ಪ್ರತಿನಿತ್ಯ ವ್ಯಾಯಾಮದಿಂದ ಹೃದ್ರೋಗ ದೂರ: ಡಾ.ವಿಕ್ರಂ ವೀರಣ್ಣ
ಬೆಂಗಳೂರು, ಅ. 1: ಪ್ರತಿನಿತ್ಯ ವ್ಯಾಯಾಮ, ಸೂಕ್ತ ಆಹಾರ ಕ್ರಮ, ನಿಗದಿತ ಅವಧಿಯ ನಿದ್ದೆ-ವಿಶ್ರಾಂತಿಯಿಂದ ಹೃದ್ರೋಗದಿಂದ ದೂರವಿರಲು ಸಹಕಾರಿ ಎಂದು ಹೃದಯ ತಜ್ಞ ಡಾ.ವಿಕ್ರಂ ವೀರಣ್ಣ ಇಂದಿಲ್ಲಿ ಹೇಳಿದ್ದಾರೆ.
ಸೋಮವಾರ ವಿಶ್ವ ಹೃದಯ ದಿನದ ಅಂಗವಾಗಿ ರಾಜರಾಜೇಶ್ವರಿನಗರದಲ್ಲಿರುವ ಬಿಆರ್ ಲೈಫ್ ಎಸ್‌ಎಸ್‌ಎನ್‌ಎಂಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಏರ್ಪಡಿಸಿದ್ದ ಬಿಆರ್ ಲೈಫ್ 5ಕೆ ಓಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜನಸಾಮಾನ್ಯರಿಗೆ ಜಾಗೃತಿ ಅಗತ್ಯ ಎಂದರು.
ಒತ್ತಡದ ಜೀವನಶೈಲಿಯಿಂದ ಯುವ ಉದ್ಯೋಗಿಗಳಲ್ಲಿ ಹೃದಯಾಘಾತಗಳು ಹೆಚ್ಚಾಗುತ್ತವೆ. ಜತೆಗೆ ವ್ಯಾಯಾಮದ ಕೊರತೆ, ಅನಿಯಮಿತ ಸಮಯದಲ್ಲಿ ಆಹಾರ ಸೇವನೆ, ಅನಾರೋಗ್ಯಕಾರಿ ಕುರುಕಲು ಆಹಾರ ಸೇವನೆ, ಧೂಮಪಾನ ಹಾಗೂ ಮದ್ಯಪಾನ, ನಿದ್ದೆಗೆಡುವುದರಿಂದ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದರು.
Next Story





