ಹನೂರು: ಧಾರಕಾರ ಮಳೆಗೆ ಕುಸಿದ ಮನೆ
ಹನೂರು,ಸೆ.27: ಹನೂರು ಸುತ್ತ ಮುತ್ತ ಸುರಿಯುತ್ತಿರುವ ಧಾರಕಾರ ಮಳೆಗೆ ಬುಧವಾರ ರಾತ್ರಿ ಪಟ್ಟಣದ ಸಮೀಪದ ಬೆಳ್ಳತ್ತೂರು ಗ್ರಾಮದ ನಂಜುಂಡಸ್ವಾಮಿ ಎಂಬವರ ಮನೆ ಕುಸಿದಿರುವ ಘಟನೆ ನಡೆದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದ್ದು, ಕೆಲ ಗೃಹಪಯೋಗಿ ಪಿಠೋಪಕರಣಗಳು ನಾಶವಾಗಿದೆ.
ಪಟ್ಟಣದ ಹೊರ ವಲಯದ ಹುಬ್ಬೆಹುಣಸೇ ಜಲಾಶಯ ಸಮೀಪ ಮುಖ್ಯ ರಸ್ತೆಯಲ್ಲಿ ಮರ ನೆಲಕ್ಕೆ ಉರುಳಿದ್ದು, ಮಳೆ ಆರ್ಭಟದಿಂದ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಯಿತು.
Next Story