ಐಎನ್‌ಎಸ್ ನೂತನ ಅಧ್ಯಕ್ಷರಾಗಿ ಜಯಂತ ಎಂ.ಮ್ಯಾಥ್ಯೂ ಆಯ್ಕೆ
ಬೆಂಗಳೂರು, ಸೆ.28: ಪ್ರತಿಷ್ಠಿತ ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ(ಐಎನ್‌ಎಸ್)ಯ 2018-19ನೇ ಸಾಲಿನ ಅಧ್ಯಕ್ಷರಾಗಿ ಮಲಯಾಳ ಮನೋರಮಾದ ಕಾರ್ಯ ನಿರ್ವಾಹಕ ಸಂಪಾದಕ ಜಯಂತ ಮಾಮೆನ್ ಮ್ಯಾಥ್ಯೂ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಐಎನ್‌ಎಸ್‌ನ ಸಾಮಾನ್ಯ ಸಭೆಯಲ್ಲಿ ಲವ ಸಕ್ಸೇನಾ ಅವರು ಮಹಾ ಕಾರ್ಯದರ್ಶಿಯಾಗಿ ಹಾಗೂ ಮಿಡ್ ಡೇ ಪತ್ರಿಕೆಯ ಶೈಲೇಶ ಗುಪ್ತಾ ಮತ್ತು ‘ಹೆಲ್ತ್ ಆ್ಯಡ್ ಆಂಟಿಸೆಪ್ಟಿಕ್’ನ ಎಲ್.ಆದಿಮೂಲಂ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಹಿಂದುಸ್ಥಾನ ಟೈಮ್ಸ್‌ನ ಶರದ್ ಸಕ್ಸೆನಾ ಅವರನ್ನು ಗೌರವ ಕೋಶಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
41 ಸದಸ್ಯರ ಕಾರ್ಯಕಾರಿ ಸಮಿತಿಯನ್ನೂ ರಚಿಸಲಾಗಿದೆ.
Next Story





