ಬೆಂಗಳೂರು : ಅಕ್ರಮ ಪಬ್, ರೆಸ್ಟೋರೆಂಟ್‌ಗಳ ಮೇಲೆ ದಾಳಿ
ಬೆಂಗಳೂರು, ಸೆ.29: ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ 20ಕ್ಕೂ ಅಧಿಕ ಮದ್ಯದಂಗಡಿ, ಪಬ್, ರೆಸ್ಟೋರೆಂಟ್‌ಗಳ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿ, ಸಂಬಂಧಪಟ್ಟ ಮಾಲಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ನಗರದ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ತಂಡವು ಶುಕ್ರವಾರ ತಡರಾತ್ರಿ ಎಂ.ಜಿ. ರಸ್ತೆಯ ಲೇಸ್, ಇಂದಿರಾನಗರದ ವೇಪರ್, ಬ್ರಿಗೇಡ್ ರಸ್ತೆ, ಮೆಜೆಸ್ಟಿಕ್, ಇಂದಿರಾನಗರ, ಉಪ್ಪಾರಪೇಟೆಯ ಪಬ್ ಸೇರಿದಂತೆ 20ಕ್ಕೂ ಅಧಿಕ ಪಬ್ ಮತ್ತು ಬಾರ್‌ಗಳಮೇಲೆ ದಾಳಿ ನಡೆಸಿ, ಪರಿಶೀಲಿಸಿದರು.
ಪಬ್‌ಗಳಲ್ಲಿ ಅಕ್ರಮ ಚಟುವಟಿಕೆ, ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಅಕ್ರಮ ಚಟುವಟಿಕೆ ನಡೆಸುತ್ತಿರುವುದು ಕಂಡು ಬಂದಿದೆ. ಸುಮಾರು 30ಕ್ಕೂ ಹೆಚ್ಚು ಯುವತಿಯರನ್ನು ರಕ್ಷಣೆ ಮಾಡಲಾಗಿದ್ದು, ಕೆಲ ಪಬ್ ಮಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Next Story





