Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ1 Oct 2018 12:16 AM IST
share
ಓ ಮೆಣಸೇ...

 ರಾವಣ ಹುಟ್ಟಿದ್ದು ನೋಯ್ಡಿದಲ್ಲಿ -ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
 ನೋಯ್ಡದಲ್ಲಿ ಯಾವ ಮಸೀದಿ ಒಡೆಯಬೇಕಾಗಿದೆ?

---------------------
ವಿಧಾನ ಸೌಧ ಬಿಗ್ ಬಝಾರ್, ರೇಸ್ ಕೋರ್ಸ್‌ನಂತೆ ಮನೋರಂಜನೆ ಕೇಂದ್ರವಾಗಿ ಮಾರ್ಪಟ್ಟಿದೆ - ವೀರಭದ್ರಪ್ಪ, ಸಾಹಿತಿ
ಸರಕಾರಕ್ಕೆ ಗೊತ್ತಾದರೆ ಅದಕ್ಕೂ ತೆರಿಗೆ ಹಾಕೀತು.

---------------------
ಆಯುಷ್ಮಾನ್‌ಭವ ಯೋಜನೆಯಲ್ಲಿ ಜಾತಿ, ಧರ್ಮಗಳ ತಾರತಮ್ಯ ಮಾಡುವುದಿಲ್ಲ -ನರೇಂದ್ರ ಮೋದಿ, ಪ್ರಧಾನಿ
ಅಂದರೆ ದಲಿತರಿಗೆ ಅಲ್ಲಿ ವಿಶೇಷ ಸವಲತ್ತು ಇಲ್ಲ ಎಂದಾಯಿತು.

---------------------
ಮಂಗಳೂರು ದಸರಾ ಉದ್ಘಾಟನೆಗೆ ಯಾರೂ ಬಾರದಿದ್ದರೆ ನಾನೇ ಉದ್ಘಾಟಿಸುತ್ತೇನೆ - ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ
ಆದರೆ ಹುಲಿ ವೇಷವನ್ನು ಮಾತ್ರ ತಾವೇ ಕುಣಿದರೆ ಸರಿಯಾಗುವುದಿಲ್ಲ.

---------------------
ನುಸುಳುಕೋರರು ಗೆದ್ದಲು ಹುಳಗಳಿದ್ದಂತೆ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಅವರ ಕಟ್ಟಿದ ಹುತ್ತದಲ್ಲಿ ಬದುಕುವ ಹಾವುಗಳು ತಾವುಗಳು ಎನ್ನುವ ಆರೋಪವಿದೆ.

---------------------
ನನಗೆ ಬ್ಲಾಕ್‌ಮೇಲ್ ಗೊತ್ತಿಲ್ಲ, ಇ-ಮೇಲ್ ಮಾತ್ರ ಗೊತ್ತು -ಡಾ.ಸುಧಾಕರ, ಶಾಸಕ
ಇಮೇಲ್ ಮೂಲಕವೇ ಬ್ಲಾಕ್‌ಮೇಲ್ ಮಾಡುವವರಿದ್ದಾರೆ.

---------------------
ಒಬ್ಬ ಮುಖ್ಯಮಂತ್ರಿಯಲ್ಲಿ ಜನ ನಿರೀಕ್ಷೆ ಮಾಡುವುದು ಭಂಡತನವಲ್ಲ, ದೊಡ್ಡತನವನ್ನು - ಸಿ.ಟಿ.ರವಿ, ಶಾಸಕ
ಇದನ್ನು ಒಬ್ಬ ಶಾಸಕನಲ್ಲಿ ನಿರೀಕ್ಷೆ ಮಾಡಬಾರದೇ?

---------------------

ಮನೆ ಮತ್ತು ಸ್ಮಶಾನ ಯಾವತ್ತೂ ಚೆನ್ನಾಗಿರಬೇಕು - ನಳಿನ್‌ಕುಮಾರ್ ಕಟೀಲು, ಸಂಸದ
ಮನ ಚೆನ್ನಾಗಿಲ್ಲದಿದ್ದರೆ ಮನೆ ಸ್ಮಶಾನ.

---------------------
ಪತನದ ಅಂಚಿನಲ್ಲಿದೆ ಎಂದು ಭಾವಿಸಲಾಗಿದ್ದ ಜೆಡಿಎಸ್- ಕಾಂಗ್ರೆಸ್ ಸರಕಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಪಾರುಮಾಡಿದ್ದಾರೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಎಷ್ಟು ದಿನಗಳ ಕಾಲ ಎನ್ನುವುದು ಪ್ರಶ್ನೆ.

---------------------
ಬಿಜೆಪಿ ಶಾಸಕರು ಮತ್ತು ಸಂಸದರು ಯಾವ ಉಪಯೋಗಕ್ಕೂ ಬಾರದ ಗೊಡ್ಡೆಮ್ಮೆಗಳು -ಶಾಮನೂರು ಶಿವಶಂಕರಪ್ಪ, ಶಾಸಕ
ಕಸಾಯಿಖಾನೆಗಳಿಗೆ ಸಾಗಿಸುವಾಗ ಜಾಗೃತೆ, ಗೋರಕ್ಷಕರಿದ್ದಾರೆ.

---------------------
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಲೆಯಲ್ಲಿ ಮೆದುಳಿಲ್ಲ - ಪ್ರಹ್ಲಾದ್ ಜೋಷಿ, ಸಂಸದ
ತಲೆಯಲ್ಲಿ ಸೆಗಣಿ ಇಟ್ಟುಕೊಂಡವರ ಕಳವಳ.

---------------------
  ಮತಬ್ಯಾಂಕ್ ರಾಜಕಾರಣ ದೇಶವನ್ನು ಗೆದ್ದಲಿನಂತೆ ತಿನ್ನುತ್ತಿದೆ - ನರೇಂದ್ರ ಮೋದಿ, ಪ್ರಧಾನಿ
  ರಫೇಲ್ ಒಪ್ಪಂದದಲ್ಲಿ ತಿಂದದ್ದು ನೀವಲ್ಲ, ಗೆದ್ದಲು ಎನ್ನುತ್ತಿದ್ದೀರಾ?

---------------------
 ನಾನು ಇನ್ನೊಬ್ಬರಿಗೆ ಸಚಿವ ಸ್ಥಾನ ಕೊಡಿಸುವಷ್ಟು ದೊಡ್ಡವನಲ್ಲ - ಡಿ.ಕೆ.ಶಿವಕುಮಾರ್, ಸಚಿವ
ಮುಖ್ಯಮಂತ್ರಿ ಸ್ಥಾನ ಕೊಡಿಸುವಷ್ಟು ಮಾತ್ರ ಎಂದಂತಾಯಿತು.

---------------------
ಆತ್ಮ ಶುದ್ಧಿ ಇರುವುದರಿಂದ ನನಗೆ ಯಾವುದರ ಭಯವೂ ಇಲ್ಲ - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಅಕ್ರಮ ಸಂಬಂಧ ಸಕ್ರಮವಾದ ಬಳಿಕದ ಆತ್ಮವಿಶ್ವಾಸ.

---------------------
ಕೆಸರು ಎರಚಿದಷ್ಟೂ ಕಮಲ ಅರಳುತ್ತೆ - ನರೇಂದ್ರ ಮೋದಿ, ಪ್ರಧಾನಿ
ಅದಕ್ಕಾಗಿ ಕೆಸರಲ್ಲೇ ಹೊರಳಾಡಿದರೆ ಹೇಗೆ?

---------------------
ಪಿತೃ ಪಕ್ಷದಲ್ಲಿ ಯಾವುದೇ ಅಪರಾಧ ಮಾಡಬೇಡಿ -ಸುಶೀಲ್ ಮೋದಿ, ಬಿಹಾರ ಉಪಮುಖ್ಯಮಂತ್ರಿ
ರಾಜಕೀಯ ಪಕ್ಷ ಅಲ್ಲ ಎನ್ನುವ ಕಾರಣಕ್ಕಾಗಿ ಇರಬೇಕು.

---------------------
ಆಧಾರ್‌ನಿಂದ ಪ್ರತಿ ವರ್ಷ 90 ಸಾವಿರ ಕೋಟಿ ರೂ. ಉಳಿತಾಯವಾಗುತ್ತಿದೆ - ಅರುಣ್‌ಜೇಟ್ಲಿ, ಕೇಂದ್ರ ಸಚಿವ
ಬಹುಶಃ ಅಂಬಾನಿಯ ಅದಾಯವನ್ನು ಹೇಳುತ್ತಿರಬೇಕು.

---------------------
ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜಯಿಸುವುದು ಹೇಗೆ ಎಂಬ ಭೀತಿಯಿಂದ ದೇವಸ್ಥಾನಗಳಿಗೆ ಮೊರೆಹೋಗುತ್ತಿದ್ದಾರೆ - ಸಾಧ್ವಿ ನಿರಂಜನ ಜ್ಯೋತಿ, ಕೇಂದ್ರ ಸಚಿವೆ
ಅದಕ್ಕೆ ಪ್ರತಿಯಾಗಿ ತಾವು ದೆವ್ವ ಸ್ಥಾನಗಳಿಗೆ ಹೋಗುತ್ತಿರುವ ಬಗ್ಗೆ ವರದಿಗಳಿವೆ.

---------------------
ಇಂದಿನ ಖಾಸಗಿ ಶಾಲೆಗಳು ಪೂತನಿಯಂತೆ ಚಿಕ್ಕಮಕ್ಕಳನ್ನು ಬಹಳ ಆಕರ್ಷಕವಾಗಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಿವೆ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಸರಕಾರಿ ಶಾಲೆಯೆಂಬ ತಾಯಿಯ ಎದೆ ಹಾಲಿಲ್ಲದೆ ಒಣಗಿದ ಪರಿಣಾಮ.

---------------------
ಬಿಜೆಪಿಯಲ್ಲಿ ಕಾಂಗ್ರೆಸ್‌ನಂತೆ ಹೈಕಮಾಂಡ್ ಸಂಪ್ರದಾಯವಿಲ್ಲ - ಸ್ಮತಿ ಇರಾನಿ, ಕೇಂದ್ರ ಸಚಿವೆ
ಅಲ್ಲಿರುವುದು ಬರೇ ಮೋದಿ ಸಂಪ್ರದಾಯ.

---------------------
ಗುಜರಾತ್‌ನಲ್ಲಿ ನಿರ್ಮಾಣವಾಗುತ್ತಿರುವ ವಲ್ಲಭಭಾಯಿ ಪಟೇಲ್ ಪ್ರತಿಮೆ ಮೇಡ್ ಇನ್ ಚೀನಾ -ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಗಂಜಲದಲ್ಲಿ ಶುದ್ಧೀಕರಿಸಿ ಬಳಿಕ ಅನಾವರಣಗೊಳಿಸುವು ದರಿಂದ, ಅದು ಮೇಡ್ ಇನ್ ಚೀನಾ ಆಗುವುದಿಲ್ಲ.

---------------------
ಪ್ರಸ್ತುತ ಪರಿಸ್ಥಿತಿಯಲ್ಲಿ ಶ್ರೀರಾಮ ಚುನಾವಣೆಗೆ ನಿಂತರೂ ಗೆಲ್ಲಲು ಹಣ ಖರ್ಚು ಮಾಡಲೇಬೇಕಿತ್ತು - ವೆಲಿಂಗಕರ್, ಗೋವಾ ಆರೆಸ್ಸೆಸ್ ಮುಖ್ಯಸ್ಥ
ಅಯೋಧ್ಯೆಯಲ್ಲಿ ನಿಂತರೆ ಆತನಿಗೆ ಬಿಜೆಪಿಯಿಂದ ಸೋಲು ಖಚಿತ.

---------------------
 ಅನಿವಾರ್ಯ ಕಾರಣದಿಂದ ನಾನು ಆರೋಗ್ಯ ಸಚಿವನಾಗಿರುವೆ - ಶಿವಾನಂದ ಪಾಟೀಲ್, ಸಚಿವ
ಅನಾರೋಗ್ಯಕರ ಹೇಳಿಕೆ.

---------------------
  ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯಲ್ಲಿ ಸದಸ್ಯನಾಗಬೇಕೆಂಬ ಇಚ್ಛೆ ಇದೆ - ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ
  ಇರುವ ಸಮನ್ವಯವನ್ನು ಕೆಡಿಸುವುದಕ್ಕಾಗಿ ಇರಬಹುದೇ?
 

share
ಪಿ.ಎ.ರೈ
ಪಿ.ಎ.ರೈ
Next Story
X