20ನೇ ವರ್ಷಕ್ಕೆ ಕಾಲಿಟ್ಟ ಗೂಗಲ್

ವಾಶಿಂಗ್ಟನ್, ಸೆ. 27: ಜಾಗತಿಕ ಇಂಟರ್‌ನೆಟ್ ಶೋಧ ದೈತ್ಯ ಗೂಗಲ್ ಗುರುವಾರ 20ನೇ ವರ್ಷಕ್ಕೆ ಕಾಲಿಟ್ಟಿತು ಹಾಗೂ ಅದು ವಿಶೇಷ ಡೂಡಲ್‌ನೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತು.
1.37 ನಿಮಿಷದ ವೀಡಿಯೊ ರೂಪದಲ್ಲಿರುವ ಡೂಡಲ್ ಪ್ರಾರಂಭದಿಂದ ಈವರೆಗಿನ ಗೂಗಲ್‌ನ ಪಯಣವನ್ನು ದಾಖಲಿಸುತ್ತದೆ ಹಾಗೂ ಬೆಂಬಲ ನೀಡಿರುವುದಕ್ಕಾಗಿ ಬಳಕೆದಾರರಿಗೆ ಧನ್ಯವಾದ ಸಲ್ಲಿಸುತ್ತದೆ.
ಸರಳ ‘ಶೋಧ ಇಂಜಿನ್’ ಆಗಿ ಕಾರ್ಯಾರಂಭಿಸಿದ ಗೂಗಲ್ ಈಗ ಜಾಗತಿಕ ತಂತ್ರಜ್ಞಾನ ದೈತ್ಯನಾಗಿ ರೂಪುಗೊಂಡಿದೆ. ಈ ಅವಧಿಯಲ್ಲಿ ಗೂಗಲ್ ಹಲವು ಮಜಲುಗಳನ್ನು ದಾಟಿ ಬಂದಿದೆ.
ಈಗ ಬಳಕೆದಾರರು, ವಿವಿಧ ವಿಷಯಗಳಲ್ಲಿ ಅವರಿಗೆ ಬೇಕಾದ ಬಹುತೇಕ ಎಲ್ಲ ಮಾಹಿತಿಗಳನ್ನು ಪಡೆಯಬಹುದಾಗಿದೆ.
ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಪದವೀಧರರಾದ ಲ್ಯಾರಿ ಪೇಜ್ ಮತ್ತು ಸರ್ಗಿ ಬ್ರಿನ್ 1995ರಲ್ಲಿ ಗೂಗಲ್‌ನ ಕಲ್ಪನೆಯನ್ನು ಹುಟ್ಟುಹಾಕಿದರು.
1998ರಲ್ಲಿ ಅವರ ಕಲ್ಪನೆ ಕಾರ್ಯರೂಪಕ್ಕೆ ಬಂದಿತು.
Next Story





