ಉಡುಪಿ: ಅ. 2ರಂದು ಗಾಂಧೀ ಜಯಂತಿ
ಉಡುಪಿ, ಸೆ.29: ಉಡುಪಿ ಜಿಲ್ಲಾಡಳಿತ, ನಗರಸಭೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜಯಂತಿ ಕಾರ್ಯಕ್ರಮ ಅ.2ರಂದು ಉಡುಪಿ ಅಜ್ಜರಕಾಡಿನ ಗಾಂಧೀ ಪಾರ್ಕ್‌ನಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 9 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಉದ್ಘಾಟಿಸಲಿದ್ದಾರೆ. ಶಾಸಕ ಕೆ.ರಘುಪತಿ ಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧೀಜಿ ಜೀವನದ ಯಶೋಗಾಥೆ ಕುರಿತು ಸಾಕ್ಷಚಿತ್ರ ಪ್ರದರ್ಶನ, ಅಪೂರ್ವ ಛಾಯಾಚಿತ್ರಗಳ ಪ್ರದರ್ಶನ, ಗಾಂಧೀಗೆ ಪ್ರಿಯವಾದ ಭಜನೆಗಳ ಗಾಯನ, ವಿಶೇಷ ಸಂಚಿಕೆ ಮತ್ತು ಕಿರುಪುಸ್ತಕಗಳ ಬಿಡುಗಡೆ, ಉಪನ್ಯಾಸ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





