Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕಿನಾರೆ: ಪ್ರೇಮದ ಕಿನಾರೆಯಲ್ಲಿ ದ್ವೇಷದ...

ಕಿನಾರೆ: ಪ್ರೇಮದ ಕಿನಾರೆಯಲ್ಲಿ ದ್ವೇಷದ ಅಲೆ

ಕನ್ನಡ ಸಿನೆಮಾ

ಶಶಿಶಶಿ30 Sept 2018 12:05 AM IST
share
ಕಿನಾರೆ: ಪ್ರೇಮದ ಕಿನಾರೆಯಲ್ಲಿ ದ್ವೇಷದ ಅಲೆ

ಕಿನಾರೆ

ಕಾಸರಗೋಡಿನ ಎಂಡೋಸಲ್ಫಾನ್ ಬಾಧಿತರ ಕುರಿತಾದ ಚಿತ್ರ ಎಂದು ಸುದ್ದಿಯಾಗಿದ್ದ ಸಿನೆಮಾ ಕಿನಾರೆ. ಆದರೆ ಸಿನೆಮಾ ನೋಡಿದಾಗ ಇದು ಅದೇ ರೀತಿಯ ಮತ್ತೊಂದು ಘಟನೆಯಿಂದ ಬಾಧಿತಗೊಂಡವರ ಕತೆ ಎನ್ನುವುದು ಅರಿವಾಗುತ್ತದೆ. ಆದರೆ ಚಿತ್ರದಲ್ಲಿ ಅದರ ಪರಿಹಾರದ ಬಗ್ಗೆ ಚಿತ್ರಿಸಲಾಗಿದೆಯಾ ಎಂದರೆ ಇಲ್ಲವೆಂದೇ ಹೇಳಬೇಕು.
ವಿಕಲಚೇತನ ಜೋಡಿಗಳ ಪ್ರೇಮ ಕತೆಗೆ ಒತ್ತು ನೀಡಿರುವ ಚಿತ್ರ ಇದು. ಹಾಗಂತ ಅವರ ಪ್ರೀತಿಯಲ್ಲಿನ ವಿಭಿನ್ನತೆಯನ್ನೋ ವಿಶಿಷ್ಟತೆಯನ್ನೋ ಇಲ್ಲಿ ಮನ ಮುಟ್ಟುವಂತೆ ತೋರಿಸಲಾಗಿಲ್ಲ. ಹಾಗಾಗಿಯೇ ಇದೊಂದು ಮನಮುಟ್ಟದ ಪ್ರೇಮಕತೆಯಾಗಿಯೇ ಉಳಿಯುತ್ತದೆ.
ಚಿತ್ರದಲ್ಲಿ ಕರಾವಳಿಯ ಒಂದು ಊರಿನ ಚಿತ್ರಣವಿದೆ. ಅಲ್ಲಿರುವ ಬಹುತೇಕ ಯುವ ಸಮುದಾಯಕ್ಕೆ ಬುದ್ಧಿ ಬೆಳೆದಿರುವುದಿಲ್ಲ. ಅದಕ್ಕೆ ಎರಡು ದಶಕಗಳ ಹಿಂದೆ ಗರ್ಭಿಣಿಯರಿಗೆ ನೀಡಲಾದ ಔಷಧ ಎನ್ನುವುದು ವೈಜ್ಞಾನಿಕ ಕಾರಣವಾಗಿರುತ್ತದೆ. ಅದೇ ಸಮಯ ಊರಿನ ಪುರೋಹಿತ ಅದಕ್ಕೆ ದೇವಿಯ ಶಾಪವೇ ಕಾರಣ ಎಂದು ಹೇಳುತ್ತಿರುತ್ತಾನೆ. ಆ ಹಳ್ಳಿಯ ಮಂದಿ ಪುರೋಹಿತನ ಮಾತನ್ನು ನಂಬಿಕೊಂಡಿರುತ್ತಾರೆ. ಆದರೆ ಇದೀಗ ಹಳ್ಳಿಗೆ ಬರುವ ವೈದ್ಯರೊಬ್ಬರು ಈ ಬುದ್ಧಿ ಬೆಳೆಯದ ಮಕ್ಕಳನ್ನು ಸಾಮಾನ್ಯರಂತೆ ಬದಲಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಒಂದಷ್ಟು ವಿರೋಧಗಳ ನಡುವೆಯೂ ಅಂಥ ಯುವ ಸಮುದಾಯವನ್ನು ಒಂದಾಗಿ ಸೇರಿಸಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಯುತ್ತದೆ. ಹಾಗೆ ಚಿಕಿತ್ಸೆಗೆಂದು ಸೇರಿಕೊಂಡವರಲ್ಲಿ ರಂಗ ಎಂಬ ಯುವಕ ಮತ್ತು ಮೀರಾ ಎಂಬ ಯುವತಿ ಪರಸ್ಪರ ಆತ್ಮೀಯರಾಗುತ್ತಾರೆ. ಮುಂದೇನಾಗುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಅಂಶ.
ವೈದ್ಯರ ವಿಶೇಷ ಚಿಕಿತ್ಸೆಯ ಬಗ್ಗೆ ಹೇಳಲಾಗಿದ್ದರೂ ಅದನ್ನು ಪರಿಣಾಮಕಾರಿಯಾಗಿ ತೋರಿಸುವಲ್ಲಿ ನಿರ್ದೇಶಕ ದೇವರಾಜ ಪೂಜಾರಿ ಎಡವಿದ್ದಾರೆ. ರಂಗನಾಗಿ ನವನಟ ಸತೀಶ್ ರಾಜ್ ಆಕರ್ಷಕ ನಟನೆ ನೀಡಿದ್ದಾರೆ. ಅವರ ಪೆದ್ದುತನದ ವ್ಯಕ್ತಪಡಿಸುವಿಕೆಯಲ್ಲಿ ಕಣ್ಣುಗಳು ಕೂಡ ನಿಷ್ಕಲ್ಮಶ ಭಾವ ಸೂಸುತ್ತವೆ. ಮೀರಾ ಪಾತ್ರದಲ್ಲಿ ನವನಟಿ ಗೌತಮಿ ಕೂಡ ಸರಳ ಸುಂದರಿಯಾಗಿ ಗಮನ ಸೆಳೆಯುತ್ತಾರೆ. ರಂಗನ ತಾಯಿಯ ಪಾತ್ರದಲ್ಲಿ ವೀಣಾ ಸುಂದರ್ ಎಂದಿನಂತೆ ಆತ್ಮೀಯರಾಗುತ್ತಾರೆ. ವೈದ್ಯರಾಗಿ ಸಿಹಿಕಹಿ ಚಂದ್ರು ಅಪರೂಪದಲ್ಲಿ ಗಂಭೀರ ಪಾತ್ರಕ್ಕೆ ಜೀವ ನೀಡಿದ್ದಾರೆ. ಪುರೋಹಿತನ ಖಳ ಛಾಯೆಗೆ ಹಿರಿಯ ನಟ ದತ್ತಣ್ಣ ಅದ್ಭುತ ಭಾವ ವಿನಿಮಯ ನಡೆಸಿದ್ದಾರೆ. ಜಾನಿ ಎಂಬ ಯುವಕನ ಪಾತ್ರದಲ್ಲಿ ಶಮಂತ್ ಶೆಟ್ಟಿ ಎಂಬ ಯುವ ಪ್ರತಿಭೆ ಭರವಸೆ ಮೂಡಿಸುವ ನಟನೆ ನೀಡಿದ್ದಾರೆ. ದಿನೇಶ್ ಮಂಗಳೂರು ಅವರ ಪಾತ್ರಕ್ಕೆ ಸರಿಯಾದ ಚೌಕಟ್ಟುಗಳಿಲ್ಲ. ಒಟ್ಟು ಚಿತ್ರ ಕೂಡ ಒಂದು ತಾರ್ಕಿಕ ಅಂತ್ಯ ಕಾಣುವಲ್ಲಿ ಸೋಲುತ್ತದೆ. ಹಾಗಾಗಿ ಚಿತ್ರದ ಆಶಯ ಏನು ಎನ್ನುವುದು ಕೊನೆಗೂ ವ್ಯಕ್ತವಾಗುವುದೇ ಇಲ್ಲ. ಆದರೆ ಹೊಸತನದ ಪ್ರಾಮಾಣಿಕ ಪ್ರಯತ್ನ ನಡೆದಿರುವುದನ್ನು ಮಾತ್ರ ಒಪ್ಪಿಕೊಳ್ಳಲೇಬೇಕು. ಸಾಮಾನ್ಯವಾಗಿ ಶ್ರೇಷ್ಠ ನಿರ್ದೇಶಕರು ಎನಿಸಿಕೊಂಡವರೇ ವಿಕಲಚೇತನ ಪಾತ್ರಗಳನ್ನು ಹಾಸ್ಯಕ್ಕೆ ಸೀಮಿತಗೊಳಿಸುವಾಗ ಅವರನ್ನೇ ಪ್ರಧಾನ ಪಾತ್ರಗಳಾಗಿ ಆರಿಸಿಕೊಂಡ ನಿರ್ದೇಶಕರ ಸಾಹಸ ಶ್ಲಾಘನೀಯ.
ಚಿತ್ರವನ್ನು ಆರಂಭದಿಂದ ಕೊನೆಯತನಕ ನಯನ ಮನೋ ಹರಗೊಳಿಸುವಲ್ಲಿ ಛಾಯಾ ಗ್ರಾಹಕ ಅಭಿಷೇಕ್ ಕಾಸರಗೋಡು ಅವರ ಪಾತ್ರ ಪ್ರಮುಖವಾಗಿದೆ. ಆದರೆ ಕೆಲವೊಮ್ಮೆ ಏರಿಯಲ್ ಶಾಟ್ ಮತ್ತು ಹಿಂಬದಿಯ ಚಿತ್ರೀಕರಣ ಕೂಡ ಆ ದೃಶ್ಯಗಳಲ್ಲಿ ಅನಗತ್ಯವೇನೋ ಎಂದು ಅನಿಸದಿರದು. ಒಟ್ಟಿನಲ್ಲಿ ಕಿನಾರೆಯ ಮಂದಿ ಹೊಸ ಪ್ರಯೋಗಕ್ಕೆ ಹೊರಟಿದ್ದಾರೆ ಎನ್ನುವುದನ್ನು ಚಿತ್ರ ಸಾಬೀತುಗೊಳಿಸಿದೆ.

ತಾರಾಗಣ: ಸತೀಶ್ ರಾಜ್, ಗೌತಮಿ, ಸಿಹಿಕಹಿಚಂದ್ರು, ವೀಣಾ ಸುಂದರ್
ನಿರ್ದೇಶನ: ದೇವರಾಜ್ ಪೂಜಾರಿ
ನಿರ್ಮಾಣ: ರೆಡ್ ಆ್ಯಪಲ್ ಮೂವೀಸ್

share
ಶಶಿ
ಶಶಿ
Next Story
X