ಕನ್ನಡತಿ ಸವಿತಾ ಹಾಲಪ್ಪನವರ್ ಗೆ ಪತ್ರ ಬರೆದ ಹಾಲಿವುಡ್ ನಟಿ ಎಮ್ಮಾ ವಾಟ್ಸನ್

ವಾಷಿಂಗ್ಟನ್, ಅ.1: 2012ರಲ್ಲಿ ಐರ್ ಲ್ಯಾಂಡ್ ನಲ್ಲಿ ಗರ್ಭಪಾತಕ್ಕೆ ಅವಕಾಶ ನೀಡದೆ ಇದ್ದುದರಿಂದ ಮೃತಪಟ್ಟ ಸವಿತಾ ಹಾಲಪ್ಪನವರ್ ಅವರಿಗೆ ಹಾಲಿವುಡ್ ನಟಿ ಎಮ್ಮಾ ವಾಟ್ಸನ್ ಪತ್ರವೊಂದನ್ನು ಬರೆದಿದ್ದಾರೆ.
ಗರ್ಭಪಾತಕ್ಕೆ ಅವಕಾಶ ನೀಡದೆ ಇದ್ದುದರಿಂದ 31 ವರ್ಷದ ಸವಿತಾ ಐರ್ ಲ್ಯಾಂಡ್ ನ ಗಾಲ್ವೇ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. “ಸವಿತಾ ಅವರ ಸಾವು ಐರಿಷ್ ಗರ್ಭಪಾತ ನಿಯಮಗಳನ್ನು ಬದಲಿಸುವ ಹೋರಾಟಗಾರರ ಉದ್ದೇಶಕ್ಕೆ ಬಲ ನೀಡಿತು ಹಾಗು ಜಗತ್ತಿನಾದ್ಯಂತ ನ್ಯಾಯಕ್ಕಾಗಿ ಹೋರಾಡುವಂತೆ ಪ್ರೇರೇಪಿಸಿತು” ಎಂದು ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿಯಾಗಿರುವ ಎಮ್ಮಾ ವಾಟ್ಸನ್ ಹೇಳಿದ್ದಾರೆ.
“ನೀವು ಹೋರಾಟವೊಂದರ ಭಾಗವಾಗಿರಲು ಬಯಸಿರಲಿಲ್ಲ. ನಿಮ್ಮ ಜೀವವನ್ನು ಉಳಿಸಬಲ್ಲ ವಿಧಾನವನ್ನಷ್ಟೇ ನೀವು ಬಯಸಿದ್ದಿರಿ. 2012ರಲ್ಲಿ ನಿಮ್ಮ ನಿಧನ ಸುದ್ದಿಯಾದಾಗ ಐರಿಷ್ ಸಂವಿಧಾನದ ಎಂಟನೆ ತಿದ್ದುಪಡಿಯನ್ನು ಬದಲಿಸಲು ಎಲ್ಲೆಡೆಯಿಂದ ಒತ್ತಾಯ ಕೇಳಿಬಂತು” ಎಂದವರು ಹೇಳಿದ್ದಾರೆ.
Next Story





