Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಏಕೆಂದರೆ.. ಆಕೆ ಮುಸ್ಲಿಂ ತಾಯಿ...

ಏಕೆಂದರೆ.. ಆಕೆ ಮುಸ್ಲಿಂ ತಾಯಿ...

‘ಕಸ್ತೂರಿ’ ತುಮಕೂರು‘ಕಸ್ತೂರಿ’ ತುಮಕೂರು22 Sept 2018 10:34 PM IST
share
ಏಕೆಂದರೆ.. ಆಕೆ ಮುಸ್ಲಿಂ ತಾಯಿ...

ನಿರ್ಭಯಾಗಾಗಿ ಬೆಳಗಿದ ಸಾವಿರಾರು ಕ್ಯಾಂಡಲ್‌ಗಳಲ್ಲಿ ಒಂದಾದರೂ ನಜೀಬ್‌ಗಾಗಿ ಬೆಳಗಲಿಲ್ಲ. ಆತನನ್ನು ಹುಡುಕಿ ತನ್ನಿ ಎಂದು ಯುವ ಶಕ್ತಿ ಒಗ್ಗೂಡಿ ಒತ್ತಾಯಿಸಲಿಲ್ಲ. ‘ಹಿಟ್ಲರ್‌ನಿಗೆ ನಾನು ಜವಾಬ್ದಾರ’ ಎಂದ ಸಾರ್ತ್ರೆ ಸತ್ತು ಬಹುಕಾಲವಾಗಿದೆ. ಆದರೆ ಸಾವಿರಾರು ಹಿಟ್ಲರ್‌ಗಳು ಬದುಕಿದ್ದಾರೆ. ಈ ರಕ್ತ ಬೀಜಾಸುರರನ್ನು ಬ್ಯಾಲಟ್ ಪೇಪರ್‌ಗಳಿಂದಷ್ಟೇ ಒರೆಸಿ ತೆಗೆದು ನಿರ್ಮೂಲಿಸಲು ಸಾಧ್ಯ.

ನಮ್ಮ ದೇಶದಲ್ಲಿ ಕಾಣೆಯಾಗುವ ಪ್ರಜೆಗಳು ಮೂರು ಕೆಟಗೆರಿಗಳಿಗೆ ಸೇರುತ್ತಾರೆ. 1. ಹೆಣ್ಣು ಮಕ್ಕಳು- ಯುವತಿಯರು ಕಾಣೆಯಾದರೆ ಅವರು ಪ್ರೇಮಿಯೊಂದಿಗೆ ಓಡಿ ಹೋದರು ಎಂದೋ ಅಪಹೃತರಾಗಿ ವೇಶ್ಯಾವಾಟಿಕೆಗೆ ಮಾರಲ್ಪಟ್ಟಿದ್ದಾರೆ ಎಂದೇ ಭಾವಿಸಲಾಗುತ್ತದೆ. 2. ಮಕ್ಕಳು-ಇವರನ್ನು ಭಿಕ್ಷುಕರ ಜಾಲವು ಹಣಕ್ಕಾಗಿ ಮಾಟಗಾರರು ಹೊತ್ತೊಯ್ದಿದ್ದಾರೆ ಎಂದು ಊಹಿಸಲಾಗುತ್ತದೆ. 3. ವೃದ್ಧರು- ಇವರು ಮತಿ ವಿಕಲರಾಗಿಯೋ, ಮನೆಯಲ್ಲಿ ಜಗಳವಾಡಿಕೊಂಡೋ ನಾಪತ್ತೆಯಾಗುತ್ತಾರೆ. ಕಪ್ಪುಬಣ್ಣ, ಬಡಕಲು ಮೈಕಟ್ಟಿನ ಕೆಳವರ್ಗದ ವೃದ್ಧರು ಎಲ್ಲೋ ಬಿದ್ದು ಸಾಯುತ್ತಾರೆ. ಹುಡುಗರು, ಯುವಕರು ಮನೆ ಬಿಟ್ಟು ಹೋಗುವುದು ಅಪರೂಪ. ಹಾಗೆ ಹೋದರೆ ಅವರ ಘರ್‌ವಾಪ್ಸಿಗಾಗಿ ವಿಶೇಷ ಮುತುವರ್ಜಿ ವಹಿಸಲಾಗುತ್ತದೆ. ನಾಳೆ ಮನೆಗೆ ದಿಕ್ಕಾಗುವ ಗಂಡು ಮಗನಲ್ಲವೇ.

ಹಿರಿಯರಿಂದ ಅವಹೇಳನಕ್ಕೊಳಗಾದ ಯುವಕರು ಅವರಿಗೆ ಬುದ್ಧಿ ಕಲಿಸಲು ಮನೆಬಿಟ್ಟು ಹೋಗುವುದುಂಟು. ಸಂದರ್ಭ ಯಾವುದೇ ಇರಲಿ ಕುಟುಂಬದ ಸದಸ್ಯರೊಬ್ಬರು ದಿಢೀರನೆ ಅದೃಶ್ಯರಾಗುವುದು. ಆ ಕುಟುಂಬಕ್ಕೆ, ಸಮಾಜಕ್ಕೆ, ವ್ಯವಸ್ಥೆಗೆ ಮರ್ಯಾದೆಯ ವಿಷಯವಲ್ಲ.

ಆದರೆ ನಜೀಬ್ ಅಹಮದ್ ಎಂಬ ಜೆನ್‌ಎಯು ವಿದ್ಯಾರ್ಥಿ ಏಕಾಏಕಿ ಕಾಣೆಯಾದವು. ತುಂಬುಪ್ರಾಯದ ಆರೋಗ್ಯಶಾಲಿ ಬುದ್ಧಿವಂತ ಹುಡುಗ. ಆಟೊ ಹತ್ತಿ ಹೋದನಂತೆ, ಮತ್ತೆಲ್ಲೋ ಕಂಡನಂತೆ, ಕಾಶ್ಮೀರ ಉಗ್ರರ ಗುಂಪು ಸೇರಿದ್ದಾನಂತೆ. -ಹೀಗೆ ನಾಲ್ಕುದಿನ ತಲೆಬುಡ ಇಲ್ಲದ ವದಂತಿಗಳು ಮಾಧ್ಯಮಗಳಲ್ಲಿ ಸುಳಿದಾಡಿದವು. ಅದೂ ಒಂದು ಮೂಲೆಯಲ್ಲಿ! ನಜೀಬ್ ಅಹಮದ್ ಸಿಗಲಿಲ್ಲ. ಜೀವ ಸಹಿತ ಅಥವಾ ಕಳೇಬರ ವಾಗಿ ಎಲ್ಲಿ ಹೋದ, ಏನಾದ? ಅಂತ ತಿಳಿಯಬೇಕು. ಈಗ ಸಿಬಿಐ ನಜೀಬ್‌ನನ್ನು ಹುಡುಕುವ ಆಟ ನಿಲ್ಲಿಸಿದೆ. ಈ ನಜೀಬ್ ಅಹಮದ್ ಪ್ರತಿಭಾನ್ವಿತ. ಕನ್ಹಯ್ಯಿ ಕುಮಾರ್, ಉಮರ್ ಖಾಲಿದ್, ಶೆಹ್ಲಾ ರಶೀದ್‌ರಂತೆ ಫ್ಯಾಶಿಸ್ಟ್ ಸರಕಾರ , ಅದರ ಪರಿವಾರ, ಪೊಲೀಸ್ ದೌರ್ಜನ್ಯ, ಇತರ ಮಾಫಿಯಾಗಳ ವಿರುದ್ಧ ಸಿಡಿದೆದ್ದವನು. ಮತಾಂಧ ದೆವ್ವಗಳಿಗೆ ಆತನನ್ನು ದೇಶದ್ರೋಹಿ ಎಂದು ನಿರ್ಮಿಸಲು ಇಷ್ಟು ಸಾಲದೇ?

ನಜೀಬ್‌ಗೆ ಮನೆಯಲ್ಲಿ ಜಗಳಗಳೋ, ದಾರುಣ ಬಡತನವೋ ಇರಲಿಲ್ಲ. ನಿರುದ್ಯೋಗ ಪರ್ವ ಆರಂಭವಾಗಿರಲಿಲ್ಲ. ಅವನೊಬ್ಬ ಪ್ರತಿಭಟನಾಕಾರನಾಗಿ ತನ್ನ ಗುರಿಯನ್ನು ಅವಿಷ್ಕರಿಸಿಕೊಂಡಿದ್ದರು. ಆತನ ಕಣ್ಗಳಲ್ಲಿ ಕಿಡಿಗಳಿದ್ದವು. ಆತನೊಂದು ಜ್ವಾಲೆಯಾಗುವುದು ಖಚಿತವಿತ್ತು. ನಜೀಬ್‌ನನ್ನು ಯಾರೋ ಅಪಹರಿಸಿದ್ದಾರೆ, ಕೊಲೆ ಮಾಡಿ ಕಳೇಬರವೂ ಸಿಗದಂತೆ ಮಾಡಿದ್ದಾರೆ ಎಂಬುದಷ್ಟೇ ನಮ್ಮ ಊಹೆಗೆ ಸುಲಭವಾಗಿ ನಿಲುಕುತ್ತದೆ. ಆ ‘ಯಾರೋ’ ಯಾರೆನ್ನುವುದು ಬಲ್ಲವರು ಬಾಯಿ ಬಿಟ್ಟರೆ ನಜೀಬ್‌ನ ಹಾದಿ ಹಿಡಿಯುವಷ್ಟು ಸುರಕ್ಷಿತವಾಗಿದೆ ಈ ದೇಶ.

 ನಜೀಬ್‌ನ ತಾಯಿ ರಸ್ತೆಗೆ ಬಂದು ಪ್ರತಿಭಟಿಸಿದರು. ಅತ್ತರು, ಗೋಗರೆದರು. ಅವರ ಅಳಲು ಕಲ್ಲಿನ ಮೇಲೆ ಸುರಿದ ನೀರಿನ ಹಾಗೆ ಹರಿದು ಹೋಯಿತು. ಕಣ್ಣೊರೆಸುವವರು ಇರಲಿಲ್ಲ. ಏಕೆಂದರೆ ಅವರೊಬ್ಬ ಮುಸ್ಲಿಂ ತಾಯಿ. ಜುನೈದ್, ಅಕ್ಬರ್, ಉಮರ್ ಖಾಲಿದ್, ಡಾ.ಕಫೀಲ್ ಖಾನ್ ಇವರನ್ನೆಲ್ಲ ಅವರ ತಾಯಂದಿರು ಹೆತ್ತು ಹೊತ್ತು ಅಪಾರ ಶ್ರಮದಿಂದ, ಪ್ರೀತಿಯಿಂದ ಬೆಳೆಸಿದ್ದಾರೆ. ಹೆತ್ತ ಕರುಳಿಗೂ ಹಸಿರು, ಕೆಂಪು, ಕೇಸರಿ ಬಣ್ಣ ಮೆತ್ತುವ ಯಾವ ಮೃಗಕ್ಕೂ ಸಾಟಿಯಿಲ್ಲದ ಕ್ರೌರ್ಯವನ್ನು ಬಿತ್ತಿ ಬೆಳೆದವರು ಅಧಿಕಾರದಲ್ಲಿದ್ದಾರೆ. ಶ್ರಮದಿಂದಲೋ, ಬೌದ್ಧಿಕವಾಗಿಯೋ ದೇಶಕ್ಕೆ ಅನನ್ಯ ಸೇವೆ ಸಲ್ಲಿಸಬಲ್ಲ ಈ ಯುವಕರನ್ನು ಕೊಂದಿದ್ದಾರೆ. ಕೊಲ್ಲಲು ಹವಣಿಸುತ್ತಿದ್ದಾರೆ. ಅವರನ್ನೆಲ್ಲ ರಕ್ಷಿಸಿಕೊಳ್ಳುವುದು ಅವರ ಸಂಸ್ಥೆ, ಸಮಾಜ, ಪೊಲೀಸರು, ನೆರೆಹೊರೆಯವರು ಎಲ್ಲರ ಕರ್ತವ್ಯ. ಆ ಕರ್ತವ್ಯ ಪ್ರಜ್ಞೆಯೂ ಅವಲಕ್ಷಣ ರೂಪ ತಾಳಿದೆ.

 ಕಾಂಗ್ರೆಸಿನ ಕಾಲದಲ್ಲಿ ರಾಜನ್‌ನಂಥ ವಿದ್ಯಾರ್ಥಿಗಳು ಸತ್ತರು, ಡಾ. ಬಿನಾಯಕ್ ಸೇನ್ ಬಂಧಿಸಲ್ಪಟ್ಟರು. ಕಮ್ಯುನಿಸ್ಟ್ ಸರಕಾರಗಳೇ ಆದಿವಾಸಿಗಳು, ಶ್ರಮಿಕರ ಮೇಲೆ ಮುಗಿಬಿದ್ದಿದೆ. ಎಲ್ಲ ರಾಜಕಾರಣಿಗಳಿಗೂ ಜಾತಿ ಧರ್ಮಗಳ ಹಂಗಿದೆ. ಒಂದಲ್ಲಾ ಒಂದು ವೌಢ್ಯವಿದೆ. ಕಾರ್ಪೊರೇಟ್ ಕುಳಗಳ ಸಂಗವಿದೆ. ಆದರೆ ಕೇಸರಿ ಪಕ್ಷ ಅದರ ಪರಿವಾರದ ಕಾಲದಲ್ಲಾದ ಹತ್ಯೆಗಳು, ಮಾರಣಹೋಮಗಳು ಸಮರ್ಥಿಸಲ್ಪಟ್ಟಂತೆ ಎಂದೂ ಸಮರ್ಥಿಸಲ್ಪಟಿರಲಿಲ್ಲ. ಹಂತಕರಲ್ಲಿ ಭಯವಿತ್ತು. ಅಧಿಕಾರಸ್ಥರಲ್ಲಿ ಅಳುಕಿತ್ತು. ಈಗ ಅವೆಲ್ಲಾ ಹೇಳ ಹೆಸರಿಲ್ಲದಂತಾಗಿದೆ. ಯಾರಿಗಾದರೂ ಸಾಯಬೇಕೆನಿಸಿದರೆ ಹಗ್ಗ, ವಿಷ, ಬೆಂಕಿ ಯಾವುದೂ ಬೇಡ. ಬೀದಿಯಲ್ಲಿ ನಾಲ್ಕು ಜನರ ಎದುರು ಆ predactor ಗಳ ವಿರುದ್ಧ ಒಂದು ಮಾತಾಡಿದರೆ ಸಾಕು, ಸ್ಮಶಾನದ ದಾರಿ ಹಿಡಿದಂತೆಯೇ. ಸಿನೆಮಾ ತಾರೆಯರು ತೆರೆಯ ಮೇಲೆ ಪೊಲೀಸ್, ಡಾಕ್ಟರ್, ರೌಡಿ ಇತ್ಯಾದಿಗಳಾಗುವಂತೆ ಕ್ಷಣಗಳಲ್ಲಿ ನೀವು ಟೆರರಿಸ್ಟೋ, ನಕ್ಸಲೈಟೋ ಆಗಬಲ್ಲಿರಿ.

 ಕಾಂಗ್ರೆಸ್, ಕಮ್ಯುನಿಸ್ಟ್, ಕೇಜ್ರಿವಾಲ್, ನಾಯ್ಡು ಇವರ್ಯಾರು ಸಂಘಪರಿವಾರದ ಹಿರಿಯ ಮುಖಂಡರ ವೈಯಕ್ತಿಕ ತೇಜೋವಧೆ ಮಾಡಿಲ್ಲ. ಆದರೆ ಕೀಳಾದ ಕೆಲವರು ನೆಹರೂ, ಗಾಂಧೀಜಿ ಚಾರಿತ್ರ ಹರಣಕ್ಕೆ ಕೈ ಹಾಕಿದ್ದಾರೆ.(ನೆಹರೂ ಪರದೆ ಸರಿಯಿತು. ಇಂದಿರಾ ಅಲ್ಲ ಮೈಮೂನಾ ಬೇಗಂ ಇತ್ಯಾದಿ (ವಿ)ಕೃತಿಗಳನ್ನು ನೋಡಿ), ಸೋನಿಯಾರಿಗೆ ಈಜುಡುಗೆ ತೊಡಿಸಿ, ಗಿರೀಶ್ ಕಾರ್ನಾಡರನ್ನು ಲಂಪಟನೆಂದ ಧೂರ್ತರ ಬಂಧನವೂ ಆಗಿಲ್ಲ. ಕೊಲೆಯಂತೂ ಅಸಲೇ ಆಗಿಲ್ಲ, ಆದರೆ ಗೌರಿ, ಕಲಬುರ್ಗಿಯಂಥವರು ಕೊಲೆ ಯಾಗುತ್ತಾರೆ. ನಜೀಬ್‌ನಂಥವರು ಅದೃಶ್ಯರಾಗುತ್ತಾರೆ.

ಪ್ರತಿಷ್ಠಿತ ಎನಿಸಿಕೊಂಡಿರುವ ದಿನಪತ್ರಿಕೆಗಳಲ್ಲಿ ಬಲಪಂಥೀಯರ ಬರಹಗಳು, ಪತ್ರಗಳನ್ನು ಗಮನಿಸಿ. ಅಕ್ಷರಗಳು ಆವೇಶದಿಂದ ಎದ್ದೆದ್ದು ಕುಣಿಯುತ್ತವೆ. ಕನಿಷ್ಠ ಘನತೆ, ನಾಚಿಕೆ, ಸಂಯಮಗಳು ಈ ಅಧಮರ ಪದಕೋಶದಲ್ಲೇ ಇಲ್ಲ. ಎಡಪಂಥೀಯರು ತಮಗೆ ಕಂಡ ಕಂಡಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮಾರಣಹೊಮ ಮಾಡಲು, ಮಾಡಿಸಲು ಅಡ್ಡಿಯಾಗಿದ್ದಾರಲ್ಲಾ ಎಂಬುದೇ ಇವರ ಉನ್ಮಾದದ ಮೂಲ.

ಸಾಮಾನ್ಯರಿಗೇನಾಗಿದೆ! ಇಬ್ಬರು ಗೃಹಸ್ಥರು ಹಣ್ಣಿನಂಗಡಿಯ ವರೊಂದಿಗೆ ಜಗಳವಾಡುತ್ತಿದ್ದರು. ‘‘ನಿಮ್ಮವರಿಗೆ ಆಗಿದ್ರೆ ಇಂಥ ಕೊಳೆತ ಹಣ್ಣು ಕೊಡ್ತಿದ್ಯಾ? ನಾವು ಇಂಥ ಹಣ್ಣು ತಿಂದು ಸತ್ತರೆ ನಿಮ್ಮ ಜನಕ್ಕಲ್ವೇ ಲಾಭ’’ ವ್ಯಾಪಾರಿ-ಗ್ರಾಹಕರ ಜಗಳದ ಸ್ವರೂಪ ಎಂದಾದರೂ ಹೀಗಿತ್ತೇ? ಮುಂದೆ ಹಣ್ಣು ಕೊಳೆತಿದ್ದರೆ ಮಾರಿದವನಿಗೆ ಟೆರರ್ರಿಸ್ಟ್ ಪಟ್ಟ ಸಿಗಲೂಬಹುದು.

ಮತ್ತೆ ನಜೀಬ್ ಅಹಮದ್ ಮಾತಿಗೆ ಬಂದರೆ ಮತ್ತೆ ನಾವ್ಯಾರೂ ಆ ಯುವಕನ ಮುಖ ಕಾಣುತ್ತೇವೆಂಬ ಭರವಸೆ ಇಲ್ಲ. ಝಕಿಯಾ ಜಾಫ್ರಿಯಿಂದ ನಜೀಬ್ ತಾಯಿಯವರಿಗೆ ಸಾವಿರಾರು ಸೋದರಿಯರ ಮಡಿಲು ಬರಿದಾಗಿಸಿರುವ ಪಾಪಿಷ್ಟರು ತಲಾಖ್ ನಿಷೇಧಿಸಿ ಮುಸ್ಲಿಂ ಹೆಣ್ಣುಮಕ್ಕಳ ಉದ್ಧಾರ ಮಾಡುತ್ತಾರಂತೆ.

ನಿರ್ಭಯಾಗಾಗಿ ಬೆಳಗಿದ ಸಾವಿರಾರು ಕ್ಯಾಂಡಲ್‌ಗಳಲ್ಲಿ ಒಂದಾದರೂ ನಜೀಬ್‌ಗಾಗಿ ಬೆಳಗಲಿಲ್ಲ. ಆತನನ್ನು ಹುಡುಕಿ ತನ್ನಿ ಎಂದು ಯುವ ಶಕ್ತಿ ಒಗ್ಗೂಡಿ ಒತ್ತಾಯಿಸಲಿಲ್ಲ. ‘ಹಿಟ್ಲರ್‌ನಿಗೆ ನಾನು ಜವಾಬ್ದಾರ’ ಎಂದ ಸಾರ್ತ್ರೆ ಸತ್ತು ಬಹುಕಾಲವಾಗಿದೆ. ಆದರೆ ಸಾವಿರಾರು ಹಿಟ್ಲರ್‌ಗಳು ಬದುಕಿದ್ದಾರೆ. ಈ ರಕ್ತ ಬೀಜಾಸುರರನ್ನು ಬ್ಯಾಲಟ್ ಪೇಪರ್‌ಗಳಿಂದಷ್ಟೇ ಒರೆಸಿ ತೆಗೆದು ನಿರ್ಮೂಲಿಸಲು ಸಾಧ್ಯ.

share
‘ಕಸ್ತೂರಿ’ ತುಮಕೂರು
‘ಕಸ್ತೂರಿ’ ತುಮಕೂರು
Next Story
X