ಭಾರತಕ್ಕೆ 227 ರನ್‌ಗಳ ಜಯ
ಅಂಡರ್ -19 ಏಶ್ಯ ಕಪ್
ಸಾವರ್(ಬಾಂಗ್ಲಾದೇಶ), ಸೆ.30: ಅಂಡರ್ -19 ಏಶ್ಯಕಪ್ ಪಂದ್ಯದಲ್ಲಿ ಯುಎಇ ವಿರುದ್ಧ ಭಾರತದ ತಂಡ 227 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಭಾರತದ ಆರಂಭಿಕ ದಾಂಡಿಗರಾದ ಅನುಜ್ ರಾವತ್ (102) ಮತ್ತು ದೇವದತ್ ಪಡಿಕ್ಕಲ್ (121) ಭರ್ಜರಿ ಬ್ಯಾಟಿಂಗ್ ಹಾಗೂ ಸ್ಪಿನ್ನರ್ ಸಿದ್ದಾರ್ಥ ದೇಸಾಯಿ (6 ವಿಕೆಟ್) ಭಾರತ ಭರ್ಜರಿ ಜಯ ದಾಖಲಿಸಿತು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡದ ಪರ ರಾವತ್ ಮತ್ತು ಪಡಿಕ್ಕಲ್ ಮೊದಲ ವಿಕೆಟ್‌ಗೆ 205 ರನ್‌ಗಳ ಜೊತೆಯಾಟ ನೀಡಿದರು. ನಾಯಕ ಪವನ್ ಶಾ (45), ಸಮೀರ್ ಚೌಧರಿ (42) , ಅಯುಷ್ ಬಾದೊನಿ (21) ಬ್ಯಾಟಿಂಗ್ ನೆರವಿನಲ್ಲಿ ಭಾರತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 354 ರನ್ ಗಳಿಸಿತ್ತು.
ಯುಎಇ ತಂಡ ದೇಸಾಯಿ (24ಕ್ಕೆ 6) ದಾಳಿಗೆ ತತ್ತರಿಸಿ 33.5 ಓವರ್‌ಗಳಲ್ಲಿ 133 ರನ್‌ಗಳಿಗೆ ಆಲೌಟಾಗಿದೆ. ಚಿತ್ತಗಾಂಗ್‌ನಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಶ್ರೀಲಂಕಾ 10 ವಿಕೆಟ್‌ಗಳ ಜಯ ಗಳಿಸಿದೆ.
Next Story





