Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನೂರೈವತ್ತು-ಮತ್ತೊಂದು ಪ್ರಹಸನ?

ನೂರೈವತ್ತು-ಮತ್ತೊಂದು ಪ್ರಹಸನ?

ಜಿ.ಎನ್.ರಂಗನಾಥ ರಾವ್ಜಿ.ಎನ್.ರಂಗನಾಥ ರಾವ್30 Sept 2018 12:14 AM IST
share
ನೂರೈವತ್ತು-ಮತ್ತೊಂದು ಪ್ರಹಸನ?

ನಿಜಕ್ಕೂ ಆರೆಸ್ಸೆಸ್ ಪರಿವಾರ ಮತ್ತು ಬಿಜೆಪಿಯವರ ಈ ಗಾಂಧಿ ‘ಪ್ರೀತಿ’ ಅಸಲಿಯಾಗಿದ್ದಲ್ಲಿ ಅವರು ಮೊದಲು ತಮ್ಮ ಅಂತರಂಗದಲ್ಲಿನ ಗಾಂಧಿ ದ್ವೇಷದ ಕೊಳೆಯನ್ನು ತೊಳೆದುಕೊಳ್ಳಬೇಕು. ಎಳೆಯ ತಲೆಮಾರಿನವರಿಗೆ ಗಾಂಧಿ ದ್ವೇಷ ಬೋಧಿಸುವ ಗುಪ್ತ ಕಾರ್ಯಾಚರಣೆ ನಿಲ್ಲಬೇಕು. ಜಾಲತಾಣಗಳಲ್ಲಿರುವ ಗಾಂಧಿ ದ್ವೇಷದ ಸಂದೇಶಗಳನ್ನು ಅಳಿಸಿಹಾಕಬೇಕು. ಗೋಹತ್ಯೆ ವಿರೋಧಿಸುವ ನೆಪದಲ್ಲಿ, ಲವ್ ಜಿಹಾದ್ ಇತ್ಯಾದಿ ನೆಪಗಳಲ್ಲಿ ತಾನು ಪೋಷಿಸಿರುವ ದಳಗಳು-ಪಡೆಗಳು ನಡೆಸಿರುವ ಹಿಂಸಾಚಾರಗಳು, ‘ಲಿಂಚಿಂಗ್‌ಗಳು’ ನಿಲ್ಲಬೇಕು. ಆಗ ಇವರ ಇತ್ತೀಚಿನ ಗಾಂಧಿ ಪ್ರೀತಿಯ ಬಣ್ಣ ಬಯಲಾದೀತು.


ನಾಳೆ ಕಳೆದು ನಾಳಿದ್ದು ಬೆಳಗಾದರೆ ಗಾಂಧಿ ಜಯಂತಿ. ಈ ವರ್ಷದ ಗಾಂಧಿ ಜಯಂತಿ ಎಂದಿನಂತಲ್ಲ. ವಿಶೇಷವಾದದ್ದು. ಏಕೆಂದರೆ ಇದು ನಮ್ಮ ಅಕ್ಕರೆಯ ಬಾಪೂನ ನೂರೈವತ್ತನೆಯ ಜನ್ಮದಿನ. ನೂರೈವತ್ತನೆಯ ಬಾಪೂ ಜನ್ಮದಿನೋತ್ಸವಕ್ಕೆ ಸರಕಾರ, ರಾಜಕೀಯ ಪಕ್ಷಗಳು,ವಿವಿಧ ಸಂಘಟನೆಗಳು ಭರದಿಂದ ಸಿದ್ಧತೆ ನಡೆಸಿವೆ. ಕೇಂದ್ರ ಸರಕಾರವಂತೂ ಬಾಪೂ ಹೆಸರಿನಲ್ಲೇ ಆರಂಭಿಸಿರುವ ಸ್ವಚ್ಛತಾ ಅಭಿಯಾನದ ಯಶಸ್ಸಿನ ಧ್ವಜ ಹಾರಿಸಲು ಪ್ರಚಂಡ ಉತ್ಸಾಹದಿಂದ ಸಿದ್ಧತೆಗಳನ್ನು ನಡೆಸಿದೆ. ಅಖಿಲ ಭಾರತ ಕಾಂಗ್ರೆಸ್ ಪಕ್ಷವು ಅಂದು ವರ್ಧಾದಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿ, ‘‘ದೇಶವನ್ನು ಭಯ, ದ್ವೇಷ ಮತ್ತು ಹಿಂಸಾಚಾರಗಳಿಂದ ಮುಕ್ತಗೊಳಿಸುವ’’ ಲೋಕ ಸಂಪರ್ಕ ಅಭಿಯಾನ ನಡೆಸುವ ನಿರ್ಧಾರ ಕೈಗೊಳ್ಳುವ ಉತ್ಸಾಹದಲ್ಲಿದೆ. ಕರ್ನಾಟಕದಲ್ಲಿ ‘ಗ್ರಾಮ ಸೇವಾ ಸಂಘ’ ಎಂಬ ಯುವಜನರ ಸಂಘಟನೆಯೊಂದು ಸಾಮೂಹಿಕ ಉಪವಾಸ ಸತ್ಯಾಗ್ರಹದ ಮೂಲಕ ಗಾಂಧಿಯವರನ್ನು ಫ್ಯಾಷನ್ನಿನ ಐಕಾನ್ ಮಾಡಲು ಸಡಗರದ ಸಿದ್ಧತೆ ನಡೆಸಿದೆಯೆಂದು ಈಚಿನ ದಿನಗಳಲ್ಲಿ ಗ್ರಾಮಸ್ವರಾಜ್ಯದ ಕ್ರಿಯಾವಾದಿಯಾಗಿ ಸಕ್ರಿಯವಾಗಿರುವ ರಂಗಕರ್ಮಿ ಪ್ರಸನ್ನ ಬರೆಯುತ್ತಾರೆ.

ಕರ್ನಾಟಕದಲ್ಲಿ ಗಾಂಧೀಜಿಯವರ ನೂರೈವತ್ತನೆ ಜನ್ಮದಿನೋತ್ಸವದ ಸಡಗರ-ಸಂಭ್ರಮಗಳಿಗೆ ಗರಿಹಚ್ಚಿದಂತೆ ಕರ್ನಾಟಕ ಸರಕಾರ ಈ ವರ್ಷದ ಗಾಂಧಿಪ್ರಶಸ್ತಿಗೆ ಪ್ರಸನ್ನರನ್ನು ಆಯ್ಕೆಮಾಡಿದೆ. ಪ್ರಸನ್ನರಿಗೆ ಅಭಿನಂದನೆಗಳು. ಅಸ್ಪಶ್ಯತೆ ನಿರ್ಮೂಲನೆ, ದಲಿತೋದ್ಧಾರ, ಹಿಂದೂ-ಮುಸ್ಲಿಂ ಸಾಮರಸ್ಯ, ಅಹಿಂಸೆ ಮೊದಲಾದ ಗಾಂಧಿಯವರ ದರ್ಶನಗಳ ಅನುಷ್ಠಾನಕ್ಕಿಂತ ಗಾಂಧೀಜಿಯವರನ್ನು ಒಂದು ರಾಜಕೀಯ ಬಂಡವಾಳವಾಗಿ ಮಾಡಿಕೊಂಡು ಅವರ ಹೆಸರಿನಲ್ಲಿ ಲಾಭ ಪಡೆದುಕೊಂಡದ್ದಕ್ಕೆ ಸ್ವತಂತ್ರ ಭಾರತದಲ್ಲಿ ಲೆಕ್ಕವಿಲ್ಲದಷ್ಟು ಉದಾಹರಣೆಗಳು ಸಿಗುತ್ತವೆ. ಇದರಲ್ಲಿ ಮೊದಲ ಸ್ಥಾನ ಅಖಿಲ ಭಾರತ ಕಾಂಗ್ರೆಸ್ ಪಕ್ಷದ್ದು. ಈಗ ಭಾರತೀಯ ಜನತಾ ಪಕ್ಷದ ಸರದಿ. ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷ ವಿಸರ್ಜಿಸ ಬೇಕೆಂಬ ಗಾಂಧೀಜಿಯವರ ಅಪೇಕ್ಷೆಗೆ ಎಳ್ಳಷ್ಟೂ ಬೆಲೆಕೊಡದ ಅಂದಿನ ಧುರೀಣರು ಅಧಿಕಾರದ ಸವಿಗಾಗಿ ಹಂಬಲಿಸುತ್ತಿದ್ದರು.

1947ರ ಫೆಬ್ರವರಿ 20ರಂದು ಬ್ರಿಟನ್ ಪ್ರಧಾನ ಮಂತ್ರಿ ಅಟ್ಲಿಯವರು ಬ್ರಿಟನ್ ಭಾರತವನ್ನು ತ್ಯಜಿಸುವ ಐತಿಹಾಸಿಕ ಪ್ರಕಟನೆ ಹೊರಡಿಸಿದ ನಂತರ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕೊನೆಯ ದೃಶ್ಯಕ್ಕೆ ರಂಗ ಸಜ್ಜಾಗುತ್ತಿತ್ತು. ಅದು ತನ್ನ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಸುದೀರ್ಘ ಹೋರಾಟ ನಡೆಸಿದ ಮೋಹನದಾಸ್ ಕರಮ್‌ಚಂದ್ ಗಾಂಧಿಯವರ ಬದುಕಿನ ಕೊನೆಯ ಅಂಕವೂ ಆಗಲಿತ್ತು, ಆತ ಭಗವಂತನಿಗೆ ಆತ್ಮಾರ್ಪಣೆ ಮಾಡುವ ಕೊನೆಯ ಅಂಕವೂ ಆಗಲಿತ್ತು ಎನ್ನುವುದನ್ನು ಯಾರೂ ಆಗ ಊಹಿಸಿರಲಾರರು. ಗಾಂಧಿಯವರ ಕೊಲೆಯಾಯಿತು. ದೇಶಕ್ಕೆ ದೇಶವೇ ದುಃಖತಪ್ತವಾಯಿತು. ಕ್ರಮೇಣ ದುಃಖ ಮಾಸಿದಂತೆ ಗಾಂಧಿ ಮತ್ತು ಅವರ ಜಯಂತಿ ಒಂದು ರಾಜಕೀಯ ಲಾಭದ ಸಾಧನವಾಯಿತು. ತಮ್ಮ ಕೊಲೆಯಲ್ಲೇ ಗಾಂಧಿ ಈ ದೇಶದ ರಾಜಕೀಯದಲ್ಲಿ ಮರುಹುಟ್ಟು ಪಡೆದಿದ್ದರು.ಗಾಂಧಿಯವರ ಆದರ್ಶ ತತ್ವಗಳ ಅನುಷ್ಠಾನ ಮರೆತ ಆಳುವ ಮಂದಿ ಅವರ ಹೆಸರಿನಲ್ಲಿ, ಅವರ ಆದರ್ಶಗಳ, ತತ್ವಗಳ ಪ್ರಚಾರದಲ್ಲಿ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಂಡರು. ಕವಿ ವಾಣಿಯಂತೆ ‘ನಿನಗೆ ಗುಡಿ ಕಟ್ಟಿ ಅವರು ಬಚ್ಚಲಲ್ಲೇ ನಿಂತರು’.

ಇದು ಕಾಂಗ್ರೆಸ್‌ನ ಗಾಂಧಿ ಪ್ರೀತಿಯ ಒಂದು ಪರಿಯಾದರೆ ಇನ್ನೊಂದು ಪರಿಯನ್ನು ಗಾಂಧಿ ದ್ವೇಷದಲ್ಲಿ ಕಾಣಬಹುದು. ಸ್ವಾತಂತ್ರ್ಯದ ಪೂರ್ವದಿಂದಲೂ ದೇಶದಲ್ಲಿ ಹಿಂದೂ ಮಹಾ ಸಭಾದಂಥ ಗಾಂಧಿ ವಿರೋಧಿ ಸಂಘಟನೆಗಳು ಕೆಲಸಮಾಡುತ್ತಿದ್ದವು ಎನ್ನುವುದು ಐತಿಹಾಸಿಕ ಸತ್ಯ. ಈ ದ್ವೇಷ ಗಾಂಧಿಯವರ ಕಗ್ಗೊಲೆಯಲ್ಲಿ ಪರಾಕಾಷ್ಠೆಗೇರಿದ್ದು ಇತಿಹಾಸದ ದುರಂತ ಸತ್ಯಗಳಲ್ಲೊಂದು. ಗಾಂಧೀಜಿಯವರನ್ನು, ಅಹಿಂಸಾಮಾರ್ಗವೂ ಸೇರಿದಂತೆ ಅವರ ತತ್ವಾದರ್ಶಗಳನ್ನು ಯಾವತ್ತೂ ಹೃತ್ಪೂರ್ವಕವಾಗಿ ಒಪ್ಪದ, ಅವರ ಹತ್ಯೆಯನ್ನು ಖಂಡಿಸದ ಆರೆಸ್ಸೆಸ್ ಪರಿವಾರದ ರಾಜಕೀಯ ಅಂಗವಾದ ಭಾರತೀಯ ಜನತಾ ಪಕ್ಷವೂ ತನ್ನ ರಾಜಕೀಯ ಲಾಭಕ್ಕೆ ಗಾಂಧಿಯವರ ಹೆಸರನ್ನು ಬಳಸಿಕೊಳ್ಳಲು ನಾಚಿಕೆ ಪಡಲಿಲ್ಲ. ದಲಿತೋದ್ಧಾರ, ಹಿಂದೂಮುಸ್ಲಿಂ ಸಾಮರಸ್ಯ, ಗ್ರಾಮ ಸ್ವರಾಜ್ಯ ಮೊದಲಾದ ಗಾಧಿ ಆದರ್ಶಗಳಿಗಿಂತ ಅವರ ಸ್ವಚ್ಛತೆ ಬಿಜೆಪಿ ಧುರೀಣರಿಗೆ ಹೆಚ್ಚು ಆಕರ್ಷಕವಾಗಿ ಕಂಡಿರಲಿಕ್ಕೆ ಕಾರಣ ಅದರಲ್ಲಿ ಮಾತೃ ಸಂಸ್ಥೆಯ ಪರಿವಾರಕ್ಕೆ ಕೋಪವುಂಟುಮಾಡುವ ರೀತಿಯ ತಾತ್ವಿಕ ರಾಜಿಗಳು ಏನೂ ಇಲ್ಲ ಎಂಬುದೇ ಆಗಿದೆ. ಹೀಗೆ, ಮೋದಿಯವರ ರಾಷ್ಟ್ರೀಯ ಸ್ವಚ್ಛತಾ ಅಭಿಯಾನಕ್ಕೆ ಗಾಂಧಿ ಸುಲಭವಾಗಿ ಲಾಂಛನವಾಗಿಬಿಟ್ಟರು.

ಗಾಂಧಿ ಹೆಸರಿನಲ್ಲಿ ಇಡೀ ದೇಶವನ್ನೇ ಸ್ವಚ್ಛಗೊಳಿಸಲು ಹೊರಟಿರುವ ಪಕ್ಷವನ್ನು ಗಾಂಧಿ ದ್ವೇಷಿ ಎಂದು ಕರೆಯಲಾದೀತೆ? ಜನಮರುಳೋ ಜಾತ್ರೆ ಮರುಳೋ! ಜನತೆ ಗಾಂಧಿ ನಾಮಾಂಕಿತ ಮೋದಿ ಸ್ವಚ್ಛತಾ ಅಭಿಯಾನಕ್ಕೆ(ರಾಜಕೀಯ ಅಭಿಯಾನಕ್ಕೆ)‘ಜೈ’ ಎಂದು ಬಿಟ್ಟಿತು. ಸ್ವಚ್ಛತೆ ಅಂತರಂಗದಿಂದ ಶುರುವಾಗಬೇಕು ಎಂಬುದನ್ನು ಈ ಜನ ಅರಿಯಲಿಲ್ಲ. ನಿಜಕ್ಕೂ ಪರಿವಾರ ಮತ್ತು ಬಿಜೆಪಿಯವರ ಈ ಗಾಂಧಿ ‘ಪ್ರೀತಿ’ ಅಸಲಿಯಾಗಿದ್ದಲ್ಲಿ ಅವರು ಮೊದಲು ತಮ್ಮ ಅಂತರಂಗದಲ್ಲಿನ ಗಾಂಧಿ ದ್ವೇಷದ ಕೊಳೆಯನ್ನು ತೊಳೆದುಕೊಳ್ಳಬೇಕು. ಎಳೆಯ ತಲೆಮಾರಿನವರಿಗೆ ಗಾಂಧಿ ದ್ವೇಷ ಬೋಧಿಸುವ ಗುಪ್ತ ಕಾರ್ಯಾಚರಣೆ ನಿಲ್ಲಬೇಕು. ಜಾಲತಾಣಗಳಲ್ಲಿರುವ ಗಾಂಧಿ ದ್ವೇಷದ ಸಂದೇಶಗಳನ್ನು ಅಳಿಸಿಹಾಕಬೇಕು. ಗೋಹತ್ಯೆ ವಿರೋಧಿಸುವ ನೆಪದಲ್ಲಿ, ಲವ್ ಜಿಹಾದ್ ಇತ್ಯಾದಿ ನೆಪಗಳಲ್ಲಿ ತಾನು ಪೋಷಿಸಿರುವ ದಳಗಳು-ಪಡೆಗಳು ನಡೆಸಿರುವ ಹಿಂಸಾಚಾರಗಳು, ‘ಲಿಂಚಿಂಗ್‌ಗಳು’ ನಿಲ್ಲಬೇಕು. ಆಗ ಇವರ ಇತ್ತೀಚಿನ ಗಾಂಧಿ ಪ್ರೀತಿಯ ಬಣ್ಣ ಬಯಲಾದೀತು.

ಗಾಂಧೀಜಿಯವರ ನೂರೈವತ್ತನೆ ಜನ್ಮದಿನೋತ್ಸವದ ಆಚರಣೆ ಕೇವಲ ಸಾಂಕೇತಿಕವಾಗಬಾರದು, ಮಹಾತ್ಮಾ ಗಾಂಧಿಯವರ ಚಿಂತನೆಗಳು ಬದುಕಿನ ಭಾಗವಾಗಬೇಕು ಎನ್ನುವ ಜ್ಞಾನೋದಯವೂ ಈಗ ಬಿಜೆಪಿ ನಾಯಕರಲ್ಲಿ ಆಗಿರುವಂತಿದೆ. ದ್ವೇಷ, ಹಿಂಸೆಗಳನ್ನು ಮೌನಸಮ್ಮತಿಯಂದ ಪ್ರೋತ್ಸಾಹಿಸುವವರ ಬಾಯಿಂದಲೇ ಈ ಮಾತುಗಳು ಬರುತ್ತಿರುವುದು ಸೋಜಿಗವುಂಟುಮಾಡಿದರೂ ಅದರ ಹಿಂದಿನ ಬರಲಿರುವ ಚುನಾವಣೆಯ ಷಡ್ಯಂತ್ರ ಗುಟ್ಟಾಗಿ ಉಳಿದಿಲ್ಲ. ಗಾಂಧಿಯವರ ನೂರೈವತ್ತನೇ ಜಯಂತಿಯನ್ನು ಹೇಗೆ ಆಚರಿಸಬೇಕೆಂದು ಶಿಫಾರಸು ಮಾಡಲು ಸರಕಾರ ಸಮಿತಿಯೊಂದನ್ನು ರಚಿಸಿದ್ದು ಅದರಲ್ಲಿ ಗಾಂಧಿ ದ್ವೇಷವನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಿತ್ತಿದ ಸಂಘಟನೆಗಳ ಪ್ರಭೃತಿಗಳೂ ಇದ್ದಾರಂತೆ! ಈ ಸಮಿತಿಯಲ್ಲಿ ನಿಜವಾದ ದೇಶಭಕ್ತರೂ ಗಾಂಧಿತತ್ವನಿಷ್ಠರೂ ಇರಬಹುದು.

ಈ ವೇಳೆಗೆ ಸಮಿತಿ ತನ್ನ ವರದಿಯನ್ನು ಕೊಟ್ಟಿರಲಿಕ್ಕೂ ಸಾಕು. ಅಥವಾ ಮುಂದೆ ಕೊಡಬಹುದು. ಈ ಸಮಿತಿಗೆ, ದ್ವೇಷ ಪೂರ್ವಾಗ್ರಹದಿಂದಲೇ ಜಯಂತಿ ಆಚರಿಸಲು ಹೊರಟಿರುವ ನಾಯಕತ್ವಕ್ಕೆ ಸತ್ಯ ಸಂಗತಿಗಳನ್ನು ತಿಳಿಸುವ, ಬುದ್ಧಿ ಹೇಳುವ ಧೈರ್ಯವಿದ್ದೀತೇ? ಬೇರೊಬ್ಬರ ಅಭಿಪ್ರಾಯಕ್ಕೆ ಸೊಪ್ಪುಹಾಕದ, ತನ್ನದೇ ಅಖೈರು ನಿರ್ಧಾರವೆನ್ನುವ ನಾಯಕತ್ವ, ಸಮಿತಿ ಸತ್ಯ ನಿಷ್ಠುರವಾದ ಶಿಫಾರಸುಗಳನ್ನು ಮಾಡಿದ್ದರೂ ಅದನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಗಾಂಧಿ ಮತ್ತು ಅಂಬೇಡ್ಕರ್ ಅವರು ಚುನಾವಣಾ ಅನುಕೂಲಸಿಂಧುವಾಗಿ ಈಗ ಬಿಜೆಪಿಗೆ ಒದಗಿ ಬಂದಿದ್ದಾರೆ. ಗಾಂಧಿ ಮತ್ತು ಅಂಬೇಡ್ಕರ್ ಎಂಬ ಎರಡು ಅಯಸ್ಕಾಂತಗಳನ್ನು ಇಟ್ಟುಕೊಂಡು ಮತಬ್ಯಾಂಕ್ ಸೃಷ್ಟಿಸಿಕೊಳ್ಳುವುದರಲ್ಲಿ ಬಿಜೆಪಿ ಹಿಂದೆ ಬಿದ್ದಿಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಆರೆಸ್ಸೆಸ್ ಮತ್ತು ಪರಿವಾರ ಹಾಗೂ ಬಿಜೆಪಿಗಳಿಗೆ ಗಾಂಧೀಜಿಯವರ ಬಗ್ಗೆ ಇರುವ ಪೂರ್ವಾಗ್ರಹಗಳು ಲೋಕವಿದಿತವಾದವು. ಈಗ ನೂರೈವತ್ತನೆಯ ಜನ್ಮದಿನೋತ್ಸವ ಸಂದರ್ಭದಲ್ಲಿ ಅವರು ತೋರಿಸುತ್ತಿರುವ ಆಸಕ್ತಿ, ಉತ್ಸಾಹಗಳು ನಿಜವಾಗಿಯೂ ಅವರಲ್ಲಾಗಿರುವ ಹೃದಯಪರಿವರ್ತನೆಯ ಸೂಚಿಯೇ ಆಗಿದ್ದಲ್ಲಿ ಆ ಸಾಚಾತನವನ್ನು ಸ್ಪಷ್ಟವಾಗಿ ಸಾಬೀತುಗೊಳಿಸುವ ಹೊಣೆ ಅವರ ಮೇಲೇ ಇದೆ. ಯಾವುದೇ ಉತ್ಸವ, ಅಭಿಯಾನಗಳಿಗೂ ಮೊದಲು ರಾಷ್ಟ್ರಾದ್ಯಂತ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆದಿರುವ ಹಲ್ಲೆಯನ್ನು ನಿಲ್ಲಿಸುವುದೇ ಗಾಂಧೀಜಿಯವರಿಗೆ ಅವರ ನೂರೈವತ್ತನೆಯ ಹುಟ್ಟುಹಬ್ಬದ ಅತ್ಯಮೂಲ್ಯ ಉಡುಗೊರೆಯಾದೀತು. ಈ ವಿಚಾರದಲ್ಲಿ, ಕಾಯ್ದೆ ಸುವ್ಯವಸ್ಥೆ ರಾಜ್ಯಗಳ ಹೊಣೆ ಎಂದು ಹೆಚ್ಚುದಿನ ಕೇಂದ್ರ ಸರಕಾರ ಮತ್ತು ಬಿಜೆಪಿ ಕೈತೊಳೆದುಕೊಳ್ಳಲಾಗದು. ಹೆಚ್ಚು ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವುದು ಹಾಗೂ ಆ ರಾಜ್ಯಗಳಲ್ಲೇ ಗುಂಪುಹಲ್ಲೆ ಮತ್ತು ಹತ್ಯೆಗಳು ನಡೆದಿರುವುದು. ಅದನ್ನು ತಡಗಟ್ಟದೇ ಹೋದಲ್ಲಿ, ನೂರೈವತ್ತನೇ ಜನ್ಮದಿನ ಆಚರಣೆಯ ಉತ್ಸಾಹ, ಉದ್ದೇಶಗಳೆಲ್ಲ ಆಷಾಢಭೂತಿತನದ್ದೆಂದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಪಕ್ಷವೂ ಅಷ್ಟೇ, ಫ್ಯಾಶಿಸ್ಟ್ ಶಕ್ತಿಗಳಲ್ಲಿ ನಂಬಿಕೆಯುಳ್ಳ ಜನರು ಈಗ ಮಹಾತ್ಮಾಗಾಂಧಿಯವರ ಬಗ್ಗೆ ಮಾತನಾಡಲಾರಂಭಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ, ಹಿಂಸೆಯನ್ನು ನಂಬುವವರು ಈಗ ಗಾಂಧಿಯವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದರಷ್ಟೆ ಸಾಲದು. ಗಾಂಧಿ ತತ್ವಾದರ್ಶಗಳಲ್ಲಿನ ತನ್ನ ನಿಜವಾದ ಶ್ರದ್ಧೆ-ನಂಬಿಕೆಗಳನ್ನು ಅದು ಮತ್ತೊಮ್ಮೆ ಸಾಬೀತುಗೊಳಿಸಬೇಕಾದ ಸಂದರ್ಭ ಈಗ ಒದಗಿ ಬಂದಿದೆ. 1942ರ ಜುಲೈ 14ರಂದು ವರ್ಧಾದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ‘‘ಭಾರತ ಬಿಟ್ಟು ತೊಲಗಿ’’ ಎಂದು ಬ್ರಿಟಿಷರಿಗೆ ಹೇಳುವ ನಿರ್ಣಯ ಕೈಗೊಂಡಿತು. ಈಗ ಅದೇ ವರ್ಧಾದಲ್ಲಿ ಗಾಂಧೀಜಿಯವರ ನೂರೈವತ್ತನೆಯ ಜನ್ಮದಿನದಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಲೋಕ ಸಂಪರ್ಕ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಅಭಿಯಾನದಲ್ಲಿ ಅದು ಕೇಂದ್ರದಲ್ಲಿನ ಫ್ಯಾಶಿಸ್ಟ್ ಶೈಲಿಯ ಸರ್ವಾಧಿಕಾರಿ ಸರಕಾರದ ಆಡಳಿತ ಹಾಗೂ ಕುಸಿಯುತ್ತಿರುವ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂಥ ಕೆಲಸವನ್ನು ಮಾಡುವುದರ ಜೊತೆಗೆ ಗ್ರಾಮ ಸ್ವರಾಜ್ಯ, ಜಾತ್ಯತೀತತೆ, ಕೋಮು ಸಾಮರಸ್ಯ ಮೊದಲಾದ ಗಾಂಧಿ ಮೌಲ್ಯಗಳನ್ನು ಕಾರ್ಯಗತಗೊಳುಸುವಲ್ಲಿ ತನ್ನ ನಿಷ್ಠೆಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.

ಕೆಲವು ವಲಯಗಳು ನಿರಂತರವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಯುವಜನತೆಯಲ್ಲಿ ಬಿತ್ತುತ್ತಿರುವ ‘ಹೇಟ್ ಗಾಂಧಿ’ ಅಲೆಯನ್ನು, ಅಸಹನೆಯನ್ನು ಅಳಿಸಿಹಾಕಿ ಗಾಂಧಿಮೌಲ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಗ್ರಾಮ ಸೇವಾ ಸಂಘ ‘ಸತ್ಯಾಗ್ರಹ ಮಾಡಿ’ ಚಳವಳಿ ಪ್ರಾರಂಭಿಸಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆ. ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಜನಜಾಗೃತಿಯುಂಟುಮಾಡುವ ಇಂಥ ಕಾರ್ಯಕ್ರಮಗಳು ಇಂದು ಅತ್ಯಗತ್ಯವಾಗಿದೆ.

share
ಜಿ.ಎನ್.ರಂಗನಾಥ ರಾವ್
ಜಿ.ಎನ್.ರಂಗನಾಥ ರಾವ್
Next Story
X