ಎಸ್.ಜೆ.ಯು ಉಳ್ಳಾಲ ಝೋನ್ ವತಿಯಿಂದ ಉಲಮಾ ಸಮ್ಮಿಲನ ಕಾರ್ಯಕ್ರಮ
ಮಂಗಳೂರು,ಸೆ.27: ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್ ಇದರ ಆಶ್ರಯದಲ್ಲಿ ಉಲಮಾ ಸಮ್ಮಿಲನ ಕಾರ್ಯಕ್ರಮವು ತೊಕ್ಕೋಟು ತಾಜುಲ್ ಉಲಮಾ ಜುಮಾ ಮಸೀದಿಯಲ್ಲಿ ಇತ್ತೀಚೆಗೆ ನಡೆಯಿತು.
ಉಳ್ಳಾಲ ಝೋನ್ ಅಧ್ಯಕ್ಷ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶರೀಫ್ ಸಅದಿ ಸುಂದರಿಭಾಗ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಂಇಯ್ಯತುಲ್ ಉಲಮಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಎಸ್.ಪಿ ಹಂಝ ಸಖಾಫಿ ಮುಖ್ಯ ಭಾಷಣ ನಡೆಸಿದರು. ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ, ಉಳ್ಳಾಲ ಇದರ ಅಧ್ಯಕ್ಷ ಪಿ.ಎಸ್.ಎಂ ಶಿಹಾಬುದ್ದೀನ್ ಸಖಾಫಿ ಫಿಖ್ಹ್ ತರಗತಿ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಸುನ್ನೀ ಯವ ಜನ ಸಂಘ ಉಳ್ಳಾಲ ಸೆಂಟರ್ ಅಧ್ಯಕ್ಷ ಸಯ್ಯಿದ್ ಜಲಾಲ್ ತಂಗಳ್, ತಲಪಾಡಿ ರೇಂಜ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್, ಉಳ್ಳಾಲ ರೇಂಜ್ ಪ್ರಧಾನ ಕಾರ್ಯದರ್ಶಿ ಯೂನುಸ್ ಇಮ್ದಾದಿ ಹಾಗೂ ಉಳ್ಳಾಲ ಝೋನ್ ವ್ಯಾಪ್ತಿಯ ಉಲಮಾಗಳು ಉಪಸ್ಥಿತರಿದ್ದರು. ಝೋನ್ ಪ್ರಧಾನ ಕಾರ್ಯದರ್ಶಿ ಮುನೀರ್ ಸಖಾಫಿ ಸಾಲೆತ್ತೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.





