಳಕಿಗೆ ಬಂದಿದ್ದರೂ ಅಂಕಿವ್ ಬೈಸೋಯಾ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಹೊಸದಾಗಿ ದೆಹಲಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬೈಸೋಯಾ ವಿರುದ್ಧ ಸಾಕಷ್ಟು ಪುರಾವೆಗಳೂ ಇವೆ. ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ಯಾವಾಗ? ಇದು ವಂಚನೆ ಪ್ರಕರಣವಾಗುತ್ತದೆಯೇ ಮತ್ತು ಅವರ ಪ್ರವೇಶವನ್ನು ರದ್ದುಪಡಿಸಲಾಗುತ್ತದೆಯೇ?.

share
ಅಮಿತ್ ಭಾರದ್ವಾಜ್, newslaundry.com
ಅಮಿತ್ ಭಾರದ್ವಾಜ್, newslaundry.com
Next Story
X