ಅ.4ರಿಂದ ದೇರಳಕಟ್ಟೆ ಯಲ್ಲಿ ಬೀಕನ್ಸ್ ಮೀಡಿಯಾ ಫೆಸ್ಟ್
ಮಂಗಳೂರು, ಅ.1:ದೇರಳಕಟ್ಟೆಯ ನಿಟ್ಟೆ ಇನ್ಸಟ್ಯೂಟ್ ಆಫ್ ಕಮ್ಯೂನಿಕೇಶನ್ ವತಿಯಿಂದ ಬೀಕನ್ಸ್ ಮೀಡಿಯಾ ಫೆಸ್ಟ್ ಅ. 4ಮತ್ತು 5ರಂದು ಹಮ್ಮಿಕೊಂಡಿದೆ ಎಂದು ಕಾರ್ಯಕ್ರಮದ ಸಂಘಟಕರಾದ ವಿಲ್ಮಾ ಸೆರಾವೋ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಭಾರತೀಯ ಪತ್ರಕರ್ತರು, ಲೇಖಕರು, ಸಾಕ್ಷ ಚಿತ್ರ ಮತ್ತು ಚಲನ ಚಿತ್ರ ನಿರ್ಮಾಪಕರಾದ ಪರೊಂಜಾಯ್ ಗುಹ ಥಕುರ್ತ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿವಿಧ ವಿಭಿನ್ನ ಸ್ಪರ್ಧೆಗಳನ್ನು ಮಾಧ್ಯಮದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ. ಕಿರು ಚಿತ್ರ ತಯಾರಿ, ಕ್ರೀಯಾಶೀಲ ಬರವಣಿಗೆ, ಛಾಯಾಗ್ರಹಣ, ವಿಡಿಯೊ ಮೊದಲಾದ 16 ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ. ಹಿಂದಿನ ನಾಲ್ಕು ವರ್ಷದಲ್ಲಿ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿತ್ತು. ಈ ಬಾರಿಯೂ ಕೇರಳ ,ಗೋವಾ ಸೇರಿದಂತೆ 20ರಿಂದ 30 ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ 300ರಿಂದ 350ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಲ್ಮಾ ಸೆರಾವೊ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಸಂಘಟಕರಾದ ಹರ್ಷ, ರಿತಿಕಾ, ರಾಹುಲ್ ಲೈಕಾ ಮೊದಲಾದವರು ಉಪಸ್ಥಿತರಿದ್ದರು.





