ಮೈಸೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು

ಮೈಸೂರು,ಸೆ.28: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಗರದ ಸಂಗಂ ಚಿತ್ರಮಂದಿರದ ಬಳಿ ನಡೆದಿದೆ.
ಸಂಗಂ ಚಿತ್ರ ಮಂದಿರದ ಹಿಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗುಂಡ್ಲುಪೇಟೆಯ ನಿವಾಸಿ ಶಂಕರ್(50) ಎಂಬವರೇ ಹೃದಯಾಘಾತದಿಂದ ಸಾವನ್ನಪ್ಪಿದವರಾಗಿದ್ದು, ಇವರು ಅಡುಗೆ ಮಾಡುವ ಕಾಯಕ ನಡೆಸುತ್ತಿದ್ದರು. ಇವರು ಕುಸಿದು ಬಿದ್ದಿದ್ದನ್ನು ನೋಡಿದ ದಾರಿ ಹೋಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿಯೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು ಎನ್ನಲಾಗಿದೆ.
ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





