ಮೈಸೂರು: ಟೀಮ್ ಹಸನೈನ್ ಸಕ್ರಿಯ ಕಾರ್ಯಕರ್ತರ ಸಂಗಮ
ಮೈಸೂರು, ಸೆ.23: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಟೀಮ್ ಹಸನೈನ್ ಸಕ್ರಿಯ ಕಾರ್ಯಕರ್ತರ ಸಂಗಮವು ಮೈಸೂರಿನ ಅಲ್ ನೂರ್ ಎಜ್ಯುಕೇಶನ್ ಸೆಂಟರ್ ನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಮೈಸೂರು ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಸ್ವಾದಿಖ್ ನೂರಾನಿ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ತರಗತಿ ನಡೆಸಿದರು.
ಅಬ್ದುಲ್ ಖಾದರ್ ಹಾಜಿ, ಯೂನುಸ್ ಮೈಸೂರು, ಟೀಮ್ ಹಸನೈನ್ ಗೈಡ್ ಹಸನ್ ನೂರಾನಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಜಝೀಲ್ ನೂರಾನಿ ಸ್ವಾಗತಿಸಿ, ಕೊನೆಗೆ ವಂದಿಸಿದರು.
Next Story