ಒಐಸಿಯಲ್ಲಿ ಪಾಕ್‌ನಿಂದ ಕಾಶ್ಮೀರ ವಿಷಯ ಪ್ರಸ್ತಾಪ: ಭಾರತ ಆಕ್ಷೇಪ

ನ್ಯೂಯಾರ್ಕ್, ಸೆ. 27: ಇಸ್ಲಾಮಿಕ್ ಸಹಕಾರ ಸಂಘಟನೆ (ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಪರೇಶನ್-ಒಐಸಿ)ಯ ಸಭೆಯಲ್ಲಿ ಪಾಕಿಸ್ತಾನ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿರುವುದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.
ಭಾರತದ ಆಂತರಿಕ ವ್ಯವಹಾರಕ್ಕೆ ಸಂಬಂಧಿಸಿದ ಸಂಗತಿಗಳನ್ನು ಬಹುಪಕ್ಷೀಯ ವೇದಿಕೆಯಲ್ಲಿ ಚರ್ಚಿಸುವುದು ಸಂಘಟನೆಗೂ, ಅದರ ಸದಸ್ಯರಿಗೂ ತಕ್ಕುದಲ್ಲ ಎಂದು ಅದು ಹೇಳಿದೆ.
ಇಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ 73ನೇ ಮಹಾಧಿವೇಶನದ ನೇಪಥ್ಯದಲ್ಲಿ ಬುಧವಾರ ನಡೆದ ಒಐಸಿ ಕಾಂಟ್ಯಾಕ್ಟ್ ಗ್ರೂಪ್ ಸಭೆಯಲ್ಲಿ ಪಾಕಿಸ್ತಾನ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿರುವುದನ್ನು ಸ್ಮರಿಸಬಹುದಾಗಿದೆ.
‘‘ಭಾರತದ ಅತ್ಯಂತ ಆಂತರಿಕ ವ್ಯವಹಾರಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಒಐಸಿಯಲ್ಲಿ ಮತ್ತೆ ಚರ್ಚೆಯಾಗಿರುವುದನ್ನು ನಾವು ಯಾವತ್ತೂ ವಿಷಾದದಿಂದ ಪರಿಗಣಿಸುತ್ತೇವೆ’’ ಎಂದು ನ್ಯೂಯಾರ್ಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದರು.
Next Story





