ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಹಸು, ಎತ್ತು ಸಜೀವ ದಹನ
ದಾವಣಗೆರೆ,ಸೆ.28: ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಒಂದು ಹಸು ಹಾಗೂ ಎತ್ತು ಸಜೀವ ದಹನವಾಗಿರುವ ಘಟನೆ ಚನ್ನಗಿರಿ ತಾಲೂಕಿನ ಕಂಚಿಗನಾಳ್ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಗ್ರಾಮದ ರುದ್ರೇಶಪ್ಪ ಎಂಬಾತರಿಗೆ ಈ ಕೊಟ್ಟಿಗೆ ಸೇರಿದ್ದು, ಕೊಟ್ಟಿಗೆಯ ಪಕ್ಕದಲ್ಲಿದ್ದ ರಾಗಿಮೂಟೆಗಳು ಸಹ ಬೆಂಕಿಗಾಹುತಿಯಾಗಿದೆ. ಇದರಿಂದಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಅಗ್ನಿಶಾಮಕದಳ ಸಿಬ್ಬಂದಿಯಿಂದ ಬೆಂಕಿ ನಿಯಂತ್ರಿಸಲಾಗಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





