ಆಳ್ವಾಸ್ ವಿದ್ಯಾರ್ಥಿಸಿರಿ 2018: ಅಧ್ಯಕ್ಷೆಯಾಗಿ ಸನ್ನಿಧಿ ಟಿ ರೈ ಪೆರ್ಲ
ಕವಿಗೋಷ್ಠಿ ಅಧ್ಯಕ್ಷೆಯಾಗಿ ಭಾರ್ಗವಿ ಶಬರಾಯ ಆಯ್ಕೆ

ಸನ್ನಿಧಿ, ಭಾರ್ಗವಿ, ದೀಕ್ಷಿತ್, ಶಾಮ್ ಪ್ರಸಾದ್
ಮೂಡುಬಿದಿರೆ, ಅ.1: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ವಿದ್ಯಾರ್ಥಿ ಸಾಹಿತ್ಯ - ಸಂಸ್ಕೃತಿಕ ಸಮ್ಮೇಳನ 'ಆಳ್ವಾಸ್ ವಿದ್ಯಾರ್ಥಿಸಿರಿ 2018' ನ. 15ರಂದು ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯಲಿದ್ದು ಈ ಸಮ್ಮೇಳನದ ಅಧ್ಯಕ್ಷತೆಗೆ ಗಡಿನಾಡು ಕಾಸರಗೋಡಿನ ಬಹುಮುಖ ಪ್ರತಿಭಾನ್ವಿತೆ ವಿದ್ಯಾನಗರದ ಚಿನ್ಮಯ ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಟಿ ರೈ ಪೆರ್ಲ ಇವರು ಆಯ್ಕೆಯಾಗಿದ್ದಾರೆ.
ಕವಿಗೋಷ್ಠಿಯ ಅಧ್ಯಕ್ಷತೆಗೆ ಉಜಿರೆಯ ಬೆಳ್ತಂಗಡಿ ಎಸ್ ಡಿ ಎಂ ಪದವಿ ಪೂರ್ವಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಭಾರ್ಗವಿ ಶಬರಾಯ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ತಿಳಿಸಿದರು.
ಸಮ್ಮೇಳನದಲ್ಲಿ ನಡೆಯುವ ಸಂವಾದ ಗೋಷ್ಠಿಯ ಅಧ್ಯಕ್ಷತೆಗೆ ಉಜಿರೆ ಎಸ್ ಡಿ ಎಂ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಾಮ್ ಪ್ರಸಾದ್ ಹಾಗೂ ಸಮಾರೋಪ ಭಾಷಣಕ್ಕೆ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ ದೀಕ್ಷಿತ್ ಇವರನ್ನು ಆಯ್ಕೆ ಮಾಡಲಾಗಿದೆ. ವಿಶೇಷೋಪನ್ಯಾಸ ನೀಡಲು ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಜ್ಞಾ ಪ್ರಭು, ಒಳಕಾಡು ಸರಕಾರೀ ಪಿಯು ಕಾಲೇಜಿನ ವಿದ್ಯಾರ್ಥಿ ನಚಿಕೇತ ನಾಯಕ್, ಆಳ್ವಾಸ್ ಪ್ರೌಢಶಾಲೆಯ ಭಾರತೀ ಶಿವಾನಂದ ನಾಯಕ್ ಇವರನ್ನು ಆರಿಸಲಾಗಿದೆ. ಸಂವಾದ ಗೋಷ್ಠಿಯಲ್ಲಿ ಮೂಡುಬಿದಿರೆ ರೋಟರಿ ಪ್ರೌಢಶಾಲೆಯ ಪ್ರದ್ಯುಮ್ನ ಮೂರ್ತಿಕಡಂದಲೆ, ಆಳ್ವಾಸ್ ಪ್ರೌಢಶಾಲೆಯ ಭಕ್ತಿಶ್ರೀ, ಉಜಿರೆ ಎಸ್ಡಿಎಂ ಪದವಿ ಪೂರ್ವಕಾಲೇಜಿನ ಪೂರ್ಣಿಮಾ ಹಾಗೂ ಆಳ್ವಾಸ್ ಪಿಯು ಕಾಲೇಜಿನ ಗುಣೇಶ್ ಭಾರತೀಯ ಇವರನ್ನು ಆಯ್ಕೆ ಮಾಡಲಾಗಿದೆ.
ಇತ್ತೀಚೆಗೆ ವಿದ್ಯಾಗಿರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ, ಆಶು ಭಾಷಣ ಹಾಗೂ ಸಂದರ್ಶನ ಹಾಗೂ ಪ್ರಮಾಣ ಪತ್ರ ಪರಿಶೀಲನೆಯ ಮೂಲಕ ಇವರನ್ನು ಆಯ್ಕೆಮಾಡಲಾಯಿತು. ಅಂಡಾರುಗುಣಪಾಲ ಹೆಗ್ಡೆ, ಡಾ.ಧನಂಜಯ, ಜೀವನ್ರಾಂ ಸುಳ್ಯ, ಶ್ರೀಧರ ಜೈನ್ ಮತ್ತು ರಾಮಕೃಷ್ಣ ಶಿರೂರು ಮೌಲ್ಯ ಮಾಪಕರಾಗಿ ಭಾಗವಹಿಸಿದ್ದರು.
ಅಧ್ಯಕ್ಷರ ಪರಿಚಯ: ಸಾಹಿತ್ಯ, ಯಕ್ಷಗಾನ, ಸಂಗೀತ, ಭರತನಾಟ್ಯ, ಕರಾಟೆ, ಅಂಕಣ ಬರಹಇತ್ಯಾದಿ ಬಹುವಿಧಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಸನ್ನಿಧಿ ಟಿ ರೈ ಪೆರ್ಲ ಇವರು ಕಾಸರಗೋಡಿನ ಚಿನ್ಮಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ. ತಂದೆ ತಾರಾನಾಥ ರೈ. ತಾಯಿ ರಾಜಶ್ರೀ. ಕನ್ನಡ, ಇಂಗ್ಲಿಷ್ ಮತ್ತು ತುಳುವಿನಲ್ಲಿ ಬರೆಯುತ್ತಿರುವ ಸನ್ನಿಧಿ ಚಿಲಿಪಿಲಿ ಚಿತ್ತಾರ (ಕನ್ನಡ), ಶೇಡ್ಸ್ (ಇಂಗ್ಲಿಷ್) ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಸ್ವಾಮಿ ಚಿನ್ಮಯಾನಂದರ ನೀತಿ ಬೋಧನೆಗಳು ಇವರ ಅಂಕಣ ಬರಹ. ಯಕ್ಷಗಾನದಲ್ಲಿ ಭಾಗವತಿಕೆ ಮತ್ತು ವೇಷಧಾರಿಯಾಗಿಯೂ ತೊಡಗಿಸಿ ಕೊಂಡಿರುವ ಈಕೆ ಅಮರಾವತಿ ನಿರ್ಮಾಣ ಎಂಬ ಯಕ್ಷಗಾನ ಪ್ರಸಂಗವನ್ನು ಬರೆದಿದ್ದು ಅದರ ಬಿಡುಗಡೆ ಹಾಗೂ ಪ್ರದರ್ಶನ ಅ.19 ರಂದು ಬನಾರಿಯಲ್ಲಿ ನಡೆಯಲಿದೆ. ಆಕಾಶವಾಣಿಯಲ್ಲಿ ಕವಿತೆಗಳು ಪ್ರಸಾರಗೊಂಡಿದೆ.
ವಿಶ್ವ ತುಳುವೆರೆ ಆಯನದ ವಿದ್ಯಾರ್ಥಿ ಕವಿಗೋಷ್ಠಿಯ ಅಧ್ಯಕ್ಷತೆ, ಕೇಂದ್ರ ಸಾಹಿತ್ಯ ಅಕಾಡೆಮಿ ಆಯೋಜಿಸಿದ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ಕವಿತಾ ವಾಚನ, ಆಳ್ವಾಸ್ ವಿದ್ಯಾರ್ಥಿಸಿರಿಯ ಕವಿಗೋಷ್ಠಿಯ ಅಧ್ಯಕ್ಷತೆ ಮೊದಲಾದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ರಾಜೋತ್ಸವ ಸಾಧಕ ಪುರಸ್ಕಾರ, ಭಾಂದವ್ಯ ಪುರಸ್ಕಾರ-2014, ಕೇರಳ ಸರಕಾರ ತುಳು ಅಕಾಡಮಿಯ ಸನ್ಮಾನ, ಕರ್ನಾಟಕ ಪ್ರತಿಭಾರತ್ನ ಪ್ರಶಸ್ತಿ, 'ಎಸಲ್'ಸಿ.ಡಿ ಯ ಹಾಡಿಗಾಗಿ ಡಾ.ವೀರೇಂದ್ರ ಹೆಗ್ಗಡೆಯವರಿಂದ ಉಡುಗೊರೆ, ಎಕ್ಸಲೆನ್ಸಿ ಅವಾರ್ಡ್ರೇಡಿಯೋ ಸಾರಂಗ್ ನವರಿಂದ ಒಡಿಯೂರುಕ್ಷೇತ್ರದಲ್ಲಿ ನಡೆದ ಲಲಿತಾ ಪಂಚಮಿಯ ಧರ್ಮಸಭೆಯಲ್ಲಿ ಶ್ರೀಗಳಿಂದ 'ಪ್ರತಿಭಾ ಪುರಸ್ಕಾರ"ಉಡುಪಿ ಮಠದ ವಿದ್ಯಾವಲ್ಲಭತೀರ್ಥರಿಂದ ಸನ್ಮಾನ, ಸುಳ್ಯ ರಂಗಮನೆಯಗೌರವ ಸನ್ಮಾನ, ತುಳುನಾಡೋಚ್ಚಯ ಪ್ರಶಸ್ತಿ, ಚಿನ್ಮಯ ಮಿಷನ್ರಿಜಿನಲ್ ಹೆಡ್ ಸ್ವಾಮೀ ವಿವಿಕ್ತಾನಂದ ಸರಸ್ವತಿಯವರಿಂದ ಸನ್ಮಾನ.ಯಕ್ಷಸಿರಿ ಪ್ರತಿಭಾ ಪುರಸ್ಕಾರ ಮೊದಲಾದ ಹಲವು ಗೌರವಗಳು ಇವರಿಗೆ ಸಂದಿವೆ. ಕರಾಟೆಯಲ್ಲಿ ಹಲವು ಚಿನ್ನ ಬೆಳಿ ಪದಕಗಳನ್ನು ಪಡೆದು ಪ್ರಸ್ತುತಕರಾಟೆ ಶಿಕ್ಷಕಿಯಾಗಿದ್ದಾರೆ. ಸಂಗೀತದಲ್ಲಿ 5ನೇ ತರಗತಿಯಲ್ಲಿರುವಾಗಲೇ ಜೂನಿಯರ್ ಪರೀಕ್ಷೆಯಲ್ಲಿತೇರ್ಗಡೆ ಹೊಂದಿದ್ದಾರೆ.
ಕಾರ್ತಿಕೇಯಚಾರಿಟೆಬಲ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಅದರ ಮೂಲಕ ನಾಟಕತರಬೇತಿ ಮತ್ತು ಹಲವಾರು ಸಾಹಿತ್ಯ ಕಾರ್ಯಕ್ರಮಗಳನ್ನು 'ಸೇಪ್ಝೋನ್' ಎಂಬ ಶಿಬಿರ ನಡೆಸುತ್ತಿದ್ದಾಳೆ.







