ಮಂಗಳೂರು: ಎಸ್.ಜೆ.ಎಂ ವತಿಯಿಂದ ಅ.2 ರಂದು ಮುಅಲ್ಲಿಮ್ ಪ್ರತಿನಿಧಿ ಸಮಾವೇಶ
ಮಂಗಳೂರು,ಸೆ.30: ದ.ಕ ಜಿಲ್ಲಾ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ವತಿಯಿಂದ ಅಕ್ಟೋಬರ್ 2 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರ ತನಕ ಮುಅಲ್ಲಿಮ್ ಪ್ರತಿನಿಧಿ ಸಮಾವೇಶ ಮುಡಿಪು, ನಂದರಪಡ್ಪು ಎಸ್.ಕೆ ಮಲ್ಟಿಪರ್ಪಸ್ ಹಾಲ್ ನಲ್ಲಿ ನಡೆಯಲಿದೆ.
ಎಸ್.ಜೆ.ಎಮ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಮೀನುಶ್ಶರೀಅ ಸೆಯ್ಯಿದ್ ಅಲೀ ಬಾಫಖಿ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
'ಮಕ್ಕಳ ಹಕ್ಕು ಮತ್ತು ಕಾಯ್ದೆಗಳು' ಎಂಬ ವಿಷಯದ ಕುರಿತು ಬಹು ಡಾ.ಅಬ್ದುಸ್ಸಲಾಮ್ ಓಮಶ್ಶೇರಿ ಹಾಗೂ ಪ್ರಭೋಧಕರ ಬಾಧ್ಯತೆ ಎಂಬ ವಿಷಯದ ಕುರಿತು ಸುಲೈಮಾನ್ ಸಖಾಫಿ ಮಾತನಾಡಲಿದ್ದಾರೆ. ಜಿಲ್ಲಾಧ್ಯಕ್ಷ ಮುಹ್ಯದ್ದೀನ್ ಸಅದಿ ತೋಟಾಲ್ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಈ ಸಮಾರಂಭಕ್ಕೆ ಜಿಲ್ಲೆಗೊಳಪಟ್ಟ ಎಲ್ಲಾ ಉಸ್ತಾದರೂ ಭಾಗವಹಿಸಬೇಕಾಗಿ ಜಿಲ್ಲಾ ಕಾರ್ಯದರ್ಶಿ ಪಿ.ಯಂ ಮುುಹಮ್ಮದ್ ಮದನಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ
Next Story





