ಹನೂರು: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ

ಹನೂರು,ಸೆ.28: ಕ್ಷೇತ್ರ ವ್ಯಾಪ್ತಿಯ ಗಂಗನದೊಡ್ಡಿ ಹಾಗೂ ಪುದುನಗರ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆರ್ ನರೇಂದ್ರರಾಜುಗೌಡ ಶುಕ್ರವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ವಿಶೇಷ ಕಾಳಜಿ ವಹಿಸಲಾಗಿದ್ದು, ಈ ದಿಸೆಯಲ್ಲಿ ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಗ್ರಾಮಗಳ ರಸ್ತೆ ಅಭಿವೃದ್ದಿಗೆ ವಿವಿಧ ಯೋಜನೆಗಳ ಮುಖಾಂತರ ಅನುದಾನ ಬಿಡುಗಡೆಗೊಳಿಸಿದ್ದರು. ಆ ಪೈಕಿ ಹಲವು ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನು ಕೆಲವು ಪ್ರಗತಿಯಲ್ಲಿದೆ ಎಂದರು.
ಈ ಸಂದರ್ಭ ಜಿಪಂ ಸದಸ್ಯ ಬಸವರಾಜು, ತಾಪಂ ಅಧ್ಯಕ್ಷ ರಾಜು, ಮುಖಂಡರಾದ ಪ್ರಭು, ಗಂಗನದೂಡ್ಡಿ ಪುದುನಗರದ ಮುಖಂಡರು ಮತ್ತು ಗುತ್ತಿಗೆದಾರ ರಘು, ಕಾರ್ಯಪಾಲಕ ಅಭಿಯಂತರರಾದ ಮೂರ್ತಿನಾಯಕ್ ಇನ್ನಿತರರು ಹಾಜರಿದ್ದರು.
Next Story





