ಬಿಜೆಪಿ ಸರಕಾರ ‘ಧರ್ಮವಿರೋಧಿ’: ಮಧ್ಯಪ್ರದೇಶದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಂಪ್ಯೂಟರ್ ಬಾಬಾ

ಭೋಪಾಲ್, ಅ.1: ಮಧ್ಯಪ್ರದೇಶ ರಾಜ್ಯದ ಸಚಿವರ ಸ್ಥಾನಮಾನ ನೀಡಿದ ಆರು ತಿಂಗಳ ನಂತರ ಇದೀಗ ಕಂಪ್ಯೂಟರ್ ಬಾಬಾ ಆಡಳಿತಾರೂಢ ಬಿಜೆಪಿ ಸರಕಾರ ಧರ್ಮವಿರೋಧಿ ಎಂಬ ಕಾರಣ ನೀಡಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನರ್ಮದಾ ನದಿಯಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಸರಕಾರವು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸ್ವಯಂ ಘೋಷಿತ ದೇವಮಾನವ ಆರೋಪಿಸಿದ್ದಾರೆ. ತಾನು ಈಗಾಗಲೇ ನರ್ಮದಾ ತೀರದಲ್ಲಿ ನಡೆಯುವ ಗಣಿಗಾರಿಕೆ ಬಗ್ಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗೆ ಮಾಹಿತಿ ನೀಡಿದ್ದೇನೆ. ಆದರೆ ಅವರು ತನ್ನ ಮಾತನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಕಂಪ್ಯೂಟರ್ ಬಾಬಾ ಹೇಳಿದ್ದಾರೆ.
ತಾನು ಸರಕಾರದ ಬಗ್ಗೆ ಅಸಮಾಧಾನ ಹೊಂದಿದ್ದೇನೆ. ಸಚಿವ ಸ್ಥಾನಮಾನ ಹೊಂದಿದ್ದರೂ ಸಂತರಿಗಾಗಿ ತನಗೆ ಏನೂ ಮಾಡಲು ಸಾಧ್ಯವಾಗಿಲ್ಲ. ಗೋವು ಸಚಿವಾಲಯ ಮಾಡಲು ಸರಕಾರ ಹೊರಟಿದೆ. ಆದರೆ ಗೋರಕ್ಷಣಾ ಮಂಡಳಿ ಗೋವುಗಳಿಗಾಗಿ ಏನೂ ಮಾಡಿಲ್ಲ. ಆದ್ದರಿಂದ ಪ್ರತ್ಯೇಕ ಸಚಿವಾಲಯವೊಂದರ ಅಗತ್ಯವಿಲ್ಲ ಎಂದವರು ಹೇಳಿದರು.
Next Story





