Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ವಾರ್ತಾಭಾರತಿವಾರ್ತಾಭಾರತಿ24 Sept 2018 12:11 AM IST
share
ಓ ಮೆಣಸೇ...

ಹೈಕಮಾಂಡ್ ಬಯಸಿದರೆ ಮುಖ್ಯಮಂತ್ರಿಯಾಗಲು ಸಿದ್ಧ - ಡಿ.ಕೆ.ಶಿವಕುಮಾರ್, ಸಚಿವ

► ಐಟಿ ಕಮಾಂಡ್ ಕೂಡ ಬಯಸಬೇಕಲ್ಲ?
---------------------
 
ಚೀನಾ ಗಡಿಯಲ್ಲಿ ಸೇನಾ ಬಲ ಕಡಿಮೆ ಮಾಡುವುದಿಲ್ಲ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ

► ಚೀನಾ ಗಡಿಯಲ್ಲೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿಬಿಡಿ.

---------------------

ಬೆಲೆ ಏರಿಕೆ ಬಿಜೆಪಿಗೆ ದುಬಾರಿಯಾಗಲಿದೆ - ಬಾಬಾ ರಾಮ್‌ದೇವ್, ಯೋಗ ಗುರು

► ನಿಮ್ಮಂತಹ ಬಾಬಾಗಳನ್ನು ಕಟ್ಟಿಕೊಂಡ ಫಲ ಅನುಭವಿಸಲೇ ಬೇಕು.

---------------------

ಸಕಲ ಜಾತಿ ಹಾಗೂ ಸಮುದಾಯಗಳ ಅಭ್ಯುದಯಕ್ಕಾಗಿ ಬಿಜೆಪಿ ಕಾರ್ಯ ನಿರ್ವಹಿಸುತ್ತದೆ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ

► ಯಾವ ದೇಶದಲ್ಲಿ ಎನ್ನುವುದನ್ನಾದರೂ ಹೇಳಿ.

---------------------

ಬಲವಂತವಾಗಿ ಸರಕಾರ ಉಳಿಸಿಕೊಳ್ಳುವ ಅಗತ್ಯ ನಮಗಿಲ್ಲ - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

► ಪಕ್ಕದಲ್ಲೇ ಬಿಜೆಪಿಯಿದೆ ಎಂಬ ಧೈರ್ಯವೇ?
---------------------
ಸಾಹಿತ್ಯ ಎಂದರೆ ಕಿಟಕಿ ಇದ್ದಂತೆ - ಯು.ಟಿ.ಖಾದರ್, ಸಚಿವ

► ಅದಕ್ಕೇ ಅದನ್ನು ಮುಚ್ಚುವ ಕೆಲಸ ಜೋರಾಗಿ ನಡೆಯುತ್ತಿದೆ.

---------------------
ನಿಜ ಹೇಳಬೇಕೆಂದರೆ ನನಗೆ ಈ ಕಿಂಗು , ಪಿನ್ನು ಯಾವುದೂ ಗೊತ್ತಿಲ್ಲ - ಆರ್.ಶಂಕರ್, ಸಚಿವ

► ಬರೇ ಆ ಕಿಂಗು ಪಿನ್ನುಗಳ ಸೂಟ್‌ಕೇಸ್ ಮಾತ್ರ ಸಾಕು ಅಂತೀರಾ?
---------------------

ಮೋದಿ ಸರಕಾರದ ಮಹತ್ವದ ಸಾಧನೆ ಎಂದರೆ ಶೇ. ನೂರರಷ್ಟು ಬೇವು ಲೇಪಿತ ಯೂರಿಯಾ ಪೂರೈಕೆ - ಅನಂತ ಕುಮಾರ್, ಕೇಂದ್ರ ಸಚಿವ

► ಯಾವ ದೇಶಕ್ಕೆ?
---------------------

2047ರಲ್ಲಿ ಭಾರತ ಮತ್ತೆ ವಿಭಜನೆಯಾಗಲಿದೆ - ಗಿರಿರಾಜ್ ಸಿಂಗ್, ಕೆಂದ್ರ ಸಚಿವ

► ಅಂದರೆ ಯೋಜನೆ ಈಗಲೇ ರೂಪಿಸಿದ್ದೀರಿ ಎಂದಾಯಿತು.

---------------------

ನಾನು ಸಚಿವನಾದುದರಿಂದ ಇಂಧನ ಬೆಲೆ ಏರಿಕೆಯಿಂದ ನನಗೆ ಯಾವುದೇ ತೊಂದರೆಯಾಗಿಲ್ಲ - ರಾಮ್‌ದಾಸ್ ಅಠಾವಳೆ, ಕೇಂದ್ರ ಸಚಿವ

► ಸಚಿವರಿಗೆ ತೊಂದರೆಯಾಗದೇ ಇದ್ದರೆ ಸಾಕು ಅಂತೀರಾ?
---------------------
 

ಮೈತ್ರಿ ಸರಕಾರ ನೀರ ಮೇಲಿನ ಗುಳ್ಳೆಯಂತೆ - ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ

► ಸದ್ಯಕ್ಕೆ ಬಿಜೆಪಿಯ ಕಂಕುಳ ಕುರು.

---------------------

ಸಮ್ಮಿಶ್ರ ಸರಕಾರ ಬಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ - ಎಚ್.ಡಿ.ರೇವಣ್ಣ , ಸಚಿವ

► ಅಂದರೆ ಬಿಜೆಪಿ ಮೈತ್ರಿಯಲ್ಲೂ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗುತ್ತಾರೆ ಎಂದಾಯಿತು.

---------------------

ನಾನು ಬೇರೆಯವರ ಚೌಕಟ್ಟಿನೊಳಗೆ ಹೋಗುವುದಿಲ್ಲ, ಬೇರೆಯವರು ನನ್ನ ಚೌಕಟ್ಟಿನೊಳಗೆ ಬಂದರೆ ಬಿಡುವುದಿಲ್ಲ- ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕಿ

► ರಾಜಕೀಯದಲ್ಲೀಗ ಚೌಕಟ್ಟಿಗಲ್ಲ, ಮೈಕಟ್ಟಿಗೇ ಬೆಲೆ.

---------------------

ಮಾಜಿ ಪ್ರಧಾನಿ ದೇವೇಗೌಡರು ಶ್ರೀ ಕೃಷ್ಣ ಪರಮಾತ್ಮನಂತಹ ತಂತ್ರಗಾರಿಕೆಯವರು - ಗೌರಿಶಂಕರ್, ಶಾಸಕ

► ಕದ್ದಿದ್ದು ಬೆಣ್ಣೆ ಮುದ್ದೆ ಅಲ್ಲ, ರಾಗಿ ಮುದ್ದೆ ಅಂದರಂತೆ ಕುಮಾರಸ್ವಾಮಿ.

---------------------

ವಿಶ್ವದಲ್ಲೇ ಪ್ರಥಮ ಪ್ಲಾಸ್ಟಿಕ್ ಸರ್ಜರಿ ನಡೆಸಿದ್ದು ಕೈಲಾಸವಾಸಿ ಶಿವ - ನಳಿನ್ ಕುಮಾರ್ ಕಟೀಲು , ಸಂಸದ

► ಅವನಿಗೆ ಬೇಕಾದ ಪ್ಲಾಸ್ಟಿಕ್ ಒದಗಿಸಿಕೊಟ್ಟವರು ನೀವೇ ಇರಬೇಕು.
---------------------

ಎಂತಹ ಸಂದರ್ಭದಲ್ಲೂ ನಂಬಿಕೆ ಇಡಬಹುದಾದ, ನೆಚ್ಚಿಕೊಳ್ಳಬಹುದಾದ ಸಂಘಟನೆ ಆರೆಸ್ಸೆಸ್ ಆಗಿದೆ - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

► ಬ್ರಾಹ್ಮಣರು ನಂಬಿಕೆಯನ್ನೂ ಇಟ್ಟಿದ್ದಾರೆ. ನೆಚ್ಚಿಕೊಂಡೂ ಇದ್ದಾರೆ.
---------------------

ನಗರ ನಕ್ಸಲರ ಸವಾಲು ಎದುರಿಸಲು ಸಿದ್ಧ - ರಾಜನಾಥ್‌ಸಿಂಗ್, ಕೇಂದ್ರ ಸಚಿವ

► ಪೆಟ್ರೋಲ್ ಬೆಲೆಯೇರಿಕೆಯ ವಿರುದ್ಧ ಮಾತನಾಡುವವರೆಲ್ಲ ಗೃಹಬಂಧನದಲ್ಲಿರಬೇಕಾಗುತ್ತದೆ ಎಂಬ ಬೆದರಿಕೆಯೆ?
---------------------

ಸಮ್ಮಿಶ್ರ ಸರಕಾರವನ್ನು ನಾವು ಬೀಳಿಸೋಲ್ಲ, ಬಿದ್ದರೆ ಸುಮ್ಮನಿರೋಲ್ಲ - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

► ನಿಮ್ಮ ತಲೆಯ ಮೇಲೆಯೇ ಬಿದ್ದರೆ?
---------------------

ಯಾವುದೇ ರೀತಿಯ ತಾರತಮ್ಯ ಪ್ರಕೃತಿಯ ನಿಯಮಕ್ಕೆ ವಿರುದ್ಧ - ರವಿಶಂಕರ್ ಗುರೂಜಿ, ಆರ್ಟ್‌ಆಫ್ ಲಿವಿಂಗ್ ಮುಖ್ಯಸ್ಥ

► ಯಮುನಾ ನದಿಯಲ್ಲಿ ನೀವು ಮಾಡಿದ ಅವಾಂತರ ಪ್ರಕೃತಿ ನಿಯಮಕ್ಕೆ ಪರವೇ?
---------------------

ದೇವ ಭಾಷೆಯಾಗಿರುವ ಸಂಸ್ಕೃತ ಲೋಕ ಭಾಷೆಯಾಗಬೇಕು - ವಿಶ್ವೇಶ ತೀರ್ಥ ಸ್ವಾಮೀಜಿ , ಪೇಜಾವರ ಮಠ

► ನೀವು ಅಲ್ಲಿ ಹೋಗಿ ಅದನ್ನೇ ಮಾತನಾಡಿ. ನಾವು ಕನ್ನಡದಲ್ಲಿ ದೇವರ ಜೊತೆಗೆ ಮಾತನಾಡುತ್ತೇವೆ.

---------------------

ತಾನು ಹಸು, ಕೋತಿ ಮತ್ತು ಸಿಂಹಗಳನ್ನು ಸಂಸ್ಕೃತ ಮತ್ತು ತಮಿಳು ಭಾಷೆಯಲ್ಲಿ ಮಾತನಾಡಿಸಬಲ್ಲೆ -ನಿತ್ಯಾನಂದ ಸ್ವಾಮೀಜಿ , ಸ್ವಘೋಷಿತ ದೇವಮಾನ

► ಹಾಗಾದರೆ ದೇಶದ ಸಮಸ್ಯೆಯ ಕುರಿತಂತೆ ಪ್ರಧಾನಿ ಮೋದಿಯನ್ನೊಮ್ಮೆ ಹಿಂದಿಯಲ್ಲಿ ಮಾತನಾಡಿಸಿ ನೋಡೋಣ.

---------------------

ಇವತ್ತು ಪ್ರಜಾ ಪ್ರಭುತ್ವದ ಪ್ರಕ್ರಿಯೆಗಳನ್ನು ಬಹಳ ಸಲುಗೆಯಿಂದ ನೋಡಲಾಗುತ್ತಿದೆ - ವೀರಪ್ಪ ಮೊಯ್ಲಿ ,ಸಂಸದ

► ನೀವು ಬರೆಯಲು ಶುರು ಹಚ್ಚಿದ ಮೇಲೆ ಮಹಾಕಾವ್ಯಗಳನ್ನು ಕೂಡ.

---------------------

ಕುಮಾರಸ್ವಾಮಿ ಕುರ್ಚಿ ಉಳಿಸಿಕೊಳ್ಳಲು ಗೂಂಡಾಗಿರಿಗೆ ಇಳಿದಿದ್ದಾರೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ

► ನೀವು ಸಾಕಿದ ಗೂಂಡಾಗಳೆಲ್ಲ ಈಗ ಎಲ್ಲಿದ್ದಾರೆ?
---------------------

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ನಕ್ಸಲ್ - ಸುನೀಲ್ ಕುಮಾರ್, ಬಿಜೆಪಿ ನಾಯಕ

► ನಿಮ್ಮ ಕೃಪೆಯಿಂದ ಕೊನೆಗೂ ಮಾವೋವಾದಿಗಳು ಕರ್ನಾಟಕದಲ್ಲಿ ಅಧಿಕಾರ ಹಿಡಿದಂತಾಯಿತು.
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X