ಹಾವು ಕಡಿತ: ಯುವತಿ ಮೃತ್ಯು
ಕೋಟ, ಅ.1: ಕಕ್ಕುಂಜೆ ಎಂಬಲ್ಲಿ ಹುಲ್ಲು ಕೊಯ್ಯುತ್ತಿದ್ದ ವೇಳೆ ಹಾವು ಕಡಿತಕ್ಕೆ ಒಳಗಾಗಿ ಅಸ್ವಸ್ಥಗೊಂಡಿದ್ದ ಯುವತಿಯೊಬ್ಬಳು ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕಕ್ಕುಂಜೆಯ ರಮ್ಯ (19) ಎಂದು ಗುರುತಿಸಲಾಗಿದೆ. ಸೆ.22ರಂದು ಮನೆ ಸಮೀಪ ಹಸಿ ಹುಲ್ಲು ಕೊಯ್ಯುತ್ತಿದ್ದ ರಮ್ಯರ ಕಾಲಿಗೆ ಹಾವು ಕಚ್ಚಿತ್ತೆನ್ನ ಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ರಮ್ಯ ಸೆ.30ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





