ಉಡುಪಿಯಲ್ಲಿ ‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆ

ಉಡುಪಿ, ಸೆ. 28: ಸ್ವಾಮಿ ವಿವೇಕಾನಂದರು ಇಡೀ ಜಗತ್ತಿಗೆ ಹೊಸ ಸಂಸ್ಕೃತಿ ಯನ್ನು ಪರಿಚಯಿಸಿದರು. ಎಲ್ಲ ಧರ್ಮಗಳ ತುತ್ತ ತುದಿ ಎಂಬುದು ಆಧ್ಯಾತ್ಮ ವಾಗಿದೆ ಎಂದು ಬೈಲೂರು ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ವಿನಾಯಕ ನಂಜೀ ಮಹರಾಜ್ ಹೇಳಿದ್ದಾರೆ.
ಯುವ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸವಿ ನೆನಪಿಗೆ ಹಮ್ಮಿಕೊಳ್ಳಲಾಗಿರುವ ‘ಮತ್ತೊಮ್ಮೆ ದಿಗ್ವಿಜಯ’ ರಥಯಾತ್ರೆಯ ಉಡುಪಿ ಚಿತ್ತರಂಜನ್ ಸರ್ಕಲ್‌ನಲ್ಲಿ ಶುಕ್ರವಾರ ಜರಗಿದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ನಿತ್ಯಾನಂದ ವಿವೇಕವಂಶಿ ದಿಕ್ಸೂಚಿ ಭಾಷಣ ಮಾಡಿದರು. ಯುವ ಬ್ರಿಗ್ರೇಡ್ ಸಂಚಾಲಕ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಥಯಾತ್ರೆ ಯ ಶೋಭಾಯಾತ್ರೆಗೆ ಪರ್ಯಾಯ ಪಲಿಮಾರು ಮಠದ ದಿವಾನ ವೇದವ್ಯಾಸ ತಂತ್ರಿ ಚಾಲನೆ ನೀಡಿದರು. ಅಲ್ಲಿಂದ ಹೊರಟ ಯಾತ್ರೆಯು ಕಲ್ಸಂಕ ಮಾರ್ಗ ವಾಗಿ ಉಡುಪಿ ನಗರದಲ್ಲಿ ಸಂಚರಿಸಿ ಚಿತ್ತರಂಜನ್ ಸರ್ಕಲ್‌ನಲ್ಲಿ ಸಮಾಪ್ತಿ ಗೊಂಡಿತು.
Next Story





