ಬೈಂದೂರು: ಇಲಿ ಪಾಷಾಣ ಸೇವಿಸಿ ಮಹಿಳೆ ಮೃತ್ಯು
ಬೈಂದೂರು, ಸೆ.30: ಇಲಿಗೆ ಹಾಕುವ ಔಷಧ ಸೇವಿಸಿದ ಪರಿಣಾಮ ಮಹಿಳೆ ಯೊಬ್ಬರು ಮೃತಪಟ್ಟ ಘಟನೆ ಬೈಂದೂರು ಗಂಗನಾಡು ಎಂಬಲ್ಲಿ ನಡೆದಿದೆ.
ಮೃತರನ್ನು ಗಂಗನಾಡು ನಿವಾಸಿ ಚಂದು ಮರಾಠಿ(65) ಎಂದು ಗುರುತಿಸಲಾಗಿದೆ. ಸೆ.24ರಂದು ಇಲಿಗೆ ಹಾಕುವ ಔಷಧವನ್ನು ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡ ಇವರು ಸೆ.30ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





