ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ: ಯೆನೆಪೊಯ ವೈದ್ಯಕೀಯ ಕಾಲೇಜು, 8 ಮಂದಿಗೆ ರಾಜ್ಯ ಪ್ರಶಸ್ತಿ

ಬೆಂಗಳೂರು, ಸೆ. 29: ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರಕಾರದಿಂದ ನೀಡುವ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆ ಯೆನೆಪೊಯ ಮೆಡಿಕಲ್ ಕಾಲೇಜು ಸಹಿತ 8 ಮಂದಿ ಆಯ್ಕೆಯಾಗಿದ್ದಾರೆಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ತಿಳಿಸಿದ್ದಾರೆ.
ಪ್ರಶಸ್ತಿಯೂ ತಲಾ 1ಲಕ್ಷ ರೂ.ನಗದು, ಪ್ರಶಸ್ತಿ ಪತ್ರ ಒಳಗೊಂಡಿದ್ದು, ಅಕ್ಟೋಬರ್ 1ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಸಾಹಿತ್ಯ-ಕಲಬುರ್ಗಿ ಜಿಲ್ಲೆಯ ನಾಡೋಜ ಡಾ.ಪಿ.ಎಸ್.ಶಂಕರ್, ಸಮಾಜ ಸೇವೆ- ಡಾ.ವಿಜಯಲಕ್ಷ್ಮಿ ದೇಶಮಾನೆ, ಮಹದೇವಿ ಹುಲ್ಲೂರ್, ಜಗದಾಂಬ, ಶಿಕ್ಷಣ-ಉಡುಪಿ ಜಿಲ್ಲೆಯ ಡಾ.ಬಿ.ವಿ.ಕೆರೆ ಮಾರ್ತಾಂಡೆ, ಕಲಾಕ್ಷೇತ್ರ-ದಾವಣಗೆರೆ ಚಿಂದೋಡಿ ಬಂಗಾರೇಶ್, ಕ್ರೀಡೆ-ಮಂಡ್ಯ ಜಿಲ್ಲೆ ಡಿ.ಎನ್.ಸಂಪತ್, ಕಾನೂನು- ಬಾಗಲಕೋಟೆ ಜಿಲ್ಲೆ ಸದಾಶಿವ ಸಿದ್ದಪ್ಪ ಬೆಳಗಲಿ ಆಯ್ಕೆಯಾಗಿದ್ದಾರೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





