ಮನಮೋಹನ್ ಸಿಂಗ್ ಜನ್ಮದಿನ: ಶುಭಾಶಯ ಸಲ್ಲಿಸಿದ ಮೋದಿ, ರಾಹುಲ್

ಹೊಸದಿಲ್ಲಿ, ಸೆ.26: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ 86ನೇ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ , ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವು ಗಣ್ಯರು ಶುಭಾಶಯ ಸಲ್ಲಿಸಿ ಅವರಿಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯಸ್ಸು ಕೋರಿದ್ದಾರೆ.
ನಮ್ಮ ಮಾಜಿ ಪ್ರಧಾನಿಯವರಿಗೆ ದೀರ್ಘಾಯಸ್ಸು ಹಾಗೂ ಉತ್ತಮ ಆರೋಗ್ಯ ಕೋರುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. 1932ರ ಸೆ.26ರಂದು ಜನಿಸಿದ್ದ ಮನಮೋಹನ್ ಸಿಂಗ್ 2004ರಿಂದ 2014ರವರೆಗೆ ಯುಪಿಎ ಸರಕಾರದ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಐದು ವರ್ಷದ ಕಾರ್ಯಾವಧಿ ಮುಗಿಸಿ ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ದೇಶದ ದ್ವಿತೀಯ ಪ್ರಧಾನಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ(ಈ ಸಾಧನೆ ಮಾಡಿರುವ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ).
Next Story





