ಜೆರುಸಲೇಮ್ ಮಾರಾಟಕ್ಕಿಲ್ಲ: ಫೆಲೆಸ್ತೀನ್ ಅಧ್ಯಕ್ಷ

ವಿಶ್ವಸಂಸ್ಥೆ, ಸೆ. 28: ನನ್ನ ಜನರ ಹಕ್ಕುಗಳು ‘ಚೌಕಾಸಿಗಿಲ್ಲ’ ಎಂದು ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಗುರುವಾರ ಹೇಳಿದ್ದಾರೆ ಹಾಗೂ ಇಸ್ರೇಲ್-ಫೆಲೆಸ್ತೀನ್ ಬಿಕ್ಕಟ್ಟಿಗೆ ಎರಡು-ರಾಷ್ಟ್ರ ಪರಿಹಾರವನ್ನು ಅಮೆರಿಕ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಶಾಂತಿ ಒಪ್ಪಂದದ ಬಗ್ಗೆ ಟ್ರಂಪ್ ನೀಡಿರುವ ಭರವಸೆಯು, ಅವರು ಅಧಿಕಾರ ವಹಿಸಿದಂದಿನಿಂದ ಅವರ ಆಡಳಿತವು ತೆಗೆದುಕೊಂಡಿರುವ ನಿರ್ಧಾರಗಳಿಗೆ ವ್ಯತಿರಿಕ್ತವಾಗಿದೆ ಎಂದು ಅಬ್ಬಾಸ್ ಹೇಳಿದರು.
‘‘ಪ್ರಸಕ್ತ ಅಮೆರಿಕ ಸರಕಾರದ ನಿರ್ಧಾರಗಳು, ಅಮೆರಿಕದ ಹಿಂದಿನ ಎಲ್ಲ ಬದ್ಧತೆಗಳಿಂದ ಹಿಂದೆ ಸರಿಯುವ ಉದ್ದೇಶದ್ದಾಗಿವೆ. ಅವುಗಳು ಎರಡು-ರಾಷ್ಟ್ರ ಪರಿಹಾರವನ್ನು ದುರ್ಬಲಗೊಳಿಸಿವೆ’’ ಎಂದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾತನಾಡಿದ ಅಬ್ಬಾಸ್ ಹೇಳಿದರು.
ಜೆರುಸಲೇಮ್ ಮಾರಾಟಕ್ಕಿಲ್ಲ ಎಂದು ಅವರು ಹೇಳಿದರು.
Next Story





