ವೆಲಂಕನಿ ಮಾತೆಯ ಗುಡಿ ಧ್ವಂಸ ಪ್ರಕರಣ: ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ಬಂಟ್ವಾಳ, ಸೆ. 29: ವೆಲಂಕನಿ ಮಾತೆಯ ಗುಡಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇಲ್ಲಿನ ನಿವಾಸಿಗಳಾದ ಜಯರಾಮ ನಾಯ್ಕ, ಮೋನಪ್ಪ ನಾಯ್ಕ ಬಂಧಿತ ಆರೋಪಿಗಳು.
ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ದಸ್ತಗಿರಿ ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ಶನಿವಾರ ಎಸಿಜೆ ಮತ್ತು ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಅ.12ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಸೆ. 27ರಂದು ರಾತ್ರಿ ದುಷ್ಕರ್ಮಿಗಳ ತಂಡವೊಂದು ತಾಲೂಕಿನ ವಿಟ್ಲ-ಕೊಳ್ನಾಡು ಗ್ರಾಮದ ಕುಲಾಳು ಎಂಬಲ್ಲಿ ವೆಲಂಕಣಿ ಮಾತೆಯ ಗುಡಿಯನ್ನು ಧ್ವಂಸ ಮಾಡಿ, ಆ ಜಾಗದಲ್ಲಿ ಕೇಸರಿ ಧ್ವಜ ಇಡಲಾಗಿತ್ತು ಎಂಬ ಆರೋಪದಡಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





