ಕಾರ್ಗಿಲ್‌ನಲ್ಲಿ ಅತಂತ್ರರಾಗಿದ್ದ 60ಕ್ಕೂ ಅಧಿಕ ಜನರ ರಕ್ಷಣೆ
ಶ್ರೀನಗರ, ಸೆ.30: ಜಮ್ಮು-ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಭಾರೀ ಹಿಮಪಾತದಿಂದಾಗಿ ಸಿಕ್ಕಿ ಹಾಕಿಕೊಂಡಿದ್ದ ಓರ್ವ ಫ್ರೆಂಚ್ ಪ್ರಜೆ ಸೇರಿದಂತೆ 60ಕ್ಕೂ ಅಧಿಕ ಜನರನ್ನು ಪೊಲೀಸರು ರಕ್ಷಿಸಿದ್ದಾರೆ.
ಸೆ.22ರಂದು ಹಿಮಾಚಲ ಪ್ರದೇಶಕ್ಕೆ ತೆರಳುತ್ತಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 60 ನೇಪಾಳಿ ಕೂಲಿಗಳು,ಓರ್ವ ಫ್ರೆಂಚ್ ಪ್ರಜೆ ಮತ್ತು ನಾಲ್ವರು ಭಾರತೀಯರು ಭಾರೀ ಹಿಮಪಾತದಿಂದಾಗಿ ಲಖಾಂಗ್ ಬಳಿ ಸಿಕ್ಕಿಹಾಕಿಕೊಂಡಿದ್ದರು. ಸ್ಥಳೀಯರ ನೆರವಿನೊಂದಿಗೆ ಅವರನ್ನೆಲ್ಲ ರಕ್ಷಿಸಿ ಸಮೀಪದ ಗ್ರಾಮಕ್ಕೆ ಸ್ಥಳಾಂತರಿಸಲಾಗಿದ್ದು, ಆಹಾರ,ಆಶ್ರಯ ಮತ್ತು ಇತರ ಅಗತ್ಯಗಳನ್ನು ಒದಗಿಸಲಾಗಿದೆ ಎಂದು ಪೊಲೀಸ್ ವಕ್ತಾರರೋರ್ವರು ರವಿವಾರ ತಿಳಿಸಿದರು. ಈ ಪೈಕಿ ಹೆಚ್ಚಿನವರಿಗೆ ಹಿಮಕಡಿತದ ಗಾಯಗಳಾಗಿವೆ. 13 ಜನರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆೆ ಎಂದರು.
Next Story





