ಬೆಳ್ತಂಗಡಿ: ಡಿವಿಷನ್ ಎಸ್ಸೆಸ್ಸೆಫ್ ವತಿಯಿಂದ ಟೀಂ ಹಸನೈನ್ ಕ್ಯಾಂಪ್, ರಾಜ್ಯ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಬೆಳ್ತಂಗಡಿ,ಅ.1: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಭವಿಷ್ಯದ ನಾಯಕರನ್ನು ಸೃಷ್ಟಿಸಲು ಸಕ್ರಿಯಯ ಕಾರ್ಯಕರ್ತರ ಟೀಂ ಹಸನೈನ್ ಎರಡನೇ ಕ್ಯಾಂಪ್ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಎಂಎಎಂ ಖಾಸಿಂ ಮುಸ್ಲಿಯಾರ್ ಮಾಚಾರು ಅವರ ಅಧ್ಯಕ್ಷತೆಯಲ್ಲಿ ಬದ್ರುಲ್ ಹುದಾ ಮದರಸ ಗೋಳಿಯಂಗಡಿಯಲ್ಲಿ ನಡೆಯಿತು.
ಬದ್ರುಲ್ ಹುದಾ ಮದರಸ ಗೋಳಿಯಂಗಡಿ ಇದರ ಮುಅಲ್ಲಿಮ್ ಉಮರುಲ್ ಫಾರೂಕ್ ಝುಹ್ರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸರಕಾರಿ ಪ್ರೌಢ ಶಾಲೆ ನಡ ಇಲ್ಲಿಯ ಗಣಿತ ಶಿಕ್ಷಕರಾಗಿ ಶಾಲೆಯಲ್ಲಿ ಗಣಿತದ ಅತ್ಯುತ್ತಮ ಮಾದರಿ ಪ್ರಯೋಗಾಲ ಮಾಡಿ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿ 2018ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ 'ಜನಾಬ್ ಯಾಕೂಬ್ ಎಸ್.ಕೊಯ್ಯುರು' ರವರಿಗೆ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ವತಿಯಿಂದ ಸನ್ಮಾನಿಸಲಾಯಿತು.
ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ನಾಯಕರುಗಳಾದ ಖಾಸಿಂ ಮುಸ್ಲಿಯಾರ್, ತೌಫೀಕ್ ವೇಣೂರು, ರಶೀದ್ ಮಡಂತ್ಯಾರು ತರಗತಿಯನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಉಪಾಧ್ಯಕ್ಷ ಅಯ್ಯೂಬ್ ಮಳ್ಹರಿ, ಕೋಶಾಧಿಕಾರಿ ರಶೀದ್ ಎಸ್.ಎ, ಸದಸ್ಯ ಇಕ್ಬಾಲ್ ಮಾಚಾರು ಮೊದಲಾದವರು ಉಪಸ್ಥಿತರಿದ್ದರು.
ತೌಫೀಕ್ ವೇಣೂರು ಸ್ವಾಗತಿಸಿ, ಶರೀಫ್ ಶಾಝ್ ನಾವೂರು ವಂದಿಸಿದರು.





