ಏಶ್ಯಕಪ್: ಲಿಟನ್ ದಾಸ್ ಚೊಚ್ಚಲ ಶತಕ

ದುಬೈ, ಸೆ.28: ಭಾರತದ ವಿರುದ್ಧ ಏಶ್ಯಕಪ್ ಏಕದಿನ ಕ್ರಿಕೆಟ್ ಫೈನಲ್‌ನಲ್ಲಿ ಬಾಂಗ್ಲಾದೇಶದ ಆರಂಭಿಕ ದಾಂಡಿಗ ಲಿಟನ್ ದಾಸ್ ಚೊಚ್ಚಲ ಶತಕ ದಾಖಲಿಸಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾ ಪರ ಲಿಟನ್ ದಾಸ್ ಮತ್ತು ಆಲ್‌ರೌಂಡರ್ ಮೆಹಿದಿ ಹಸನ್ ಮಿರಾಝ್ ಮೊದಲ ವಿಕೆಟ್‌ಗೆ 20.5 ಓವರ್‌ಗಳಲ್ಲಿ 120 ರನ್‌ಗಳ ಜೊತೆಯಾಟ ನೀಡಿದರು.
ಲಿಟನ್ ದಾಸ್ 87 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ ಶತಕ ಪೂರ್ಣಗೊಳಿಸಿದರು. 18ನೇ ಏಕದಿನ ಪಂದ್ಯವನ್ನು ಆಡಿದ ಲಿಟನ್ ದಾಸ್ ಅವರ ಹಿಂದಿನ ವೈಯಕ್ತಿಕ ಗರಿಷ್ಠ ಸ್ಕೋರ್ 41 ಆಗಿತ್ತು.ಹಸನ್ 32 ರನ್ ಗಳಿಸಿ ನಿರ್ಗಮಿಸಿದ ಬಳಿಕ ಬಾಂಗ್ಲಾ 4 ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು.
ಇಮ್ರುಲ್ ಕೈಸ್(2), ಮುಶ್ಫಿಕುರ್ರಹೀಮ್(5), ಮುಹಮ್ಮದ್ ಮಿಥುನ್(2) ಮತ್ತು ಮಹ್ಮೂದುಲ್ಲಾ (5) ಔಟಾದರು. ಬಾಂಗ್ಲಾ 33 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 155 ರನ್ ಗಳಿಸಿದೆ.
Next Story





