ಪ್ರೊ. ಜತ್ತಿ ಈಶ್ವರ ಭಟ್ಟರಿಗೆ ಅಂತಾರಾಷ್ಟ್ರೀಯ ಗೌರವ

ಕೊಣಾಜೆ, ಸೆ. 28: ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಜತ್ತಿ ಈಶ್ವರ ಭಟ್ ಇವರು ಯುನೈಟೆಡ್ ಕಿಂಗ್‍ಡಮ್‍ನ ಪ್ರತಿಷ್ಠಿತ ರೋಯಲ್ ಸೊಸೈಟಿ ಆಫ್ ಕೆಮೆಸ್ಟ್ರಿ (FRCC) ಇವರ ಗೌರವ ಫೆಲೋಶಿಫ್ ಪುರಸ್ಕಾರಕ್ಕೆ ಆಯ್ಕೆಗೊಂಡಿದ್ದಾರೆ.
1980ರಿಂದ ಪ್ರೊ. ಜತ್ತಿ ಈಶ್ವರ ಭಟ್ ಅವರ ಅಧ್ಯಾಪನ ಮತ್ತು ಸಂಶೋಧನೆಯನ್ನು ಪರಿಗಣಿಸಿ ಈ ಗೌರವಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಹಾಗೂ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿರುತ್ತಾರೆ.
1997- 98ರಲ್ಲಿ ಇವರು ಪ್ರತಿಷ್ಠಿತ ಕಾಮನ್‍ವೆಲ್ತ್ ರಿಸರ್ಚ್ ಫೆಲೋಶಿಫ್‍ಗೂ ಪಾತ್ರರಾಗಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಸಮಿತಿಗಳ ಸದಸ್ಯರಾಗಿ NAAC, UPSC, KPSC, UGC ಹಲವು ಕಮಿಟಿ ಸದಸ್ಯರಾಗಿ ಕಾರ್ಯ ನಿರ್ವಹಿಸಿರುತ್ತಾರೆ.
Next Story





