ಮಕ್ಕಳ ಪ್ರತಿಭೆ ಹೊರತರುವಲ್ಲಿ ಗುಣಮಟ್ಟದ ಶಿಕ್ಷಣದ ಪಾತ್ರ ಹೆಚ್ಚು: ಶಾಸಕ ಆರ್.ನರೇಂದ್ರ
ಹನೂರು,ಸೆ.26: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ತರಲು ಗುಣಮಟ್ಟದ ಶಿಕ್ಷಣ ಹೆಚ್ಚು ಪಾತ್ರ ವಹಿಸುತ್ತದೆ ಎಂದು ಶಾಸಕ ಆರ್.ನರೇಂದ್ರ ರಾಜುಗೌಡ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್, ಚಾಮರಾಜನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇದರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ 2018 -19 ಸಾಲಿನ ಬ್ಲಾಕ್ ಹಂತದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹನೂರು ವಲಯದ ಗ್ರಾಮೀಣ ಭಾಗದಲ್ಲಿ ಹೆಚ್ಚೆಚ್ಚು ಪ್ರತಿಭೆಯುಳ್ಳ ಮಕ್ಕಳಿದ್ದು, ಆ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರಲು ಹಾಗೂ ಅವರ ಕನಸುಗಳನ್ನು ನನಸು ಮಾಡಲು ಇದು ಉತ್ತಮವಾದ ವೇದಿಕೆ ಎಂದರು.
ತಾಲೂಕಿನ ವಿವಿಧ ಶಾಲೆಯ ಮಕ್ಕಳು ಸಾಂಸ್ಕೃತಿಕ ವೇಷಭೂಷಣ ಧರಿಸಿ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭ ಜಿಲ್ಲಾ ಪಂ. ಅಧ್ಯಕ್ಷೆ ಶಿವಮ್ಮ, ಜಿಪಂ ಸದಸ್ಯರುಗಳಾದ ಬಸವರಾಜು, ಮರಗದಮಣಿ, ಲೇಖಾ, ತಾ.ಪಂ ಅಧ್ಯಕ್ಷರಾಜು, ಉಪಾಧ್ಯಕ್ಷೆ ಲತಾ, ತಾ.ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮದ್, ತಾ.ಪಂ ಸದಸ್ಯ ರಾಜೇಂದ್ರ, ಪ.ಪಂ.ಅಧ್ಯಕ್ಷೆ ಮಮತ, ಉಪಾಧ್ಯಕ್ಷ ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿಗ ಟಿ.ಆರ್.ಸ್ವಾಮಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀ ಹೆಚ್.ಕ್ಯಾತ ಹಾಗೂ ಸಿಆರ್‍ಪಿಗಳು, ಬಿಆರ್‍ಪಿ ಕಚೇರಿ ಸಿಬ್ಬಂದಿ ಮತ್ತು ವಿವಿದ ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಶಾಲೆಯ ಶಿಕ್ಷಕರು, ಪೋಷಕರು ಹಾಜರಿದ್ದರು.