ನಿಟ್ಟೆ ಎಜ್ಯುಕೇಶನ್ ಟ್ರಸ್ಟ್: ಕೊಡಗು, ಕೇರಳ ಪರಿಹಾರ ನಿಧಿಗೆ 80 ಲಕ್ಷ ರೂ. ದೇಣಿಗೆ

ಕೊಣಾಜೆ, ಸೆ. 30: ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಹಾಗೂ ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ವತಿಯಿಂದ ಕೊಡಗು ಜಿಲ್ಲೆ ಹಾಗೂ ಕೇರಳದಲ್ಲಿ ಉಂಟಾದ ಪ್ರವಾಹ ಹಾನಿಗೆ ಪರಿಹಾರವಾಗಿ ಸುಮಾರು 80 ಲಕ್ಷ ರೂ, ಪರಿಹಾರ ದೇಣಿಗೆ ನೀಡಲಾಯಿತು.
ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ ಅವರು 40 ಲಕ್ಷ ರೂ. ಮೊತ್ತದ ಚೆಕ್ಕನ್ನು ಕೊಡಗು ಜಿಲ್ಲೆಯ ಪರಿಹಾರ ನಿಧಿಗಾಗಿ ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಹಸ್ತಾಂತರಿಸಿದರು. ಹಾಗೂ ಕೇರಳ ರಾಜ್ಯದ ಪರಿಹಾರ ನಿಧಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ವಿಶಾಲ್ ಹೆಗ್ಡೆ ಅವರು ಶನಿವಾರ ವಿತರಿಸಿದರು.
ಅಲ್ಲದೆ ಪ್ರವಾಹ ನಡೆದ ಸಂದರ್ಭದಲ್ಲಿಯೂ ನಿಟ್ಟೆ ವಿಶ್ವವಿದ್ಯಾಲಯವು ಕೇರಳ ಹಾಗೂ ಕೊಡಗು ಜಿಲ್ಲೆಗೆ ತುರ್ತು ಚಿಕಿತ್ಸಾ ಔಷಧಗಳ ಜೊತೆ ತಜ್ಞ ವೈದ್ಯರ ತಂಡಗಳನ್ನು ಕಳುಹಿಸಿ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿತ್ತು.
Next Story





