ಒಕಿನಾವ ದ್ವೀಪಕ್ಕೆ ಅಪ್ಪಳಿಸಿದ ಚಂಡಮಾರುತ: ಕನಿಷ್ಠ 9 ಮಂದಿಗೆ ಗಾಯ

ಕಗೊಶಿಮ (ಜಪಾನ್), ಸೆ. 29: ಪ್ರಬಲ ಚಂಡಮಾರುತವೊಂದು ಶನಿವಾರ ಜಪಾನ್‌ನ ದಕ್ಷಿಣದ ದ್ವೀಪ ಒಕಿನಾವಕ್ಕೆ ಅಪ್ಪಳಿಸಿದ್ದು, ಕನಿಷ್ಠ 9 ಮಂದಿ ಗಾಯಗೊಂಡಿದ್ದಾರೆ.
ವಾರಾಂತ್ಯದಲ್ಲಿ ‘ಟ್ರಾಮಿ’ ಚಂಡಮಾರುತವು ಜಪಾನ್ ದ್ವೀಪ ಸಮೂಹಗಳ ಮೂಲಕ ಹಾದು ಹೋಗಲಿದೆ ಎಂದು ಹವಾಮಾನ ಅಧಿಕಾರಿಗಳು ಎಚ್ಚರಿಸಿದ್ದಾರೆ. ಅತ್ಯಂತ ವೇಗದ ಗಾಳಿಯ ಹೊಡೆತಕ್ಕೆ ಸಿಲುಕಿ ಮರಗಳ ಟೊಂಗೆಗಳು ತುಂಡಾಗಿವೆ ಹಾಗೂ ಬೃಹತ್ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಒಕಿನಾವದಲ್ಲಿ ಸುಮಾರು 600 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ. ಸುಮಾರು 2 ಲಕ್ಷ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
386 ವಿಮಾನಗಳ ಹಾರಾಟ ರದ್ದು
ಮುಖ್ಯವಾಗಿ ಪಶ್ಚಿಮ ಜಪಾನ್‌ನಲ್ಲಿ ಕನಿಷ್ಠ 386 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಸರಕಾರಿ ಟಿವಿ ಎನ್‌ಎಚ್‌ಕೆ ತಿಳಿಸಿದೆ. ಬಲವಾದ ಗಾಳಿ, ಎತ್ತರದ ಅಲೆಗಳು ಮತ್ತು ಭಾರೀ ಮಳೆಯನ್ನು ಎದುರಿಸಲು ಸಿದ್ಧವಾಗಿರುವಂತೆ ಹವಾಮಾನ ಇಲಾಖೆಯು ಒಕಿನಾವ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ.
Next Story







