ಹನೂರು: ಧಾರಕಾರ ಮಳೆಗೆ ಮನೆಗಳು ಕುಸಿತ; ಶಾಸಕ ಆರ್.ನರೇಂದ್ರ ಭೇಟಿ

ಹನೂರು,ಸೆ.28: ಹನೂರು ಸುತ್ತ ಮುತ್ತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಪಟ್ಟಣದ ಸಮೀಪದಲ್ಲಿರುವ ಬೆಳ್ಳತ್ತೂರು ಗ್ರಾಮದಲ್ಲಿ ಹಲವು ಮನೆಗಳು ಕುಸಿದಿದ್ದು, ಸ್ಥಳಕ್ಕೆ ಶಾಸಕ ಆರ್ ನರೇಂದ್ರರಾಜುಗೌಡ ಭೇಟಿ ನೀಡಿ ಪ್ರತಿ ಮನೆ ಮನೆಗೂ ಖುದ್ದಾಗಿ ತೆರಳಿ ಪರಿಶೀಲನೆ ನಡೆಸಿದರು.
ಶುಕ್ರವಾರ ಮುಂಜಾನೆ ಬೆಳ್ಳತ್ತೂರು ಗ್ರಾಮಕ್ಕೆ ಆಗಮಿಸಿ, ಮಳೆಯ ಅಬ್ಬರಕ್ಕೆ ಹಾನಿ ಆಗಿರುವ ಪ್ರತಿಯೊಂದು ಮನೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಕುಟಂಬಸ್ಥರಿಗೆ ತುರ್ತಾಗಿ ಬೇಕಾಗಿರುವ ಅಗತ್ಯ ಕ್ರಮ ಒದಗಿಸುವಂತೆ ಮತ್ತು ಮಳೆ ಅವಾಂತರಕ್ಕೆ ಮನೆಗಳು ಕುಸಿದಿರುವವರಿಗೆ ಸರ್ಕಾರದಿಂದ ಪರಿಹಾರವನ್ನು ಒದಗಿಸಿ ನೆರವು ನೀಡುವ ಭರವಸೆ ನೀಡಿದರು.
Next Story





