ವಿಮಾನ ನಿಲ್ಲಿಸಲು ಅದರ ಹಿಂದೆ ಓಡಿದ!

ಲಂಡನ್, ಸೆ. 27: ಐರ್‌ಲ್ಯಾಂಡ್ ರಾಜಧಾನಿ ಡಬ್ಲಿನ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಡವಾಗಿ ಆಗಮಿಸಿದ ವ್ಯಕ್ತಿಯೊಬ್ಬ, ವಿಮಾನ ಆಗಲೇ ಹೊರಟಿದ್ದನ್ನು ನೋಡಿ ಅದನ್ನು ನಿಲ್ಲಿಸುವುದಕ್ಕಾಗಿ ಅದರ ಹಿಂದೆಯೇ ಓಡಿದ ಘಟನೆಯೊಂದು ವರದಿಯಾಗಿದೆ.
ಆ ವ್ಯಕ್ತಿಯನ್ನು ಬಳಿಕ ಪೊಲೀಸರು ಬಂಧಿಸಿದ್ದಾರೆ.
ತೀರಾ ತಡವಾಗಿ ಮಹಿಳೆಯೊಬ್ಬರೊಂದಿಗೆ ಬಂದ ವ್ಯಕ್ತಿ ಆ್ಯಮ್‌ಸ್ಟರ್‌ಡ್ಯಾಮ್ ವಿಮಾನ ಹೊರಟಿದ್ದನ್ನು ನೋಡಿ, ತಡೆ ಬೇಲಿ ಹಾರಿ ರನ್‌ವೇಯತ್ತ ಓಡಿ ನಿಲ್ಲಿಸುವಂತೆ ವಿಮಾನದತ್ತ ಕೈಯಾಡಿಸಿದನು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಿಮಾನ ಪ್ರಯಾಣವನ್ನು ಮುಂದುವರಿಸಿತು ಹಾಗೂ ಪೊಲೀಸರು ಬಂದು ಆ ವ್ಯಕ್ತಿಯನ್ನು ಕರೆದುಕೊಂಡು ಹೋದರು.
Next Story





