ಕಾಟೀಹಳ್ಳಿ: ದಂಪತಿಯ ಮೃತದೇಹ ಪತ್ತೆ
ಹಾಸನ, ಸೆ.25: ದಂಪತಿಯ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿರು ಘಟನೆ ನಗರ ಹೊರವಲಯದ ಕಾಟೀಹಳ್ಳಿ ಎಂಬಲ್ಲಿ ನಡೆದಿದೆ.
ಕಾಟೀಹಳ್ಳಿಯ ಜ್ಞಾನೇಶ್(35), ಆತನ ಪತ್ನಿ ಶಿಲ್ಪಾ(30) ಮೃತ ದಂಪತಿ. ಪತ್ನಿಯನ್ನು ಕೊಲೆಗೈದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇವರಿಗೆ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದು, ಮದ್ಯಪಾನದ ಚಟ ಹೊಂದಿದ್ದ ಜ್ಞಾನೇಶ್ ಪ್ರತಿನಿತ್ಯ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಗಲಾಟೆ ನಡೆದು ಶಿಲ್ಪಾಳನ್ನು ಕೊಲೆಗೈದು ಜ್ಞಾನೇಶ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಡಾವಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
Next Story