ದ.ಕ.ಜಿಲ್ಲಾ ವಕ್ಫ್ ಕಚೇರಿಗೆ ಆಡಳಿತಾಧಿಕಾರಿ ಎ.ಬಿ. ಇಬ್ರಾಹೀಂ ಭೇಟಿ

ಮಂಗಳೂರು, ಸೆ.30: ರಾಜ್ಯ ವಕ್ಫ್ ಬೋರ್ಡ್‌ನ ಆಡಳಿತಾಧಿಕಾರಿ ಎ.ಬಿ.ಇಬ್ರಾಹೀಂ ರವಿವಾರ ಪಾಂಡೇಶ್ವರದ ಮೌಲಾನಾ ಆಝಾದ್ ಭವನದಲ್ಲಿರುವ ದ.ಕ. ಜಿಲ್ಲಾ ವಕ್ಫ್ ಇಲಾಖಾ ಕಚೇರಿಗೆ ಭೇಟಿ ನೀಡಿದರು.
ಬಳಿಕ ವಕ್ಫ್ ಇಲಾಖೆಯ ಅಧಿಕಾರಿಗಳಿಂದ ಜಿಲ್ಲೆಯ ವಕ್ಫ್ ಸಂಸ್ಥೆಗಳ ಪ್ರಗತಿಯ ಬಗ್ಗೆ ವರದಿ ಪಡೆದುಕೊಂಡರಲ್ಲದೆ ಎಲ್ಲಾ ಗ್ರಾಮಗಳಲ್ಲೂ ದಫನ ಭೂಮಿಗೆ ಜಮೀನು ಮೀಸಲು ಇದೆಯೋ, ಇಲ್ಲವೋ ಎಂಬುದರ ಬಗ್ಗೆ ಆಯಾ ಗ್ರಾಪಂನಿಂದ ಅಧಿಕೃತ ಮಾಹಿತಿ ಪಡೆಯಬೇಕು, ದಾಖಲೆ ಪತ್ರಗಳು ಸರಿ ಇಲ್ಲದ ದಫನ ಭೂಮಿಗಳ ವಿವರವನ್ನು ಮಸೀದಿಗಳ ಮುಖ್ಯಸ್ಥರಿಂದ ಪಡೆದುಕೊಳ್ಳಬೇಕು, ಬೆಂಗರೆಯಲ್ಲಿ ಮೀಸಲಿಟ್ಟಿರುವ ದಫನ ಭೂಮಿಯ ಸದ್ಬಳಕೆಗೆ ಸೂಕ್ತ ಕ್ರಮ ಜರುಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕಣಚೂರು ಮೋನು, ಉಪಾಧ್ಯಕ್ಷ ನೆಕ್ಕರೆ ಬಾವಾ ಹಾಜಿ, ಸದಸ್ಯರಾದ ನೂರುದ್ದೀನ್ ಸಾಲ್ಮರ, ನಝೀರ್ ಮಠ, ಬಜ್ಪೆ ಅಬ್ದುಲ್ ಖಾದರ್, ಇಸ್ಮಾಯೀಲ್ ಉಳಾಯಿಬೆಟ್ಟು, ಅಬೂಬಕರ್, ಜಲೀಲ್ ಕೃಷ್ಣಾಪುರ, ಸುಲೈಮಾನ್ ಹಾಗೂ ಜಿಲ್ಲಾ ವಕ್ಫ್ ಅಧಿಕಾರಿ ಹಾಜಿ ಅಬೂಬಕರ್ ಉಪಸ್ಥಿತರಿದ್ದರು.





