ಹನೂರು: ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಹನೂರು,ಸೆ.25: ತಾಲೂಕಿನ ಪಿ.ಜಿ ಪಾಳ್ಯ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ವಾರ್ಷಿಕ ಮಹಾಸಭೆ ಜರುಗಿತು.
ನಂತರ ಚಾಮುಲ್ ಅಧ್ಯಕ್ಷ ಸಿ.ಎನ್ ಗುರುಮಲ್ಲಪ್ಪ ಸಭೆಯನ್ನು ಉದ್ಘಾಟಿಸಿದರು. ಸಭೆಯ ಪ್ರಾರಂಭದಲ್ಲಿ ವಿಸ್ತಾರಣಾಧಿಕಾರಿ ಮಂಜುಳಾ ಈ ಸಾಲಿನಲ್ಲಿ ಸಂಘದ ನಿವ್ವಳ ಲಾಭ, ಲೆಕ್ಕ ಪತ್ರ ಹಾಗೂ ಮುಂದಿನ ಬಜೆಟ್‍ನ್ನು ಮಂಡಿಸಿದರು. ನಂತರ ಚಾಮುಲ್ ಅಧ್ಯಕ್ಷ ಸಿಎನ್ ಗುರುಮಲ್ಲಪ್ಪ ಮಾತನಾಡಿದರು.
ಇದೇ ಸಂದರ್ಭ ಸಂಘದ ಅಧ್ಯಕ್ಷ ಎಸ್ ಮಹದೇವಸ್ವಾಮಿ, ಕಾರ್ಯದರ್ಶಿ ಬಿ.ಸ್ವಾಮಿ, ಯೋಗೇಶ್ ಹಾಗೂ ಇನ್ನಿತರರು ಹಾಜರಿದ್ದರು.
Next Story