ಕಾರ್ಪೊರೇಶನ್ ಬ್ಯಾಂಕ್ : ಭಾಷಾ ಸಾಮರಸ್ಯ ದಿನ

ಮಂಗಳೂರು, ಸೆ. 27: ಕಾರ್ಪೊರೇಶನ್ ಬ್ಯಾಂಕ್ ಹಾಗೂ ನಗರ ಅಧಿಕೃತ ಭಾಷಾ ಅನುಷ್ಠಾನ ಸಮಿತಿ(ಟಿಒಎಲ್‌ಐಸಿ) ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಭಾಷಾ ಸಾಮರಸ್ಯ ದಿನವು ಗುರುವಾರ ಮಂಗಳೂರಿನಲ್ಲಿರುವ ಕಾರ್ಪೊರೇಶನ್ ಬ್ಯಾಂಕಿ ಪ್ರಧಾನ ಕಚೇರಿಯಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಸಿಇಒ(ಟಿಒಎಲ್‌ಐಸಿಯ ಅಧ್ಯಕ್ಷ) ಜೈ ಕುಮಾರ್ ಗಾರ್ಗ್ ಮಾತನಾಡಿ, ದೇಶದ ಸಂಪರ್ಕ ಭಾಷೆಯಾಗಿ ಹಿಂದಿಯ ಮಹತ್ವವನ್ನು ವಿವರಿಸಿದರು. ಹಿಂದಿ ಹಾಗೂ ಪ್ರಾದೇಶಿಕ ಬಾಷೆಗಳ ಮೂಲಕ ಕೇಂದ್ರ ಸರಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಲು ಬ್ಯಾಂಕ್‌ಗಳಿಗೆ ಸಾಧ್ಯವಾಗಿದೆ. ಬ್ಯಾಂಕ್‌ನ ಉದ್ಯೋಗಿಗಳು ಆಧುನಿಕ ತಂತ್ರಜ್ಞಾನವನ್ನು ಸದುಪಯೋಗಪಡಿಸಿ ಕೊಂಡು ಅಧಿಕೃತ ಭಾಷೆ(ಹಿಂದಿ)ಯಲ್ಲಿ ಪ್ರಭುತ್ವ ಸಾಧಿಬೇಕು ಎಂದು ಅವರು ಹೇಳಿದರು.
ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ್ ಮುರಳಿ ಭಗತ್ ಮಾತನಾಡಿದರು. ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪೂರ್ಣಿಮಾ ಎಸ್ ಹಾಗೂ ಅನುರಾಗ್ ಕುಮಾರ್ ಸಿಂಗ್ ಕಾರ್ಯಕ್ರಮ ಸಂಯೋಜಿಸಿದ್ದರು.





